ಥಿಯೇಟರ್‌ ಆಯ್ತು.. ಓಟಿಟಿ ಆಯ್ತು.. ಕನ್ನಡ ಕಿರುತೆರೆಯಲ್ಲಿ 'ಸಲಾರ್'; ಪ್ರಭಾಸ್ ಬಳಿಸಿದ ಬೈಕ್ ಗೆಲ್ಲೋ ಚಾನ್ಸ್!

ಪ್ರಭಾಸ್, ಶ್ರುತಿ ಹಾಸನ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾ 'ಸಲಾರ್' ಥಿಯೇಟರ್‌ನಲ್ಲಿ ಧೂಳೆಬ್ಬಿಸಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದರಿಂದ ತೆಲುಗು ಚಿತ್ರರಂಗಕ್ಕೆ ಪ್ರಭಾಸ್ ಮತ್ತೊಂದು ಮೆಗಾ ಹಿಟ್ ಸಿನಿಮಾ ಕೊಟ್ಟಿದ್ದರು.

'ಸಲಾರ್' ಥಿಯೇಟರ್‌ನಲ್ಲಿ ಅಬ್ಬರಿಸಿದ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆ ಸೇರಿ ಒಟ್ಟು ಐದು ಭಾಷೆಗಳಲ್ಲೂ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಒಂದೊಂದು ಭಾಷೆಯಲ್ಲೂ ಒಂದೊಂದು ರೀತಿ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರಮಂದಿರದಲ್ಲಿ, ಓಟಿಟಿಯಲ್ಲಿ ಸದ್ದು ಮಾಡಿದ ಬಳಿಕ ಈಗ ಕಿರುತೆರೆಯಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿ ನಿಂತಿದೆ.

Prabhas Prashanth Neel combination movie Salaar world premiere in star Suvarna

ಹೌದು, ಈ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ 'ಸಲಾರ್' ಸ್ಟಾರ್ ಸುವರ್ಣದಲ್ಲಿ ಇದೇ ವೀಕೆಂಡ್‌ನಲ್ಲಿ ರಿಲೀಸ್ ಆಗುತ್ತಿದೆ. ವಾರದ ಕೊನೆಯಲ್ಲಿ ತನ್ನ ವೀಕ್ಷಕರಿಗೆ ಮನರಂಜನೆಯನ್ನು ನೀಡುವ ಸಲುವಾಗಿ ಇದೇ ಭಾನುವಾರ (ಏಪ್ರಿಲ್ 28) ವರ್ಲ್ಡ್ ಪ್ರೀಮಿಯರ್ ಮಾಡುವುದಕ್ಕೆ ಹೊರಟಿದೆ.

ಈಗಾಗಲೇ ಸ್ಟಾರ್ ಸುವರ್ಣದಲ್ಲಿ ಕನ್ನಡದ ಸೂಪರ್‌ ಹಿಟ್ ಸಿನಿಮಾಗಳು ಪ್ರಸಾರ ಕಂಡಿವೆ. 'ಕಾಂತಾರ', 'ಹೊಯ್ಸಳ', 'ಜೇಮ್ಸ್'ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ವೀಕ್ಷಕರಿಗೆ ವೀಕೆಂಡ್‌ನಲ್ಲಿ ಮನರಂಜನೆಯನ್ನು ನೀಡಿದೆ. ಈಗ 2023ರಲ್ಲಿ ತೆರೆಕಂಡಿದ್ದ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ 'ಸಲಾರ್' ಸಿನಿಮಾವನ್ನು ಪ್ರಸಾರ ಮಾಡುವುದಕ್ಕೆ ಮುಂದಾಗಿದೆ.

ಥಿಯೇಟರ್‌ನಲ್ಲಿ, ಓಟಿಟಿಯಲ್ಲಿ ಈಗಾಗಲೇ 'ಸಲಾರ್' ಸಿನಿಮಾ ನೋಡಿರಬಹುದು. ಆದರೆ, ಕಿರುತೆರೆಯಲ್ಲಿ 'ಸಲಾರ್' ನೋಡಿದವರಿಗೆ ಸರ್ಪ್ರೈಸ್ ಇದೆ. ಈ ಸಿನಿಮಾದಲ್ಲಿ ಪ್ರಭಾಸ್ ಬಳಸಿದ ಬೈಕ್ ವೀಕ್ಷಕರಿಗೆ ಇಷ್ಟ ಆಗಿತ್ತು. ಕರ್ನಾಟಕದಲ್ಲೂ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿತ್ತು. ಇದೀಗ ಅದೇ ಬೈಕ್ ಅನ್ನು ಗೆಲ್ಲುವ ಅವಕಾಶ ನೋಡುಗರಿಗೆ ಸಿಗಲಿದೆ.

Prabhas Prashanth Neel combination movie Salaar world premiere in star Suvarna

'ಸಲಾರ್' ಸಿನಿಮಾ ಪ್ರಸಾರ ಆಗುವ ವೇಳೆ ಕೇಳಲಾಗುವ ಪ್ರಶ್ನೆಗಳಿಗೆ ಬೇಗ ಸರಿಯಾದ ಉತ್ತರ ಕೊಟ್ಟರೆ, ಅಂತಹ ಅದೃಷ್ಟಶಾಲಿ ವಿಜೇತರಿಗೆ ಪ್ರಭಾಸ್ ಬಳಸಿದ ಬೈಕ್ ಸಿಗಲಿದೆ. ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯು ನೀಡುತ್ತಿದೆ. ಈ ಸಂಸ್ಥೆ ಬೈಕ್ ಅನ್ನು ಬಹುಮಾನವಾಗಿ ನೀಡುತ್ತಿದೆ. ಹೀಗಾಗಿ ಇಡೀ ಸಿನಿಮಾ ನೋಡಿ ಉತ್ತರ ಕೊಟ್ಟು ಗೆದ್ದರೆ, ಆ ಬೈಕ್ ನಿಮ್ಮದಾಗಿಸಿ ಕೊಳ್ಳಬಹುದು.

ಇನ್ನು ಪ್ಯಾನ್ ಇಂಡಿಯಾದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇನ್ನು ಈ ಸಿನಿಮಾದ ಸೆಟ್ಟು, ಹಾಡುಗಳು, ಡೈಲಾಗ್, ಮಲ್ಟಿಸ್ಟಾರರ್ ಕಾಂಬಿನೇಷನ್ ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡಿತ್ತು. ಈ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಸಲಾರ್' ಏಪ್ರಿಲ್ 28ರಂದು ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ.

More from Filmibeat

English summary
Prabhas movie Salaar telecasting in Star Suvarna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X