ಓಟಿಟಿ ಆಯ್ತು.. ಕಿರುತೆರೆಯಲ್ಲಿ ಅಪ್ಪು ಸಿನಿಮಾ: ಮತ್ತೆ ದೇವರ ದರ್ಶನ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ರಿಲೀಸ್ ಆಗಿದೆ. ಅಪ್ಪು ಅಭಿಮಾನಿಗಳು ಹಾಗೂ ಕನ್ನಡಿಗರು ಥಿಯೇಟರ್‌ನಲ್ಲಿ ಪುನೀತ್ ರಾಜ್‌ಕುಮಾರ್ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ಕರ್ನಾಟಕದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲುವ ಮುನ್ನ ನಟಿಸುತ್ತಿದ್ದ ಮೂರು ಸಿನಿಮಾಗಳಲ್ಲಿ 'ಲಕ್ಕಿ ಮ್ಯಾನ್' ಕೂಡ ಒಂದು. ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರೋ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Puneeth Rajkumar Starrer Lucky Man Telecasting In Star Suvarna November 13th

ಕೆಲವು ತಿಂಗಳ ಹಿಂದಷ್ಟೇ 'ಲಕ್ಕಿ ಮ್ಯಾನ್' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಆಗ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ದೇವರ ರೂಪದಲ್ಲಿ ಕಂಡು ಭಾವುಕರಾಗಿದ್ದರು. ಇದೇ ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಿತ್ತು. ಈಗ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.

ಅಪ್ಪು ದೇವರ ರೂಪದಲ್ಲಿ ಕಾಣಿಸಿಕೊಂಡ ಸಿನಿಮಾ 'ಲಕ್ಕಿ ಮ್ಯಾನ್' ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ. ಒಂದರ ಹಿಂದೆ ಒಂದರಂತೆ ಸೂಪರ್ ಡೂಪರ್ ಹಿಟ್ ಮೂವಿಗಳನ್ನು ಪ್ರಸಾರ ಮಾಡಿರುವ ಸ್ಟಾರ್ ಸುವರ್ಣ ಇದೀಗ 'ಲಕ್ಕಿಮ್ಯಾನ್' ಸಿನಿಮಾವನ್ನು ಪ್ರಸಾರ ಮಾಡಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

'ಲಕ್ಕಿ ಮ್ಯಾನ್' ಸಿನಿಮಾದ ಹೈಲೈಟ್ ಅಂದರೇನೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ದೇವರ ರೂಪದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಅಪ್ಪು ಜೊತೆಗೆ ಸಾಧು ಕೋಕಿಲ ಕೂಡ ನಟಿಸಿದ್ದು, ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಸೀನ್‌ಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿವೆ.

Puneeth Rajkumar Starrer Lucky Man Telecasting In Star Suvarna November 13th

ನಗುಮುಖದ ರಾಜಕುಮಾರ ಪುನೀತ್ ರಾಜ್‌ಕುಮಾರ್ ನಗು ಈ ಸಿನಿಮಾಗೂ ಹೈಲೈಟ್. ಸದಾ ನಗುತ್ತಾ ಪುನೀತ್ ಲವಲವಿಕೆಯಿಂದ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ, ಅಪ್ಪು ಹಾಗೂ ಪ್ರಭುದೇವ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಅದ್ಭುತ ಡಾನ್ಸ್. ಇದು ಈಗಾಗಲೇ ವೀಕ್ಷಕರಿಗೆ ಕಿಕ್ ಕೊಟ್ಟಿದೆ.

ಅಸಲಿಗೆ ಇಲ್ಲಿ 'ಲಕ್ಕಿ ಮ್ಯಾನ್' ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಸಂಗೀತ ಶೃಂಗೇರಿ. ಅಪ್ಪು ಜೊತೆ ಈ ಜೋಡಿಯ ನಟನೆಗೂ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದು, ಸ್ಟಾರ್ ಸುವರ್ಣದಲ್ಲಿ 'ಲಕ್ಕಿಮ್ಯಾನ್' ಇದೇ ಭಾನುವಾರ (ನವೆಂಬರ್ 13) ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

More from Filmibeat

English summary
Puneeth Rajkumar Starrer Lucky Man Telecasting In Star Suvarna November 13th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X