'ಪುಟ್ಟಗೌರಿ ಮದುವೆ' ಶೂಟಿಂಗ್ ನಲ್ಲಿ ಅವಘಡ: ಕೂದಲೆಳೆ ಅಂತರದಿಂದ ಮಹೇಶ ಪಾರು.!
Recommended Video

'ಪುಟ್ಟಗೌರಿ ಮದುವೆ' ಧಾರಾವಾಹಿ ಶುರುವಾಗಿ ವರ್ಷಗಳೇ ಉರುಳಿವೆ. 'ಪುಟ್ಟಗೌರಿ' ದೊಡ್ಡಗೌರಿ ಆಗಿದ್ದಾಯ್ತು, ಮಹೇಶ ಬೇರೆ ಮದುವೆ ಆಗಿದ್ದೂ ಆಯ್ತು. ಆದರೂ ಸೀರಿಯಲ್ ಗೆ ಇನ್ನೂ ಕ್ಲೈಮ್ಯಾಕ್ಸ್ ಬಂದಿಲ್ಲ.!
ಪುಟ್ಟಗೌರಿಗೆ ಕ್ಯಾನ್ಸರ್ ಬಂತು.. ಕಾಡಿಗೆ ಹೋಗಿ ಪುಟ್ಟಗೌರಿ ಪವಾಡ ಮಾಡಿದಳು.. ಪುಟ್ಟಗೌರಿ ಕಿಡ್ನ್ಯಾಪ್ ಆದಳು.. ಇಷ್ಟೆಲ್ಲ ಆದರೂ ಗೌರಿಯ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ.
ಗೌರಿ-ಮಹೇಶನನ್ನ ಸೀರಿಯಲ್ ನಿರ್ದೇಶಕರು ಒಂದು ಮಾಡುವ ಹಾಗೆ ಕಾಣುತ್ತಿಲ್ಲ. ಹೀಗಾಗಿ, ಮಧ್ಯೆ ಮಧ್ಯೆ ಬೇಡದ ತಿರುವುಗಳನ್ನು ತರುತ್ತಿದ್ದಾರೆ. ಅನವಶ್ಯಕವಾಗಿ ಸೀರಿಯಲ್ ನಲ್ಲಿ ಸ್ಟಂಟ್, ಫೈಟ್ ಗಳನ್ನೂ ಮಾಡಿಸಲಾಗುತ್ತಿದೆ.
ಹೀಗೆ ಒಂದು ಸ್ಟಂಟ್ ಮಾಡಲು ಹೋಗಿ ಹೀರೋ ಮಹೇಶ (ರಕ್ಷಿತ್) ಕೂದಲೆಳೆ ಅಂತರದಿಂದ ಪಾರಾಗಿದ್ದಾನೆ. ಅಷ್ಟಕ್ಕೂ, ನಡೆದದ್ದೇನು.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ಪುಟ್ಟಗೌರಿ ಮದುವೆ' ಸೆಟ್ ನಲ್ಲಿ ತಪ್ಪಿದ ಅವಘಡ
'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಮತ್ತೊಂದು ಫೈಟ್ ಸೀನ್ ಇಡಲಾಗಿದೆ. ಮಹೇಶ ಮತ್ತು ಹಿಮಾ ಜೀಪ್ ನಲ್ಲಿ ಹೋಗುವಾಗ ರೌಡಿಗಳು ಅಟ್ಯಾಕ್ ಮಾಡ್ತಾರೆ. ಈ ವೇಳೆ ಅಪಾಯದಿಂದ ಮಹೇಶ ಬಚಾವ್ ಆಗಿದ್ದಾನೆ.

ಟ್ಯೂಬ್ ಲೈಟ್ ಹೊಡೆಯುವ ದೃಶ್ಯ
ರೌಡಿಗಳು ಟ್ಯೂಬ್ ಲೈಟ್ ನಿಂದ ಮಹೇಶನಿಗೆ ಹೊಡೆಯುವ ದೃಶ್ಯದ ಚಿತ್ರೀಕರಣ ಅದು. ಹಾಗೆ ಟ್ಯೂಬ್ ಲೈಟ್ ಅನ್ನು ಮಹೇಶನಿಗೆ ಹೊಡೆದಾಗ ಅದರ ಚೂರುಗಳು ಇನ್ನೇನು ಮಹೇಶನ ಕಣ್ಣಿಗೆ ಚುಚ್ಚಬೇಕಿತ್ತು. ಅಷ್ಟರಲ್ಲಿ ಮಹೇಶ ಪಾರಾಗಿದ್ದಾನೆ.

ಅಪಾಯದಿಂದ ಪಾರು
ಧಾರಾವಾಹಿ ತಂಡದ ಪ್ರಕಾರ ಮಹೇಶ ಇದೀಗ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ಅಪಾಯ ಆಗಿಲ್ಲ.

ಇವೆಲ್ಲ ಬೇಕಿತ್ತಾ.?
ನಟ ರಕ್ಷಿತ್ (ಮಹೇಶ)ಗೆ ಜನಪ್ರಿಯತೆ ತಂದುಕೊಟ್ಟಿದ್ದು ಇದೇ 'ಪುಟ್ಟಗೌರಿ ಮದುವೆ' ಧಾರಾವಾಹಿ. ಮೊದಮೊದಲು ಉತ್ತಮವಾಗಿ ಮೂಡಿಬರುತ್ತಿದ್ದ ಈ ಧಾರಾವಾಹಿ ಇದೀಗ ವೀಕ್ಷಕರಿಗೆ ಕಿರಿಕಿರಿ ತರುತ್ತಿದೆ. ಅನವಶ್ಯಕ ತಿರುವುಗಳಿಂದ ಧಾರಾವಾಹಿಯನ್ನ ಸುಮ್ಮನೆ ಎಳೆಯಲಾಗುತ್ತಿದೆ. ಹೀಗೆ ಎಲಾಸ್ಟಿಕ್ ನಂತೆ ಎಳೆಯುವ ಭರದಲ್ಲಿ ಸ್ಟಂಟ್ ಸನ್ನಿವೇಶಗಳನ್ನು ತೂರಿಸಲಾಗುತ್ತಿದೆ. ಇದನ್ನೆಲ್ಲ ನೋಡುತ್ತಿರುವ ವೀಕ್ಷಕರು ಕೇಳುತ್ತಿರುವುದು ಒಂದೇ ಪ್ರಶ್ನೆ - ''ಇವೆಲ್ಲ ಬೇಕಿತ್ತಾ.?''


Click it and Unblock the Notifications











