BBK 12: ಕಿಚ್ಚ ಸುದೀಪ್ ಅವರಲ್ಲಿರುವ ಕಳಪೆ ಗುಣ ಯಾವುದು? ಪತ್ನಿ ಪ್ರಿಯಾ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ನಿನ್ನೆ ( ಅಕ್ಟೋಬರ್ 18) ಮೊದಲ ಫಿನಾಲೆ ನಡೆದಿದೆ. ಇಂದು (ಅಕ್ಟೋಬರ್ 19) ಗ್ರ್ಯಾಂಡ್ ಲಾಂಚ್ ಆಗುತ್ತಿದೆ. ಈ ವೇದಿಕೆ ಮೇಲೂ ವೀಕ್ಷಕರಿಗೆ ಒಂದರ ಹಿಂದೊಂದು ಟ್ವಿಸ್ಟ್‌ಗಳನ್ನು ಕೊಡಲಾಗಿದೆ. ಆದರೆ, ಈ ಬಾರಿ ಕಿಚ್ಚ ಸುದೀಪ್‌ಗೇ ಸರ್ಪ್ರೈಸ್ ಕೊಟ್ಟಿದ್ದು ಇಂದಿನ ಎಪಿಸೋಡ್‌ನ ಹೈಲೈಟ್. ಇದರೊಂದಿಗೆ ಮೂರು ಮಂದಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು, ಹೊಸ ಅಧ್ಯಾಯ ಶುರುವಾಗಿದೆ.
ಈ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಕಳೆದ 12 ಸೀಸನ್‌ಗಳಿಂದ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಯೊಂದು ಸೀಸನ್‌ನಲ್ಲೂ ಕಿಚ್ಚ ಸುದೀಪ್‌ಗೆ ಒಂದೊಂದಲ್ಲ ಒಂದು ಟ್ವಿಸ್ಟ್ ಅನ್ನು ಕೊಡುತ್ತಲೇ ಇದ್ದಾರೆ. ಈ ಬಾರಿ ಕೂಡ ಕಿಚ್ಚನಿಗೆ ಬಿಗ್ ಬಾಸ್ ಸಖತ್ ಆಗಿರೋ ಅಚ್ಚರಿಯೊಂದನ್ನು ಕೊಟ್ಟಿದ್ದಾರೆ. ಇದು ಕಿಚ್ಚನಿಗಷ್ಟೇ ಅಲ್ಲ, ಅವರ ಅಭಿಮಾನಿಗಳಿಗೆ, ವೀಕ್ಷಕರಿಗೂ ಖುಷಿ ಕೊಟ್ಟಿದೆ.

ಕಿಚ್ಚ ಸುದೀಪ್‌ಗೆ ಈ ದಿನ ಎರಡು ಕಾರಣಕ್ಕೆ ಸ್ಪೆಷಲ್. ಅದರಲ್ಲಿ ಒಂದು ಇಂದು ಸುದೀಪ್ ಅವರ 24ನೇ ವಿವಾಹ ವಾರ್ಷಿಕೋತ್ಸವ. ಹೀಗಾಗಿ ವೇದಿಕೆ ಮೇಲೆ ಪ್ರಿಯಾ ಅವರನ್ನು ಕರೆಸಿ ಕಿಚ್ಚನಿಗೆ ಸರ್ಪ್ರೈಸ್ ಕೊಟ್ಟಿದ್ದರು. ಈ ವೇಳೆ ಕಿಚ್ಚ ದಂಪತಿಗೆ ಚಿಕ್ಕದೊಂದು ಟಾಸ್ಕ್ ಕೊಟ್ಟಿದೆ. ಈ ಟಾಸ್ಕ್‌ನಲ್ಲಿ ಕಿಚ್ಚನಲ್ಲಿರುವ ಒಂದು ಕಳಪೆ ಗುಣವೇನು ಎಂದು ಬಿಗ್ ಬಾಸ್ ಪ್ರಿಯಾ ಸುದೀಪ್ ಅವರಲ್ಲಿ ಕೇಳಿದ್ದರು. ಅದಕ್ಕೆ ಪ್ರಿಯಾ ಕೊಟ್ಟ ಉತ್ತರವೇನು? ಅಂತ ತಿಳಿಯುವುದಕ್ಕೆ ಮುಂದೆ ಓದಿ.
ವೇದಿಕೆ ಕಿಚ್ಚನ 24ನೇ ವಿವಾಹ ವಾರ್ಷಿಕೋತ್ಸವ
ಹೌದು, ಕಿಚ್ಚ ಸುದೀಪ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ 24 ವರ್ಷಗಳಾಗಿವೆ. ಪ್ರಿಯಾ ಸುದೀಪ್ ಅವರೊಂದಿಗೆ 24 ವರ್ಷಗಳ ಕಾಲ ಸುಖ ಜೀವನ ನಡೆಸಿದ್ದಾರೆ. ಅದೀಗ 25ನೇ ವಸಂತಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಬಿಗ್ ಬಾಸ್ ವೇದಿಕೆ ಮೇಲೆ ಆಚರಿಸಲಾಗಿತ್ತು. ವೇದಿಕೆ ಮೇಲೆ ಪ್ರಿಯಾ ಅವರನ್ನು ಸರ್ಪ್ರೈಸ್ ಎಂಟ್ರಿ ಕೊಡಿಸಲಾಗಿತ್ತು. ಸೆಲೆಬ್ರೆಟಿಗಳಿಂದ ವಿಶ್ ಮಾಡಿಸಿದ್ದರು. ಸುದೀಪ್ ತಂದೆ ಸರೋವರ್ ಸಂಜೀವ್ ಸೊಸೆ ಬಗ್ಗೆ ಭಾವುಕರಾಗಿ ಗುಣಗಾನ ಮಾಡಿದರು.
ಕಿಚ್ಚನಲ್ಲಿರುವ ಕಳಪೆ ಗುಣವೇನು?
24ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸುವ ವೇಳೆ ಚಿಕ್ಕೊಂದು ಟಾಸ್ಕ್ ಇಡಲಾಗಿತ್ತು. ಅದರಲ್ಲಿ ಒಂದು ಕಿಚ್ಚ ಹಾಗೂ ಪ್ರಿಯಾ ಸುದೀಪ್ ಅವರಲ್ಲಿರುವ ಒಳ್ಳೆಯ ಹಾಗೂ ಕಳಪೆ ಗುಣವೇನು? ಅನ್ನೋ ಟಾಸ್ಕ್ ಕೊಟ್ಟಿದ್ದರು. ಕಿಚ್ಚ ಸುದೀಪ್ ಪತ್ನಿಯ ಒಳ್ಳೆಯ ಗುಣಗಳನ್ನು ಹೊಗಳಿ ಕೊಂಡಾಡಿದರು. ಇತ್ತ ಪ್ರಿಯಾ ಸುದೀಪ್ ಕೂಡ ಕಿಚ್ಚನ ಒಳ್ಳೆಯ ಗುಣವನ್ನು ಹೊಗಳಿದರು. ಇನ್ನು ಕಳೆಪೆ ಗುಣವೇನು ಅಂತ ಬಂದಾಗ, ಸುದೀಪ್ ಯಾವುದಕ್ಕೆ ಕಾಂಪ್ಲಿಮೆಂಟ್ ಮಾಡುವುದಿಲ್ಲ. ನಿದ್ದೆ ಮಾಡುವುದಿಲ್ಲ. ಅವರ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ನಮ್ಮ ಮಾತು ಕೇಳುವುದಿಲ್ಲ. ಅದೇ ಅವರ ಕಳಪೆ ಗುಣ. 24 ವರ್ಷ ಇದ್ದೀನಿ ಅಂದರೆ, ಅದೇ ಅವರ ಒಳ್ಳೆಯ ಗುಣ ಎಂದು ಹೇಳಿದ್ದರು.

ಹಾಡು ಹಾಡಿದ ಪ್ರಿಯಾ ಸುದೀಪ್
ಕಿಚ್ಚ ಸುದೀಪ್ ಹಾಡುಗಾರಿಕೆ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಹಾಡುವುದು ಅಂದರೆ ಅವರಿಗೆ ಬಲು ಇಷ್ಟ. ಕೆಲವು ಸಿನಿಮಾಗಳಿಗೆ ಅವರು ಹಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರು ವೇದಿಕೆ ಹಾಡಿರುವುದನ್ನು ನೋಡಿದ್ದು ತೀರಾ ವಿರಳ. 24ನೇ ವಿವಾಹವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಸುದೀಪ್ ಪತ್ನಿ ಪ್ರಿಯಾ ಕನ್ನಡ ಹಾಡು ಹಾಡಿದರೆ, ಕಿಚ್ಚ ಮಲಯಾಳಂ ಹಾಡು ಹಾಡಿ ರಂಜಿಸಿದರು. ಇಂದಿನ (ಅಕ್ಟೋಬರ್ 19) ಎಪಿಸೋಡ್‌ನ ಬೆಸ್ಟ್ ಮೂವ್ಮೆಂಟ್‌ಗಳಲ್ಲಿ ಇದೂ ಒಂದಾಗಿತ್ತು. ಇನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದಾಗ, ಪ್ರಿಯಾ ಅವರೇ ಮತ್ತೆ ಒಪ್ಪಿಕೊಳ್ಳುವಂತೆ ಮಾಡಿದ್ದಾಗಿ ಸರೋವರ್ ಸಂಜೀವ್ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.


Click it and Unblock the Notifications











