'ಲಕ್ಷ್ಮಿ ಬಾರಮ್ಮ' ಸೆಟ್‌ನಲ್ಲಿ ಏನ್ ನಡೀತಿದೆ? ಕೀರ್ತೀ ರೀ -ಎಂಟ್ರಿ.. ಫನ್ ಕಮ್ಮಿ..ಡ್ರಾಮನೇ ಜಾಸ್ತಿ
ಕಲರ್ಸ್ ಕನ್ನಡ ಮೋಸ್ಟ್ ಪಾಪುಲರ್ ಸೀರಿಯಲ್‌ಗಳಲ್ಲೊಂದು 'ಲಕ್ಷ್ಮಿ ಬಾರಮ್ಮ'. ಈಗಂತೂ ಈ ಸೀರಿಯಲ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್. ಕೀರ್ತಿ ಸತ್ತೇ ಹೋದಳು ಅಂತ ಅಂದ್ಕೊಂಡಿದ್ದ ವೀಕ್ಷಕರಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಕೀರ್ತಿ ಮತ್ತೆ ಪ್ರತ್ಯಕ್ಷ ಆಗಿದ್ದಾಳೆ. ಇಷ್ಟು ದಿನ ಕಾವೇರಿ ಹಾಗೂ ಲಕ್ಷ್ಮಿ ನಡುವೆ ನಡೆಯುತ್ತಿದ್ದ ಜಟಾಪಟಿ ಮತ್ತೆ ಕಾವೇರಿ ಹಾಗೂ ಕೀರ್ತಿಗೆ ಶಿಫ್ಟ್ ಆಗಿದೆ. ಇಷ್ಟೊಂದು ಇಂಟ್ರೆಸ್ಟಿಂಗ್ ಆಗಿರುವ ಸೆಟ್‌ಗೆ ಹೋಗಿ ಬಂದರೆ ಹೇಗಿರುತ್ತೆ?
ಈ ಸೀರಿಯಲ್ ಶೂಟಿಂಗ್ ನಡೆಯುತ್ತಿರುವ ಸೆಟ್‌ಗೆ ಫಿಲ್ಮಿಬೀಟ್ ಕನ್ನಡ ತಂಡ ವಿಸಿಟ್ ಹಾಕಿತ್ತು. ಆ ತಂಡದೊಂದಿಗೆ ಒಂದಿಷ್ಟು ಹೊತ್ತು ಮಜವಾಗಿ ಮಾತಾಡಿಕೊಂಡು ಬಂದಿದೆ. ಈ ವೇಳೆ ಸೀರಿಯಲ್ ಬಗ್ಗೆ, ಅವರ ಅನುಭವದ ಬಗ್ಗೆ ಎಲ್ಲಾ ಮಾತಾಡಿದ್ದಾರೆ. ಪ್ರೇಕ್ಷಕರ ಬೇಡಿಕೆ ಮೇರೆಗೆ ವಾಪಾಸ್ ಬಂದಿರುವ ಕೀರ್ತಿಯನ್ನೂ ಮಾತಾಡಿಸಿದ್ದಾರೆ. ಅವರೆಲ್ಲ ಏನು ಹೇಳಿದ್ದಾರೆ? ಈ ಕಲಾವಿದರು ಸೆಟ್‌ನಲ್ಲಿ ಹೇಗಿರುತ್ತಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಕೀರ್ತಿ ರೀ-ಎಂಟ್ರಿ
ಲಕ್ಷ್ಮಿ ಬಾರಮ್ಮ ಸೀರಿಯಲ್‌ಗೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದಕ್ಕೆ ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವ ತನ್ವಿರಾಮ್ ಏನಂತಾರೆ ಕೇಳಿ. "ತುಂಬಾನೇ ಖುಷಿಯಾಗುತ್ತಿದೆ. ಜನರು ಕೀರ್ತಿ ಯಾವಾಗ ಬರುತ್ತಾಳೆ ಅಂತ ಕೇಳ್ತಾರೆ ಅನ್ನೋದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ತರ ರೆಸ್ಪಾನ್ಸ್ ಬಂದಿರುವುದು ತುಂಬಾನೇ ಖುಷಿಯಿದೆ. ಬಂದಾಗ ಯಾವ ರೀತಿ ಪ್ರತಿಕ್ರಿಯೆ ಮಾಡಬಹುದು ಅನ್ನುವ ಕುತೂಹಲವಿದೆ" ಎನ್ನುತ್ತಾರೆ ತನ್ವಿರಾವ್.

"ಕೀರ್ತಿ ಬಂದಿದ್ದಕ್ಕೆ ಭಯ ಆಗ್ತಿದೆ"
ಇನ್ನು ಕೀರ್ತಿ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕಾವೇರಿ ಕೂಡ ಫಿಲ್ಮಿಬೀಟ್ ಜೊತೆ ಮಾತಿಗೆ ಸಿಕ್ಕಿದ್ದರು. "ತನ್ವಿ ಸೆಟ್ಟಿಗೆ ಬರುತ್ತಿರುವುದು ಕೇಳಿದರೆ ಖುಷಿಯಿದೆ. ಆದರೆ, ಕೀರ್ತಿಯಾಗಿ ಬರುತ್ತಿರುವುದು ಹೆದರಿಕೆಯಾಗುತ್ತಿದೆ. ಯಾಕಂದ್ರೆ ನಾನು ಮಾಡಿದ ಎಲ್ಲಾ ವಿಷಯಗಳು ಅವಳಿಗೆ ಗೊತ್ತಿದೆ. ಅವಳು ಬಂದು ಎಲ್ಲಾ ಹೇಳಿ ಬಿಡುತ್ತಾಳೆ. ಹೇಳಿದ ಮೇಲೆ ಮುಂದೆ ನನ್ನ ಕಥೆಯೇನು? ನಾನು ಇಲ್ಲೇ ಇರುತ್ತೇನಾ? ಅಥವಾ ನನ್ನನ್ನು ಎಲ್ಲಾದರೂ ತೆಗೆದುಕೊಂಡು ಹೋಗಿ ಹಾಕುತ್ತಾರಾ ಅಂತ. ಮುಂದೆ ಏನಾಗುತ್ತೆ ಅನ್ನೋದು ಗೊತ್ತಿಲ್ಲ. ಮುಂದೆ ಕಾದು ನೋಡಬೇಕು." ಎನ್ನುತ್ತಾರೆ ಕಾವೇರಿ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ನಾಣಯ್ಯ.
Image 4

"ಕಾವೇರಿಗೆ ಕಾನ್ಫಿಡೆನ್ಸ್ ಇದೆ"
ಇನ್ನು ಧಾರಾವಾಹಿಯಲ್ಲಿ ಕಾವೇರಿ ಸೀಕ್ರೆಟ್ ಕೀರ್ತಿಗೆ ಗೊತ್ತಿದೆ. ಅದನ್ನೇ ಇಟ್ಟುಕೊಂಡು ಆಟ ಆಡಿಸುತ್ತಿದ್ದಾಳೆ. ಆದರೆ, ಕಾವೇರಿಗೆ ಅದನ್ನೆಲ್ಲ ಎದುರಿಸುತ್ತೇನೆ ಅನ್ನೋದ ಕಾನ್ಫಿಡೆನ್ಸ್ ಇದೆ. "ಏನು ಮಾಡುವುದು. ಅವನಿಗಾಗಿ ಇಷ್ಟೆಲ್ಲ ಮಾಡಿದ್ದೇನೆ. ನನ್ನಿಂದ ನನ್ನ ಮಗ ದೂರ ಆಗಬಾರದು ಅಂತ ಇಷ್ಟೆಲ್ಲ ಮಾಡಿದೆ. ಈಗ ಇವಳು ಬಂದು ಎಲ್ಲಾ ಸತ್ಯ ಹೇಳ್ಬಿಟ್ರೆ ಅದಕ್ಕೆ ಇಷ್ಟೆಲ್ಲ ಮಾಡಿದೆ. ವೈಷ್ಣವ್ ಹಾಗೂ ಲಕ್ಷ್ಮಿ ಇಬ್ಬರೂ ದೂರ ಆಗಲ್ಲ. ಕಾವೇರಿಗೆ ಅಷ್ಟು ಕಾನ್ಫಿಡೆನ್ಸ್ ಇದೆ." ಎನ್ನುತ್ತಾರೆ ಸುಷ್ಮಾ ನಾಣಯ್ಯ.

"ಸೆಟ್‌ನಲ್ಲಿ ಫನ್ ಕಮ್ಮಿ..ಡ್ರಾಮ ಜಾಸ್ತಿ"
"ನಮ್ಮ ಸೆಟ್‌ನಲ್ಲಿ ಫನ್ ಸ್ವಲ್ಪ ಕಮ್ಮಿ. ಡ್ರಾಮ ಜಾಸ್ತಿಯಿದೆ. ನಮ್ಮ ಡೈರೆಕ್ಟರ್ ಬೈಯ್ಯೊದೇ ಫನ್ ಮೂವ್‌ಮೆಂಟ್. ನಾನು ಹೇಳ್ತಿರ್ತೀನಿ. ನೀವು ಉಗಿಯುತ್ತಿರುತ್ತೀರ. ನಾನು ಒರೆಸಿಕೊಳ್ಳುತ್ತಿರುತ್ತೇನೆ. ಅದೇ ಜಾಸ್ತಿ ಆಗ್ತಿರುತ್ತೆ" ಸುಪ್ರೀತಾ ಪಾತ್ರದಲ್ಲಿ ನಟಿಸುತ್ತಿರುವ ರಜನಿ ಭಾರತಿ ಹೇಳುತ್ತಾರೆ.
Image 5

ಏನಂತಾರೆ ಲಕ್ಷ್ಮಿ ಬಾರಮ್ಮ ಹೀರೋ?
"ಟ್ವಿಸ್ಟ್ ಅಂದರೆ ನಮಗೂ ಇದು ವಿಭಿನ್ನ. ಪ್ರತಿದಿನ, ಪ್ರತಿದಿನ ಟ್ವಿಸ್ಟ್ ಅಂಡ್ ಟರ್ನ್ ನಡೆಯುತ್ತಿದೆ. ನಮಗೂ ಶೂಟಿಂಗ್‌ಗೆ ಬಂದಾಗ ಏನಾದರೂ ನಡೆಯುತ್ತಿರುತ್ತೆ. ಇವತ್ತೇನು ನಡೆಯುತ್ತೆ ಅಂತ. ಚೆನ್ನಾಗಿ ನಡೆಯುತ್ತಿದೆ. ಜನರಿಂದಲೂ ಒಂದೊಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ನಮಗೆ ಇದೊಂದು ಸರ್ಪ್ರೈಸ್ ಅನಿಸುತ್ತಿದೆ. ಯಾಕಂದ್ರೆ, ಪ್ರತಿದಿನ ಬದಲಾವಣೆ ಕಾಣಿಸುತ್ತಿದೆ. ಮದುವೆ ಆಗಿದೆಯಲ್ಲ ಅದಕ್ಕೆ ಕೀರ್ತಿಯನ್ನೇನು ಮಿಸ್ ಮಾಡಿಕೊಂಡಿಲ್ಲ. ನಾವು ಎಷ್ಟೇ ಟ್ರೈ ಮಾಡಿದರೂ ಒಬ್ಬರು ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ, ಅವರನ್ನು ಬಿಟ್ಟುಬಿಡಬೇಕಂತೆ. ನಮ್ಮನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ ಅವರ ಜೊತೆ ಇದ್ದರೆ ಲೈಫ್ ಚೆನ್ನಾಗಿರುತ್ತಂತೆ. ವೈಷ್ಣವ್ ಪಾತ್ರದಲ್ಲಿ ನಟಿಸುತ್ತಿರುವ ಶಮಂತ್ ಬ್ರೋಗೌಡ ಹೇಳುತ್ತಾರೆ.


Click it and Unblock the Notifications











