»   » ಈಟಿವಿ ಕನ್ನಡದಲ್ಲಿ ಹೊಚ್ಚ ಹೊಸ ಚಿತ್ರ ಪ್ರೇಮ್ ಅಡ್ಡ

ಈಟಿವಿ ಕನ್ನಡದಲ್ಲಿ ಹೊಚ್ಚ ಹೊಸ ಚಿತ್ರ ಪ್ರೇಮ್ ಅಡ್ಡ

Posted By:
Subscribe to Filmibeat Kannada

ಇದೇ ಮೊಟ್ಟ ಮೊದಲ ಬಾರಿಗೆ ಮಹೇಶ್ ಬಾಬು ನಿರ್ದೇಶನದ 'ಪ್ರೇಮ್ ಅಡ್ಡ' ಚಿತ್ರ ಕಿರುತೆರೆಯಲ್ಲಿ ಮೂಡಿಬರುತ್ತಿದೆ. ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರೇಮ್ ಹಾಗೂ ಕೃತಿ ಖರಬಂದ ಅಭಿನಯದ ಈ ಚಿತ್ರ ಭಾನುವಾರ (ಜೂ.16) ಸಂಜೆ 5 ಗಂಟೆಗೆ ಪ್ರಸಾರವಾಗುತ್ತಿದೆ.

"ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎಂಬ ಹಾಡು (ಬಳಿಕ ಏಳುಕೋಟೆ ಹುಡುಗಿ ಒಬ್ಳು...ಎಂದು ಬದಲಾಯಿತು) ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಾಡಿನ ವಿರುದ್ಧ ವಕೀಲ ಎನ್.ಪಿ.ಅಮೃತೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದರು.


ತಮಿಳಿನ ಯಶಸ್ವಿ ಚಿತ್ರ 'ಸುಬ್ರಹ್ಮಣ್ಯಪುರಂ' ಚಿತ್ರದ ರೀಮೇಕ್ ಇದಾಗಿದೆ. ಸೆನ್ಸಾರ್ ನಲ್ಲಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಲಾಗಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಈ ಚಿತ್ರದ ಆರು ಹಾಡುಗಳು ಸೂಪರ್ ಹಿಟ್ ಆಗಿವೆ. ಮೂಲಗಳ ಪ್ರಕಾರ ಚಿತ್ರ ಆರು ಕೋಟಿ ಗಳಿಸಿದೆ.

ತಮಿಳಿನ ಸುಬ್ರಹ್ಮಣ್ಯಪುರಂ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿತ್ತು. ಆದರೆ ರೀಮೇಕ್ ಪ್ರೇಮ್ ಅಡ್ಡ ಚಿತ್ರ ಎ ಸರ್ಟಿಫಿಕೇಟ್ ಪಡೆದಿದೆ. ಕನ್ನಡ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಚಿತ್ರದ ನಿರ್ಮಾಪಕರು ಮುರಳಿ ಕೃಷ್ಣ. (ಒನ್ಇಂಡಿಯಾ ಕನ್ನಡ)

English summary
Kannada film 'Prem Adda' very first time telecast on Etv Kannada on 16th June at 5 pm IST. Prem,Meka Murali Krishna and Kriti Kharbanda are in the lead roles of the film. The film is directed by Mahesh Babu and the film music is scored by V. Harikrishna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada