'ಗೋಲ್ಡನ್ ಗ್ಯಾಂಗ್'ನಲ್ಲಿ ಪ್ರಜ್ವಲ್, ರಾಗಿಣಿ, ಮೇಘನಾ ರಾಜ್: ಅಗಲಿದ ಚಿರು ಸರ್ಜಾಗೆ ಅರ್ಪಣೆ

'ಗೋಲ್ಡನ್ ಗ್ಯಾಂಗ್' ವಿನೂತನ ಟಾಕ್ ಶೋನಲ್ಲಿ ತಾರೆಯರ ಗೆಳೆಯರನ್ನು ವೇದಿಕೆ ಮೇಲೆ ತರಲಾಗುತ್ತಿದೆ. ಚಡ್ಡಿ ಗ್ಯಾಂಗ್ , ತರ್ಲೆ ಗ್ಯಾಂಗ್ , ಪೋಲಿ ಗ್ಯಾಂಗ್ ಅನ್ನು ಇಲ್ಲಿವರೆಗೂ ಪರಿಚಯಿಸುತ್ತಾ ಬಂದಿದೆ. ಗೋಲ್ಡನ್ ಗ್ಯಾಂಗ್ ವೇದಿಕೆ ಏರಿದ ತಾರೆಯರೂ ಕೂಡ ತಮ್ಮ ಗೆಳೆತನದ ಬಗ್ಗೆ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸ್ನೇಹ ಬೆಳೆದಿದ್ದು, ಬಂಕ್ ಹೊಡೆದಿದ್ದು, ಬಿದ್ದಿದ್ದು ಎದ್ದಿದ್ದು, ಸೋತಿದ್ದು ಗೆದ್ದಿದ್ದರು ಎಲ್ಲಾವೂ ಅನಾವಣ ಆಗಿದೆ.

ಜೀ ಕನ್ನಡದಈ ವಿನೂತ ಟಾಕ್ ಶೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗೋಲ್ಡನ್‌ ಗ್ಯಾಂಗ್‌ನ ಮೊದಲ ಶೋನಿಂದ ಹಿಡಿದು ಇಲ್ಲಿವರೆಗೂ ಗೆಳೆಯರ ಮೋಜು ಮಸ್ತಿ ಮಸ್ತ್ ಆಗಿದೆ. ತಾರೆಯರ ಗೆಳೆಯರ ಬಳಗದ ಜರ್ನಿ ಸಖತ್ ಥ್ರಿಲ್ಲಿಂಗ್ ಆಗಿದೆ. ಈ ವಾರ ಗೋಲ್ಡನ್ ಗ್ಯಾಂಗ್‌ನಲ್ಲಿ ಚಿರಂಜೀವಿ ಸರ್ಜಾ ಅವರ ಗೆಳೆಯ ಬಳಗ ಭಾಗವಹಿಸಿದೆ. ಪತ್ನಿ ಮೇಘನಾ ರಾಜ್, ಪ್ರಜ್ವಲ್ ರಾಜ್, ರಾಗಿಣಿ ಪ್ರಜ್ವಲ್, ಪನ್ನಗಾಭರಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.

 'ಗೋಲ್ಡನ್ ಗ್ಯಾಂಗ್‌'ನಲ್ಲಿ ಚಿರು ಗೆಳೆಯರ ಬಳಗ

'ಗೋಲ್ಡನ್ ಗ್ಯಾಂಗ್‌'ನಲ್ಲಿ ಚಿರು ಗೆಳೆಯರ ಬಳಗ

ಈ ವಾರದ ಗೋಲ್ಡನ್ ಗ್ಯಾಂಗ್ ಕೊಂಚ ಡಿಫ್ರೆಂಟ್ ಆಗಿರುತ್ತೆ. ಇಲ್ಲಿವರೆಗೂ ಪ್ರಸಾರ ಆಗಿದ್ದ ಶೋನಲ್ಲಿ ಕಾಮಿಡಿ, ಮಸ್ತಿಯೇ ಹೆಚ್ಚಿತ್ತು. ಆದರೆ, ಈ ವಾರ ಭಾವನಾತ್ಮಕವಾಗಿರುತ್ತೆ. ರೊಮ್ಯಾಂಟಿಕ್ ಆಗಿರುತ್ತೆ. ಜೊತೆಗೆ ಹೊಟ್ಟು ಹುಣ್ಣಾಗಿಸುವಷ್ಟು ನಗು ಕೂಡ ಇರುತ್ತೆ. ಈ ವಾರ ಅತಿಥಿಗಳಾಗಿ 'ಗೋಲ್ಡನ್ ಗ್ಯಾಂಗ್‌'ಗೆ ಅಗಲಿದ ಚಿರಂಜೀವಿ ಸರ್ಜಾ ಗೆಳೆಯರ ಬಳಗ ಬಂದಿದೆ. ಚಿರಂಜೀವಿ ಸರ್ಜಾ ಜೊತೆ ಕಳೆದ ನೆನಪುಗಳನ್ನು ಮೆಲುಕು ಹಾಕಲಿದೆ. ಚಿರು ಪತ್ನಿ ಮೇಘನಾ, ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಹಾಗೂ ನಿರ್ದೇಶಕ ಪನ್ನಗಾಭರಣ ಹಳೆಯ ದಿನಗಳನ್ನು ನೆನಪಿಸಲಿದ್ದಾರೆ.

 ಚಿರು ನೆನೆದು ಮೇಘನಾ ಕಣ್ಣೀರು

ಚಿರು ನೆನೆದು ಮೇಘನಾ ಕಣ್ಣೀರು

ಈ ವಾರದ 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದ ಪ್ರೋಮೊವನ್ನು ಜೀ ಕನ್ನಡ ರಿಲೀಸ್ ಮಾಡಿದೆ. ಈ ಪ್ರೋಮೊ ಸಿಕ್ಕಾಪಟ್ಟೆ ಎಮೋಷನಲ್ ಆಗಿದೆ. ಚಿರಂಜೀವಿ ಸರ್ಜಾ ನೆನೆದು ಮೇಘನಾ ರಾಜ್ ಕಣ್ಣೀರು ಹಾಕಿರುವ ವಿಡಿಯೋ ನೋಡಿ ವೀಕ್ಷಕರ ಹೃದಯಗಳು ಕೂಡ ಭಾರವಾಗಿವೆ. ಗೋಲ್ಡನ್ ಗ್ಯಾಂಗ್‌ನಲ್ಲಿ ಮಾತಾಡುತ್ತಾ " ಇಷ್ಟು ದೊಡ್ಡ ಕುಟುಂಬವನ್ನು ನನಗಾಗಿ ಕಟ್ಟಿಕೊಟ್ಟು ಹೋಗಿದ್ದಾರೆ ಚಿರಂಜೀವಿ ಸರ್ಜಾ." ಎಂದು ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ. ಪ್ರಜ್ವಲ್ ದೇವರಾಜ ಕೂಡ " ಆ ಸ್ಥಾನವನ್ನು ಯಾರೂ ತುಂಬಲು ಸಾಧ್ಯನೇ ಇಲ್ಲ." ಎಂದು ಹೇಳಿದ್ದಾರೆ.

 ಪತ್ನಿ ರಾಗಿಣಿಗೆ ಕ್ಯಾಮರಾ ಮುಂದೆ ಸಿಹಿ ಮುತ್ತು

ಪತ್ನಿ ರಾಗಿಣಿಗೆ ಕ್ಯಾಮರಾ ಮುಂದೆ ಸಿಹಿ ಮುತ್ತು

ಈ ಬಾರಿ 'ಗೋಲ್ಡನ್ ಗ್ಯಾಂಗ್' ಖಂಡಿತಾ ಸ್ಪೆಷಲ್ ಆಗಿರುತ್ತೆ. ಯಾಕಂದ್ರೆ, ಕಣ್ಣೀರಿನ ಜೊತೆ ಅತಿಥಿಗಳ ಮಧುರ ಕ್ಷಣಗಳೂ ಕೂಡ ಇವೆ. ಇದೇ ವೇದಿಕೆ ಮೇಲೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಗೆ ಮತ್ತೆ ಪ್ರಪೋಸ್ ಮಾಡಿದ್ದಾರೆ. ಕ್ಯಾಮರಾ ಮುಂದೆನೇ ರಾಗಿಣಿಗೆ ಪ್ರಜ್ವಲ್ ದೇವರಾಜ್ ಸಿಹಿ ಮುತ್ತು ನೀಡಿದ್ದಾರೆ. ಈ ಕ್ಷಣಗಳು ಈ ಬಾರಿ 'ಗೋಲ್ಡನ್ ಗ್ಯಾಂಗ್‌'ನ ಹೈಲೈಟ್ ಎಂದು ಹೇಳಬಹುದು. ಇದರೊಂದಿಗೆ ಪ್ರಜ್ವಲ್ ದೇವರಾಜ್ ಹಾಗೂ ಪನ್ನಗಾಭರಣ ದೋಸ್ತಿಯ ಕಹಾನಿಗಳೂ ಕೂಡ ಅಷ್ಟೇ ಮಜಾ ನೀಡಲಿವೆ.

 ಸುಂದರ್ ರಾಜ್- ನಾಗಾಭರಣ ಎಂಟ್ರಿ

ಸುಂದರ್ ರಾಜ್- ನಾಗಾಭರಣ ಎಂಟ್ರಿ

ಈ ವಾರದ 'ಗೋಲ್ಡನ್ ಗ್ಯಾಂಗ್‌'ನಲ್ಲಿ ಸಾಕಷ್ಟು ಸರ್ಪ್ರೈಸ್ ಇವೆ. ಅವುಗಳಲ್ಲಿ ಕೆಲವನ್ನಷ್ಟೇ ರಿವೀಲ್ ಮಾಡಲಾಗಿದೆ. ಅದರಲ್ಲೊಂದು ಹಿರಿಯ ನಟ ಸುಂದರ್ ರಾಜ್ ಹಾಗೂ ಹಿರಿಯ ನಿರ್ದೇಶಕ ನಾಗಾಭರಣ ಎಂಟ್ರಿ. ಚಿರು ಗ್ಯಾಂಗ್ ಬಗ್ಗೆ ಮಾತಾಡುವುದಕ್ಕೆ ಸ್ಯಾಂಡಲವುಡ್‌ನ ಹಿರಿಯ ಕಲಾವಿದ ಹಾಗೂ ನಿರ್ದೇಶಕ ಕೂಡ ಬಂದಿದ್ದಾರೆ. ಇವರೆಲ್ಲರನ್ನೂ ಒಟ್ಟಿಗೆ ನೋಡುವುದೇ ಕಣ್ಣಗೆ ಹಬ್ಬ. ಎಲ್ಲಕ್ಕಿಂತ ಹೆಚ್ಚಾಗಿ ಇವರ ತರ್ಲೆ, ತುಂಟಾಗಳ ಮೂಲಕ ವೀಕ್ಷಕರನ್ನು ನಕ್ಕು ನಗಿಸಲು ಗೋಲ್ಡನ್ ಗ್ಯಾಂಗ್ ವೀಕೆಂಡ್‌ ಬರಲು ಸಜ್ಜಾಗುತ್ತಿದೆ.

More from Filmibeat

English summary
Prajwal Devaraj, wife Ragini Prajwal, Meghana Raj in Ganesh talk show Golden Gang in Zee Kannada. Ganesh reuniting with old friends in his new reality show Golden gang.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X