»   » 'ಪ್ರೇಮ್ ಅಡ್ಡ' ವಿರುದ್ಧ ತನಿಖೆಗೆ ಕೋರ್ಟ್ ಆದೇಶ

'ಪ್ರೇಮ್ ಅಡ್ಡ' ವಿರುದ್ಧ ತನಿಖೆಗೆ ಕೋರ್ಟ್ ಆದೇಶ

Posted By:
Subscribe to Filmibeat Kannada
'ಪ್ರೇಮ್ ಅಡ್ಡ' ಚಿತ್ರ ಮತ್ತೆ ವಿವಾದಕ್ಕೆ ಗುರಿಯಾಗಿದೆ. ಈ ಚಿತ್ರದಲ್ಲಿನ ಹಾಡು "ಏಳುಕೋಟೆ ಹುಡುಗಿ ಒಬ್ಳು..." (ಮೊದಲು ಮೇಲುಕೋಟೆ ಎಂಬು ಬಳಸಲಾಗಿತ್ತು)ಯಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂದು ದಾಖಲಾಗಿತ್ತು. ಈ ಸಂಬಂಧ ಚಿತ್ರತಂಡದ ವಿರುದ್ಧ ತನಿಖೆ ನಡೆಸಬೇಕು ಎಂದು 9ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಪ್ರೇಮ್ ಅಡ್ಡ ಹಾಡಿನ ವಿರುದ್ಧ ವಕೀಲ ಎನ್.ಪಿ.ಅಮೃತೇಶ್ ಅವರು ಖಾಸಗಿ ದೂರು ಸಲ್ಲಿಸಿದ್ದರು. ಅವರ ದೂರನ್ನು ಆಲಿಸಿದ ನ್ಯಾಯಾಲಯ ಚಿತ್ರತಂಡದ ವಿರುದ್ಧ ತನಿಖೆ ನಡೆಸಿ ಏ.18ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಈ ಹಾಡಿಗೆ ಕಾರಣಕರ್ತರಾದ ಚಿತ್ರದ ನಿರ್ಮಾಪಕ ಮುರಳಿಕೃಷ್ಣ, ನಿರ್ದೇಶಕ ಮಹೇಶ್ ಬಾಬು, ಗೀತ ರಚನೆಕಾರ ಮಳವಳ್ಳಿ ಸಾಯಿಕೃಷ್ಣ, ಗಾಯಕ ರಾಜು ತಾಳಿಕೋಟೆ, ಸಂಗೀತ ನಿರ್ದೇಶಕ ಹರಿಕೃಷ್ಣ, ಆನಂದ್ ಆಡಿಯೋ ಮಾಲೀಕ ಮೋಹನ್ ಛಾಬ್ರಿಯಾ ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಈ ಹಿಂದೆಯೇ ದೂರು ದಾಖಲಾಗಿದ್ದರೂ ಕ್ರಮಕೈಗೊಳ್ಳದ ಉಪ್ಪಾರಪೇಟೆ ಪೊಲೀಸರ ಮೇಲೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್‌ ಮಿರ್ಜಿ ನೇತೃತ್ವದಲ್ಲಿ ತಂಡ ರಚಿಸಿ ವಿಚಾರಣೆ ನಡೆಸುವಂತೆ ಸೂಚಿಸಿ ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿದೆ.

ಪ್ರೇಮ್ ಅಡ್ಡ ಚಿತ್ರದ ಹಾಡಿನಲ್ಲಿ ಮಹಿಳೆಯರು ಮತ್ತು ಹಿಂದೂಧರ್ಮದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ ಎ, 260, 294, 499, 503 ಹಾಗೂ 204 ಅಡಿ ದೂರು ದಾಖಲಿಸಲಾಗಿದೆ. (ಏಜೆನ್ಸೀಸ್)

English summary
Mahesh Babu directed Kannada film Prem Adda has to face legal problem because of the vulgarity in the lyrics of a song in the flick. According to the complaint, the song 'Melukote Hudgi Oblu' written by Malavalli Saikrishna, has hurt the religious sentiments.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada