Don't Miss!
- Sports
ಫೆ.1ರಂದು ಸಚಿನ್, ಬಿಸಿಸಿಐನಿಂದ ಟಿ20 ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡಕ್ಕೆ ಸನ್ಮಾನ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- News
ಚಿಕ್ಕಬಳ್ಳಾಪುರದಲ್ಲಿ ಕುಷ್ಠರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಚಾಲನೆ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜೇನುಗೂಡು' ಧಾರಾವಾಹಿಯಲ್ಲಿ ಮದುವೆ ಸಂಭ್ರಮ: ಹೆಂಗೈತೆ ಪ್ರೀ ವೆಡ್ಡಿಂಗ್ ಫೋಟೊಶೂಟ್?
ಸ್ಟಾರ್ ಸುವರ್ಣದಲ್ಲಿ ವೀಕ್ಷಕರ ಗಮನ ಸೆಳೆಯುತ್ತಿರುವ ಕೌಟುಂಬಿಕ ಧಾರಾವಾಹಿ 'ಜೇನುಗೂಡು'. ಪ್ರತಿದಿನ ವಾರ ಈ ಧಾರಾವಾಹಿಯಲ್ಲಿ ಏನಾದರೂ ಟ್ವಿಸ್ಟ್‌ಗಳು ಎದುರಾಗುತ್ತವೆ. ಅದು ಇಡೀ ವಾರ ವೀಕ್ಷಕರನ್ನು ಹಿಡಿದಿಡುತ್ತೆ. ಮುಂದಿನವಾರ ಕೂಡ 'ಜೇನುಗೂಡು' ಕುಟುಂಬದಲ್ಲಿ ಮಸ್ತ್ ಮನರಂಜನೆ ಇರುತ್ತೆ. ಅದಕ್ಕೆ ಕಾರಣ ದಿಯಾ-ಶಶಾಂಕ್ ಮದುವೆ.
ಮಾಯಾ-ಕ್ರಿಶ್ ಜೊತೆಯಾಗಿದ್ದಾರೆ. ಇಬ್ಬರ ಗುರಿ ಒಂದೇ ದಿಯಾ - ಶಶಾಂಕ್ ಮದುವೆ ಮುರಿಯುವುದು. ದಿಯಾಳನ್ನು ಹಣದ ಆಸೆಗೆ ಮದುವೆಯಾಗಬೇಕು ಎಂಬ ದುರಾಲೋಚನೆ ಕ್ರಿಶ್‌ಗಿದೆ. ಶಶಾಂಕ್ ಮೇಲೆ ಪ್ರೀತಿ ಹುಟ್ಟಿರುವುದರಿಂದ ಈ ಮದುವೆ ಮುರಿಯುವುದಕ್ಕೆ ಮಾಯಾ ಸಜ್ಜಾಗಿದ್ದಾಳೆ. ಇವರ ಕುತಂತ್ರದ ನಡುವೆಯೂ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ.
ಶ್ರೀರಸ್ತು
ಶುಭಮಸ್ತು
ಖ್ಯಾತಿಯ
ರಾಧಾ
ಟೀಚರ್
ಬೋಲ್ಡ್
ಟೂರ್
ಹೇಗಿತ್ತು
ನೋಡಿ!
ಜೇನುಗೂಡಿನಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್
ಸ್ಟಾರ್ ಸುವರ್ಣದ 'ಜೇನುಗೂಡು' ಧಾರಾವಾಹಿ ವೀಕ್ಷಕರನ್ನು ಇಷ್ಟ ಆಗಿದೆ. ಅವರಿಗಾಗಿ ಕಲರ್‌ಫುಲ್ ಆದ ಎಪಿಸೋಡ್‌ಗಳನ್ನು ನೀಡಲು 'ಜೇನುಗೂಡು' ತಂಡ ಮುಂದಾಗಿದೆ. ಕಿರುತೆರೆಯಲ್ಲಿ ಹಿಂದೆಂದೂ ನೋಡಿರದ ಹಾಗೆ ದಿಯಾ ಹಾಗೂ ಶಶಾಂಕ್ ಇಬ್ಬರ ಫೋಟೊಶೂಟ್ ಮಾಡಲು ತಂಡ ಮುಂದಾಗಿದೆ. ಅದಕ್ಕೆ ಒಂದಿಷ್ಟು ತಯಾರಿಗಳನ್ನೂ ಮಾಡಿಕೊಂಡಿದೆ.
ಅಂದ್ಹಾಗೆ ಮದುವೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಡೆದರೂ, ಫೋಟೊಶೂಟ್ ಮಾತ್ರ ಮಾಡರ್ನ್ ಆಗಿರುತ್ತೆ ಅನ್ನುವುದಕ್ಕೆ ಈ ಫೋಟೊಗಳೇ ಸಾಕ್ಷಿ. ಧಾರಾವಾಹಿಯಲ್ಲಿ ನೇರವಾಗಿ ಮದುವೆಗೆ ಹೋಗುವ ತಂಡ ಇದೇ ಮೊದಲ ಬಾರಿಗೆ ಫೋಟೊಶೂಟ್ ಮಾಡಿದೆ. ಕಿರುತೆರೆಯಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಪಾರು
ಧಾರಾವಾಹಿಯಲ್ಲಿ
ಬಳಸಿದ
ಹೆಂಡತಿಯ
ಗುಲಾಮ
ಪದಕ್ಕೆ
ನೆಟ್ಟಿಗರ
ಆಕ್ರೋಶ..!
ಜವಳಿ ಮಾರಲು ಬಂದ ಹಿರಿಯ ನಟ ಉಮೇಶ್
'ಜೇನುಗೂಡು' ಹೇಳಿ ಕೇಳಿ ಉತ್ತರ ಕರ್ನಾಟಕ ಶೈಲಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ. ಈ ಕಾರಣಕ್ಕೆ ಶಶಾಂಕ್ ಮತ್ತು ದಿಯ ಉತ್ತರ ಕರ್ನಾಟಕ ಶೈಲಿಯಲ್ಲಿ ಪೇಟ, ಸೀರೆ ತೊಟ್ಟು ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಸೂಟ್ ಮತ್ತು ಗೌನ್ ಹಾಕಿ ಮಾಡರ್ನ್ ಲುಕ್ ಕೊಟ್ಟಿದ್ದಾರೆ. ಈ ಕಾರಣಕ್ಕೆ ಫ್ರಿ ವೆಡ್ಡಿಂಗ್ ಫೋಟೊಶೂಟ್ ಧಾರಾವಾಹಿಯಲ್ಲಿ ಹೇಗಿರುತ್ತೆ? ಅನ್ನುವ ಕುತೂಹಲವಂತೂ ಮೂಡಿದೆ.

'ಜೇನುಗೂಡು' ಧಾರಾವಾಹಿಯ ಮತ್ತೊಂದು ಆಕರ್ಷಣೆ ಹಿರಿಯ ನಟ ಉಮೇಶ್. ನಡುಕೋಟೆ ಮನೆಗೆ ಜವಳಿ ಮಾರಲು ವಿಶೇಷ ಪಾತ್ರದಲ್ಲಿ ಬರುತ್ತಿದ್ದಾರೆ. ನಟ ಉಮೇಶ್ ಎಂಟ್ರಿ 'ಜೇನುಗೂಡು' ಧಾರಾವಾಹಿಗೆ ಮತ್ತಷ್ಟು ಮೆರುಗು ನೀಡಿದೆ. ವಿನಾಯಕ್ ದಾದಾ ಮದುವೆ ಜವಳಿಗಾಗಿ ಎಷ್ಟು ಹಣ ಖರ್ಚು ಮಾಡ್ತಾರೆ? ಉಮೇಶ್ ಮದುವೆ ಸಂಭ್ರಮದಲ್ಲಿರುವವರಿಗೆ ಯಾವ ರೀತಿ ಜವಳಿ ಕೊಡ್ತಾರೆ? ಅನ್ನೋದೇ ಕುತೂಹಲ. ಇದೇ ಸೋಮವಾರದಿಂದ ಒಂದು ವಾರ ರಾತ್ರಿ 10ಕ್ಕೆ ಮದುವೆ ಸಂಭ್ರಮ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.
80ರ
ದಶಕದ
ಬ್ಯೂಟಿ:
ಕನಕಪುರ
ಬೋಲ್ಡ್
ನಟಿ
ಸಿನಿಮಾಗೆ
ಬರೋದು
ಯಾವಾಗ?