Bigg Boss Kannada 11: ಬಿಗ್‌ಬಾಸ್ ಮನೆಯೊಳಗೆ ಹೋಗೋದ್ಯಾರು? ಸಂಭಾವನೀಯ ಹೊಸ ಪಟ್ಟಿ ಇಲ್ಲಿದೆ
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಆರಂಭ ಆಗಲಿದೆ. ಇದೇ ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಆಗುತ್ತಿದೆ.
ಬಿಗ್‌ಬಾಸ್ ನೋಡಬೇಕು ಅಂತ ತುದಿಗಾಲಲ್ಲಿ ವೀಕ್ಷಕರು ನಿಂತಿದ್ದಾರೆ. ಕೆಲವು ದಿನಗಳಿಂದ ನಿರೂಪಕ ಕಿಚ್ಚ ಸುದೀಪ್ ಈ ಬಾರಿಯ ಬಿಗ್ ಬಾಸ್ ನಡೆಸಿ ಕೊಡುವುದಿಲ್ಲ ಅಂತ ಸುದ್ದಿ ಹಬ್ಬಿತ್ತು. ಆದ್ರೀಗ ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಪ್ರೋಮೊ ಶೂಟ್ ಮಾಡಿರುವ ಮೇಕಿಂಗ್ ವಿಡಿಯೋಗಳನ್ನು ರಿಲೀಸ್ ಮಾಡಿತ್ತು.

ಬಿಗ್‌ಬಾಸ್ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಕನ್ಫರ್ಮ್ ಆಗುತ್ತಿದ್ದಂತೆ ಮನೆಯೊಳಗೆ ಪ್ರವೇಶ ಮಾಡಲಿರುವ ಸ್ಪರ್ಧಿಗಳ ಪಟ್ಟಿ ಬಗ್ಗೆ ಚರ್ಚೆಯಾಗುತ್ತಿದೆ. ಬಿಗ್‌ಬಾಸ್ ಕನ್ನಡ 11 ರಿಯಾಲಿಟಿ ಶೋನ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.
ಚೈತ್ರಾ ಕುಂದಾಪುರ
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದು ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಬಹುದೆಂದು ಚರ್ಚೆಯಾಗುತ್ತಿದೆ. ಕೆಲವು ತಿಂಗಳ ಹಿಂದೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಆರೆಸ್ಟ್ ಆಗಿದ್ದರು. 1.5 ಕೋಟಿ ರೂಪಾಯಿ ವಂಚನೆ ಆರೋಪದಡಿ ಬಂಧಿಸಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಅವಿನಾಶ್ (ಜೂನಿಯರ್ ದರ್ಶನ್)
ಜೂನಿಯರ್ ದರ್ಶನ್ ಅಂತಲೇ ಜನಪ್ರಿಯರಾಗಿರುವ ಅವಿನಾಶ್ ಬಗ್ಗೆನೂ ಚರ್ಚೆಯಾಗುತ್ತಿದೆ. ಈ ಬಾರಿ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಲಿರುವ ಸ್ಪರ್ಧಿಯ ಪಟ್ಟಿಯಲ್ಲಿ ಅವಿನಾಶ್ ಕೂಡ ಇದ್ದಾರೆ.
ಪವಿ ಪಡುಕೋಣೆ
ಫಿಟ್ನೆಸ್ ಮಾಡಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಪವಿ ಪಡುಕೋಣೆ ಬಿಗ್‌ಬಾಸ್ ಫೇವರಿಟ್ ಎನ್ನಲಾಗಿದೆ. ತಮ್ಮ ಫಿಟ್ನೆಸ್ ಹಾಗೂ ಗ್ಲಾಮರ್ ಲುಕ್‌ನಿಂದ ಪವಿ ಪಡುಕೋಣೆ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಕರಣ್ ಕೆಆರ್
ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸುತ್ತಿರುವ ಕರಣ್ ಕೂಡ ಬಿಗ್‌ಬಾಸ್ ಲಿಸ್ಟ್‌ನಲ್ಲಿ ಇದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕರಣ್ ಬಿಗ್ ಬಾಸ್‌ಗೆ ಹೋಗಬಹುದೆಂಬ ಚರ್ಚೆ ನಡೆಯುತ್ತಿದೆ.

ಅನುಷಾ ರೈ
ಖಡಕ್, ಅಬ್ಬಬ್ಬ ಅಂತಹ ಸಿನಿಮಾಗಳಲ್ಲಿ ನಟಿಸಿರುವ ಅನುಷಾ ರೈ ಹೆಸರು ಕೂಡ ಓಡಾಡುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಅನುಷಾ ರೈ ಒಪ್ಪಿದರೆ, ಸ್ಪರ್ಧಿಯಾಗಿ ಪ್ರವೇಶ ಮಾಡಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಕೆಜಿಎಫ್ ಬಾಬು
ಉದ್ಯಮಿ ಹಾಗೂ ರಾಜಕಾರಣಿ ಕೆಜಿಎಫ್ ಬಾಬು ಹೆಸರು ಬಿಗ್‌ಬಾಸ್‌ಗೆ ಬರಬಹುದೆಂದು ಕೇಳಿ ಬರುತ್ತಿದೆ. ಕೆಜಿಎಫ್ ಬಾಬು ಕರ್ನಾಟಕದ ಶ್ರೀಮಂತ ರಾಜಕಾರಣಿ ಎಂದೇ ಜನಪ್ರಿಯರಾಗಿದ್ದಾರೆ. ಆದರೆ, ಇವರನ್ನು ಸಂಪರ್ಕ ಮಾಡಲಾಗಿದೆಯೇ..? ಅವರು ಗ್ರೀನ್ ಸಿಗ್ನಲ್ ಕೊಡುತ್ತಾರಾ? ಅನ್ನೋ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.
ನಟಿ ಪ್ರೇಮಾ
ಸ್ಯಾಂಡಲ್‌ವುಡ್ ಸ್ಟಾರ್ ನಟಿ ಪ್ರೇಮಾ ಹೆಸರು ಕೂಡ ಕಳೆದೆರಡು ದಿನಗಳಿಂದ ಓಡಾಡುತ್ತಿದೆ. 'ಮಹಾನಟಿ' ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಈ ನಟಿ, ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋಗೂ ಅಪ್ರೋಚ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಮೂಲ್ಯಾ ಭಾರದ್ವಾಜ್
ಕಿರುತೆರೆಯ ಮತ್ತೊಬ್ಬ ಜನಪ್ರಿಯ ನಟಿ ಅಮೂಲ್ಯಾ ಭಾರದ್ವಾಜ್. 'ದಾಸ ಪುರಂದರ' ಹಾಗೂ 'ಬೃಂದಾವನ'ದಲ್ಲಿ ನಟಿಸಿದ್ದಾರೆ. ಈ ನಟಿಯ ಹೆಸರು ಕೂಡ ಬಿಗ್‌ಬಾಸ್ ಪ್ರವೇಶಿಸಲಿರುವ ಸಂಭಾವ್ಯ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ.
ಮತ್ತೆ ಯಾರೆಲ್ಲ ಹೋಗಬಹುದು?
ಇವರೊಂದಿಗೆ ಪತ್ರಕರ್ತರ ವಲಯದಿಂದ ನಿರೂಪಕ ಹರೀಶ್ ನಾಗರಾಜು, ಕಳೆದ ಬಾರಿಯ ಸ್ಪರ್ಧಿ ತುಕಾಲಿ ಸಂತೋಷ್ ಪತ್ನಿ ಮಾನಸ, ಹುಲಿ ಕಾರ್ತಿಕ್, ಐಶ್ವರ್ಯಾ ರಂಗರಾಜನ್, ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ತ್ರಿವಿಕ್ರಮ್, ಸುಕೃತಾ ನಾಗ್, ಗೌತಮಿ ಜಾಧವ್, ಭವ್ಯಾ ಗೌಡ, ದೀಪಕ್ ಗೌಡ, ಗೌರವ ಶೆಟ್ಟಿ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ಲೇಖಿ ಗೋಸ್ವಾಮಿ ಹೆಸರುಗಳು ಕೂಡ ಹೇಳಿ ಬರುತ್ತಿದೆ. ಆದರೆ, ಇದ್ಯಾವುದೂ ಅಧಿಕೃತವಲ್ಲ. ಕೇವಲ ಕಿರುತೆರೆಯಲ್ಲಿ ಕೇಳಿ ಬರುತ್ತಿರುವ ಹೆಸರುಗಳಷ್ಟೇ.


Click it and Unblock the Notifications











