For Quick Alerts
  ALLOW NOTIFICATIONS  
  For Daily Alerts

  ಲಕ್ಷ್ಮಿ ಸಾರಥ್ಯದ 'ನೀನಾ ನಾನಾ' ಕಾರ್ಯಕ್ರಮಕ್ಕೆ ಈವಾರ ತೆರೆ

  |

  ಸುವರ್ಣ ವಾಹಿನಿಯ ಜನಪ್ರಿಯ ಟಾಕ್ ಶೋ ಕಾರ್ಯಕ್ರಮ ಪಂಚಭಾಷಾ ತಾರೆ ಲಕ್ಷ್ಮಿ ಸಾರಥ್ಯದ 'ನೀನಾ? ನಾನಾ? ಕಾರ್ಯಕ್ರಮಕ್ಕೆ ನಾಳೆ ತೆರೆಬೀಳಲಿದೆ. ಕಾರ್ಯಕ್ರಮ ಈಗ ಅಂತಿಮ ಘಟ್ಟಕ್ಕೆ ಬಂದಿದ್ದು ಆಗಸ್ಟ್ ನಾಲ್ಕು ಮತ್ತು ಐದರಂದು ಗ್ರ್ಯಾಂಡ್ ಫಿನಾಲೆ ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ. ಜುಲೈ 23, 2012 ರಿಂದ ಈ ಕಾರ್ಯಕ್ರಮ ಆರಂಭವಾಗಿತ್ತು.

  ಅಂತಿಮ ಸಂಚಿಕೆಯು ವಿಶಿಷ್ಟ ರೀತಿಯಲ್ಲಿ ಮೂಡಿಬರಲಿದೆ. ಹಿರಿಯ ನಟಿಯರಾದ ಬಿ ಸರೋಜಾದೇವಿ ಮತ್ತು ಜಯಮಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ನಟ ಮತ್ತು ನಿರೂಪಕ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರೆ.

  ಇಷು ದಿನ ನಟಿ ಲಕ್ಷ್ಮಿಯವರು ಇತರರಿಗೆ ಪ್ರಶ್ತ್ನೆ ಕೇಳುತ್ತಿದ್ದರು. ಆದರೆ ಅಂತಿಮ ಸಂಚಿಕೆಯಲ್ಲಿ ಪ್ರೇಕ್ಷಕರೇ ಲಕ್ಷ್ಮಿ ಅವರಿಗೆ ಅವರ ವೈಯಕ್ತಿಕ ಜೀವನ ಮತ್ತು ಈ ಕಾರ್ಯಕ್ರಮದ ಅನುಭದ ಕುರಿತು ಪ್ರಶ್ತ್ನೆ ಗಳನ್ನು ಕೇಳಲಿದ್ದಾರೆ.

  ಇದುವರೆಗೆ ನೀನಾ ? ನಾನಾ? ಕಾರ್ಯಕ್ರಮ 104 ಸಂಚಿಕೆಗಳನ್ನು ಕಂಡಿದೆ. ಪ್ರತಿ ಸಂಚಿಕೆಯಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಸುಮಾರು 4600 ಮಂದಿ ಭಾಗವಹಿಸಿದ್ದರು. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಉತ್ತಮ ಜನಪ್ರಿಯತೆಯನ್ನು ಗಳಿಸಿತ್ತು.

  ಸ್ವಾಮೀಜಿಗಳು, ಪ್ರಗತಿಪರ ಹೋರಾಟಗಾರರು ಹೆಚ್ಚಿನ ಸಂಚಿಕೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ. ನಿರೂಪಕಿ ಲಕ್ಷ್ಮಿ ಪ್ರತಿ ಕಾರ್ಯಕ್ರಮದಲ್ಲಿ 44ಜನರ ವಾದವಿವಾದಗಳನ್ನು ಆಲಿಸಿ ಸಮತೋಲನದ ಮಾತು ಮತ್ತು ನಿರೂಪಣೆ ನಡೆಸಿಕೊಟ್ಟಿದ್ದರು.

  ಒಂದು ಹೊಸ ಸಮಾಜದ ಆಲೋಚನೆಗಳಿಗೆ ನೀನಾ ನಾನಾ ಕಾರ್ಯಕ್ರಮ ಇಂಬು ಕೊಟ್ಟಿದ್ದರೆ ನಮ್ಮೆಲ್ಲರ ಶ್ರಮ ಸಾರ್ಥಕ. ಈ ಕಾರ್ಯಕ್ರಮ ಸರಳ ವಿವಾಹಗಳಿಗೆ ಸ್ಪೂರ್ತಿಯಾಗಿದೆ. ಮೂಢ ನಂಬಿಕೆಗಳನ್ನು ದೂರಮಾಡಿದೆ. ಯಾವುದೇ ಗೊಂದಲವಿಲ್ಲದೆ ಸಂಚಿಕೆ ಮುಗಿಸಲಾಗುತ್ತಿತ್ತು. ಅದಕ್ಕಾಗಿ ಪ್ರತ್ಯೇಕ ರಿಸರ್ಚ್ ಟೀಮ್ ಇತ್ತು ಎನ್ನುತ್ತಾರೆ ವಾಹಿನಿಯ ಮುಖ್ಯಸ್ಥ ಅನೂಪ್ ಚಂದ್ರಶೇಖರ್.

  English summary
  The popular Reality talk Show Neena Naana in Suvarna TV comes to an end. The final two episode will be aired on August 4th and 5th at 9PM. Senior actress Lakshmi was hosting the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X