ವೈದ್ಯನೊಂದಿಗೆ ಪುಟ್ಟಕ್ಕನ ಮಗಳು ಸಂಜನಾ ಬುರ್ಲಿ ನಿಶ್ಚಿತಾರ್ಥ; ಆಕ್ಟಿಂಗ್ ಕಥೆಯೇನು?
ಜೀ ಕನ್ನಡದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳಾಗಿ ನಟಿಸಿದ್ದ ಸಂಜನಾ ಬುರ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಸಂಜನಾ ಬುರ್ಲಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತ್ತು. ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಂಜನಾಗೆ ಕಿರುತೆರೆ ವೀಕ್ಷಕರ ಮನೆ ಮಗಳಾಗಿದ್ದರು. ಆ ಮಟ್ಟಿಗೆ ಜನಪ್ರಿಯತೆ ಸಿಕ್ಕಿತ್ತು.
ಸ್ನೇಹಾ ನೇರ ನುಡಿ, ಛಲ ಹಾಗೂ ಕಂಠಿಯ ಜೊತೆಗಿನ ಲವ್ ಸ್ಟೋರಿಯನ್ನು ಕಿರುತೆರೆ ವೀಕ್ಷಕರು ಇಷ್ಟ ಪಟ್ಟಿದ್ದರು. ಆದರೆ, ವೈಯಕ್ತಿಕ ಹಾಗೂ ಓದಿನ ಕಾರಣ ಕೊಟ್ಟು ಸಂಜನಾ ಬುರ್ಲಿ ಆ ಧಾರಾವಾಹಿಯಿಂದ ಹೊರ ಬಂದಿದ್ದರು. ಸುಮಾರು ಒಂದು ವರ್ಷಗಳ ಕಾಲ ಕಿರುತೆರೆಯಿಂದ ದೂರವಿದ್ದ ಸಂಜನಾ ಬುರ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀಗಂಧದ ಗುಡಿ' ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಮತ್ತೆ ಸಂಜನಾ ಬುರ್ಲಿಯನ್ನು ನೋಡಿ ವೀಕ್ಷಕರು ಇಷ್ಟ ಪಡುತ್ತಿದ್ದಾರೆ. ಇದೇ ಗ್ಯಾಪ್‌ನಲ್ಲೇ ಸಂಜನಾ ಬುರ್ಲಿ ಸದ್ದಿಲ್ಲದೆ ವೈದ್ಯ ಸಮರ್ಥ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು. ಅವರ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ.
ಸಂಜನಾ ಬುರ್ಲಿ ಬಹುಬೇಗನೆ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ. 'ಪುಟ್ಟಕ್ಕನ ಮಕ್ಕಳು' ಶುರುವಾದ ದಿನದಿಂದಲೇ ಅವರಿಗೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದರು. ಸ್ನೇಹಾ ಪಾತ್ರವನ್ನು ತಮ್ಮ ಮನೆಯ ಹೆಣ್ಣು ಮಕ್ಕಳಲ್ಲಿ ಕಾಣುವುದಕ್ಕೆ ಇಷ್ಟ ಪಡುತ್ತಿದ್ದರು. ಆ ಮಟ್ಟಿಗೆ ತಮ್ಮ ಪಾತ್ರದಿಂದ ಪ್ರಭಾವ ಬೀರಿದ್ದರು. ಕಲರ್ಸ್ ಕನ್ನಡದ ಹೊಚ್ಚ ಹೊಸ ಧಾರಾವಾಹಿ 'ಶ್ರೀಗಂಧದ ಗುಡಿ' ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಯಶಸ್ಸಿನ ಹಾದಿಯಲ್ಲಿ ಇರುವಾಗಲೇ ಸಂಜನಾ ಬುರ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅದು ಅವರ ಅಭಿಮಾನಿಗಳಲ್ಲಿ ಅಚ್ಚರಿಯನ್ನು ಮೂಡಿಸಿದೆ. ಸಂಜನಾ ಬುರ್ಲಿ ಎಲ್ಲಿಯೂ ನಿಶ್ವಿತಾರ್ಥ ಮಾಡಿಕೊಳ್ಳುವ ಬಗ್ಗೆ ಸುಳಿವನ್ನು ನೀಡಿರಲಿಲ್ಲ. ದಿಢೀರನೇ ಏಕಾಏಕಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟಿಯ ನಿರ್ಧಾರದ ಬಗ್ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ನವ ಜೋಡಿಗೆ ಶುಭ ಕೋರಿದ್ದಾರೆ.
ಇನ್ನು ಸಮರ್ಥ್ ಎಂಬುವವರೊಂದಿಗೆ ಸಂಜನಾ ಬುರ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಇವರು ಮೂಲತ: ವೃತ್ತಿಯಲ್ಲಿ ವೈದ್ಯರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯವರು. ಎಂಬಿಬಿಎಸ್, ಎಂಡಿ ವೈದ್ಯರಾಗಿ ವೃತ್ತಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಸಂಜನಾ ಬುರ್ಲಿಯಂತೆಯೇ ಸಮರ್ಥ್ ಕೂಡ ಓಡಾಡ, ಪ್ರಪಂಚ ಪರ್ಯಟನೆ ಬಗ್ಗೆ ಆಸಕ್ತಿ ಹೊಂದಿದ್ದು, ಹೊಸ ಹವ್ಯಾಸಗಳ ಅನ್ವೇಷಣೆ ಮಾಡುವುದು ಅವರಿಗೆ ಇಷ್ಟ. ಹಾಗೇ ಅಥ್ಲೀಟ್ ಕೂಡ ಆಗಿದ್ದು, ಹ್ಯಾಂಡ್ ಬಾಲ್ ಅವರ ಆಸಕ್ತಿ ವಿಷಯ ಅನ್ನೋದು ಅವರ ಇನ್‌ಸ್ಟಾಗ್ರಾಂ ಬಯೋ ಹೇಳುತ್ತಿದೆ.
ಸಂಜನಾ ಬುರ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಜನಪ್ರಿಯತೆ ಸಿಕ್ಕಿದ ಬಳಿಕ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀಗಂಧದ ಗುಡಿ' ಧಾರಾವಾಹಿಯಲ್ಲಿ ಅವರನ್ನು ಇಷ್ಟ ಪಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಂಚಿಕೆಗಳಲ್ಲಿ ಸಂಜನಾ ಬುರ್ಲಿ ಕಾಣಿಸಿಕೊಂಡಿದ್ದಾರೆ. ನಿಶ್ವಿತಾರ್ಥದ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಂಜನಾ ಬುರ್ಲಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸದ್ಯ ನಿಶ್ವಿತಾರ್ಥದ ಬಗ್ಗೆಯಷ್ಟೇ ಮಾಹಿತಿ ಹಂಚಿಕೊಂಡಿದ್ದು, ಇನ್ನು ಮದುವೆ ಬಗ್ಗೆ ಸುಳಿವು ನೀಡಿಲ್ಲ.


Click it and Unblock the Notifications











