ಪುಟ್ಟಕ್ಕನ ಮಕ್ಕಳು: ದೊರೆ ಮೇಲೆ ಸ್ನೇಹಾಗೆ ಲವ್ವಾಗಿದೆ: ಕಂಠಿ ಪ್ರಪೋಸ್ ಮಾಡಿದರೆ ಒಪ್ತಾಳಾ?

ಪುಟ್ಟಕ್ಕನ ಮಗಳು ಸ್ನೇಹಾಳ ಮೇಲೆ ಕಂಠಿಗೆ ಸಿಕ್ಕಾಪಟ್ಟೆ ಲವ್ವಾಗಿದೆ. ಆ ಪ್ರೀತಿ ಹೇಳಿಕೊಳ್ಳುವುದಕ್ಕೆ ನಾನಾ ಅವತಾರಗಳನ್ನು ತಾಳುತ್ತಿದ್ದಾನೆ. ಅದರಲ್ಲಿ ದೊರೆ ಎಂಬ ಹೊಸ ಪಾತ್ರವೂ ಸೇರ್ಪಡೆಯಾಗಿದೆ. ಪ್ರೀತಿಗಾಗಿ ಸುಳ್ಳುಗಳ ಸರಮಾಲೆಯನ್ನೇ ಕಟ್ಟಿದ್ದಾನೆ. ಆದರೆ ಸ್ನೇಹಾ, ಕಂಠಿಯನ್ನು ತುಂಬಾನೆ ನಂಬಿದ್ದಾಳೆ. ಒಂದು ವೇಳೆ ಆತ ಹೇಳಿದ್ದೆಲ್ಲವೂ ಸುಳ್ಳು ಎಂದರೆ ಸ್ನೇಹಾಳಿಗೆ ಸಹಿಸುವುದು ತುಂಬಾನೇ ಕಷ್ಟವಾಗುತ್ತದೆ. ಯಾಕೆಂದರೆ ಕಂಠಿ ಹೇಳಿರುವ ಸುಳ್ಳು ಒಂದೆರಡಲ್ಲ.

ಸದ್ಯ ಸ್ನೇಹಾಳನ್ನು ಕಾಣದ ದೊರೆ ಕಾಡುತ್ತಿದ್ದಾನೆ. ಮರೆಯಲ್ಲಿ ನಿಂತು ಪಂಚಾಯ್ತಿಯಲ್ಲಿ ಅವ್ವನ ಪರ ಕೆಲಸ ಮಾಡಿದಾತನನ್ನು ನೋಡುವ ತವಕ ಸ್ನೇಹಾಳಲ್ಲಿದೆ. ಆದರೆ ಕಣ್ಣ ಮುಂದೆ ಬಾರದೆ, ಹಿಂದೆಯೇ ನಿಂತು ಪ್ರೀತಿ ಹೆಚ್ಚಾಗುವಂತೆ ಮಾಡುತ್ತಿದ್ದಾನೆ. ಗುಲಾಬಿಯನ್ನು ಕೊಟ್ಟು ಸ್ನೇಹಾಳ ಮನಸ್ಸನ್ನು ಕದಡಿದ್ದಾನೆ. ಆದರೆ ಇದು ಕಂಠಿಗೆ ಕಂಟಕವಾಗುತ್ತದೆ ಎಂಬುದನ್ನು ಅಲ್ಲಗಳೆದಿದ್ದಾನೆ.

ದೊರೆ ಮೇಲೆ ಲವ್ವಾದ್ರೆ ಕಂಠಿ ಪ್ರೀತಿಗೆ ಬೆಲೆ ಇರುತ್ತಾ?

ದೊರೆ ಮೇಲೆ ಲವ್ವಾದ್ರೆ ಕಂಠಿ ಪ್ರೀತಿಗೆ ಬೆಲೆ ಇರುತ್ತಾ?

ಸ್ನೇಹಾಳನ್ನು ಸದ್ಯಕ್ಕೆ ಇಂಪ್ರೆಸ್ ಮಾಡಿದ್ದಾಗಿದೆ. ನಮ್ಮ ಮನೆಗೆ ಇಷ್ಟೆಲ್ಲಾ ಸಹಾಯ ಮಾಡುವಂತಹ ಮನಸ್ಸು ಇದೆಯಲ್ಲ. ಆ ಮನುಷ್ಯನನ್ನು ನೋಡಬೇಕೆಂಬ ಕಾತುರತೆ ಸಹಜವಾಗಿಯೇ ಅವಳಲ್ಲಿ ಹುಟ್ಟಿದೆ. ಅಷ್ಟೇ ಅಲ್ಲ ಆತನ ಮೇಲೆ ಹೊಸ ಭಾವವೊಂದು ಚಿಗುರೊಡೆಯಲು ಆರಂಭಿಸಿದೆ. ಆತ ಕೊಟ್ಟ ಗುಲಾಬಿ ತೆಗೆದುಕೊಂಡ ಮೇಲೆ ಸ್ನೇಹಾ ಆ ದೊರೆ ಬಗ್ಗೆಯೇ ಯೋಚಿಸುವುದಕ್ಕೆ ಶುರು ಮಾಡಿದ್ದಾಳೆ. ಕಣ್ಣಿಗೆ ಕಾಣದೆ ಹೋದರು ದೊರೆ ಸ್ನೇಹಾಳ ಮನಸ್ಸಿಗೆ ಹತ್ತಿರವಾಗುತ್ತಿದ್ದಾನೆ. ಮುಂದೊಂದು ದಿನ ಸ್ನೇಹಾಳಿಗೆ ದೊರೆ ಮೇಲೆ ಲವ್ವಾಗುವ ಎಲ್ಲಾ ಸಾಧ್ಯತೆಯೂ ಕಾಣುತ್ತಿದೆ. ಆದರೆ, ಇದು ಕಂಠಿಗೆ ಸಮಸ್ಯೆಯನ್ನು ಮಾಡಬಹುದು. ತಾನೇ ಸೃಷ್ಟಿಸಿರುವ ದೊರೆಯ ವಿರುದ್ಧ ಕಂಠಿ ಸೋಲಬಹುದು. ದೊರೆ ಮೇಲಿನ ಪ್ರೀತಿಯಿಂದ ಕಂಠಿ ಪ್ರೀತಿ ತೋರಿಸಿದರೂ, ಅದನ್ನು ರಿಜೆಕ್ಟ್ ಮಾಡಲುಬಹುದು. ಹೀಗಾಗಿ ಈಗಲೇ ದೊರೆಯ ಸತ್ಯ, ಸ್ನೇಹಾಳಿಗೆ ಅರ್ಥೈಸಿದರೆ ಕಂಠಿ ಸಮಸ್ಯೆ ಕೊಂಚ ಮಟ್ಟಿಗೆ ಸಲೀಸಾಗುತ್ತದೆ.

ಗುಲಾಬಿಯನ್ನು ಮಗುವಿನಂತೆ ಕಾಪಾಡುತ್ತಿದ್ದಾಳೆ

ಗುಲಾಬಿಯನ್ನು ಮಗುವಿನಂತೆ ಕಾಪಾಡುತ್ತಿದ್ದಾಳೆ

ಅಂದು ಸ್ನೇಹಾ ಬಂಗಾರಮ್ಮನ ಮಗನನ್ನು ಹಿಡಿದುಕೊಡಲು ಮಾರ್ಕೆಟ್‌ಗೆ ಹೋಗಿದ್ದಳು. ಆಗ ಸ್ನೇಹಾಳ ಫೋನ್‌ಗೆ ಒಂದು ಮೆಸೇಜ್ ಬಂದಿತ್ತು. ಅದು ದೊರೆಯ ಮೆಸೇಜ್. ಅವಳು ನಡೆದುಕೊಳ್ಳುವ ರೀತಿಯನ್ನೆಲ್ಲಾ ಮೆಸೇಜ್ ಮಾಡಿ ತಿಳಿಸುತ್ತಿದ್ದ. ಆಗ ಅವನು ಮಾರ್ಕೆಟ್‌ನಲ್ಲಿಯೇ ಇದ್ದಾನೆ ಎಂಬುದು ಸ್ಪಷ್ಟವಾಗಿ ಹುಡುಕುತ್ತಾ ಹೊರಟಳು. ಸ್ನೇಹಾಳ ತಳಮಳ ನೋಡಿದ ಕಂಠಿಗೆ ತನ್ನ ಮೇಲೆ ಲವ್ವಾಗಿದೆ ಎಂದುಕೊಂಡಳು. ಆದರೆ ಸ್ನೇಹಾಳಿಗೆ ಕಾಣದ ದೊರೆ ಮೇಲೆ ಲವ್ವಾಗಿದೆ. ಪ್ರೀತಿಯ ಗುಲಾಬಿಯನ್ನು ದೊರೆ ಸ್ನೇಹಾಳಿಗೆ ಕೊಡಿಸಿದ್ದ. ಆ ಗುಲಾಬಿಯನ್ನು ಸ್ನೇಹಾ ಅದೆಷ್ಟು ಜೋಪಾನವಾಗಿ ಕಾಪಾಡುತ್ತಿದ್ದಾಳೆ ಎಂದರೆ, ಪ್ರತಿದಿನ ನೀರು ಹಾಕುತ್ತಾ, ಅದನ್ನು ಬಾಡುವುದಕ್ಕೆ ಬಿಡದಂತೆ ಕಾಪಾಡುತ್ತಿದ್ದಾಳೆ.

ಗುಲಾಬಿ ಬಗ್ಗೆ ಕೇಳಿದ್ರೆ ಕಾರಣಗಳ ಸುರಿಮಳೆ

ಗುಲಾಬಿ ಬಗ್ಗೆ ಕೇಳಿದ್ರೆ ಕಾರಣಗಳ ಸುರಿಮಳೆ

ದೊರೆ ಕೊಟ್ಟ ಗುಲಾಬಿಯನ್ನು ಸ್ನೇಹಾ ತನ್ನ ರೂಮಿನಲ್ಲಿ ಇಟ್ಟಿದ್ದಾಳೆ. ಒಂದು ಚೊಂಬಿನಲ್ಲಿ ನೀರು ಹಾಕಿ, ಅದರೊಳಗಡೆ ಗುಲಾಬಿಯನ್ನು ಅಡಗಿಸಿಟ್ಟಿದ್ದಾಳೆ. ಇದು ಸುಮಾ ಕಣ್ಣಿಗೆ ಬಿದ್ದಿದೆ. ಮೊದಲೇ ಚಾಲಾಕಿ ಸುಮ ಅಕ್ಕಂದಿರ ಪ್ರೀತಿಯನ್ನು ಆಗಾಗ ಕೆಣಕುತ್ತಿರುತ್ತಾಳೆ. ಈ ಗುಲಾಬಿ ವಿಚಾರಕ್ಕೆ ಬಂದಿದ್ದಕ್ಕೂ, ಸ್ನೇಹಾ ಏನನ್ನೋ ಹೇಳಿ ಯಾಮಾರಿಸಿದ್ದಾಳೆ. ಆದರೆ ಎಲ್ಲವೂ ಸಹಜವಾದ ಮೇಲೆ ಆ ಗುಲಾಬಿಯನ್ನು ಪ್ರೀತಿಯಿಂದ ಸಾವರಿಸಿ, ನೋಡುವ ತವಕದ ನಗೆಯೊಂದನ್ನು ಬೀರಿದ್ದಾಳೆ. ಐ ಥಿಂಕ್ ಸ್ನೇಹಾ ದೊರೆ ಪ್ರೀತಿಗೆ ಬಿದ್ದಿದ್ದಾಳೆ ಎನಿಸದೆ ಇರಲು ಸಾಧ್ಯವೇ ಇಲ್ಲ.

ಜೈಲಲ್ಲಿ ಬಂಗಾರಮ್ಮನ ಮಗ ಇಲ್ಲ: ಮುಂದೇನು ಮಾಡ್ತಾಳೆ?

ಕಂಡ ಕಂಡವರ ಬಳಿ, ಕೇಳಿದವರ ಬಳಿಯೆಲ್ಲಾ ತಾನು ಬಂಗಾರಮ್ಮನ ಮಗನನ್ನು ಜೈಲಿಗೆ ಹಾಕಿಸಿದ್ದೀನಿ ಎಂದು ಹೇಳುವ ಸ್ನೇಹಾಗೆ ಎಲ್ಲರಿಂದ ಉಲ್ಟಾ ಉತ್ತರ ಸಿಕ್ಕಿದೆ. ಇತ್ತೀಚೆಗೆ ನಂಜಮ್ಮನನ್ನು ನೋಡುವುದಕ್ಕೆ ಆಸ್ಪತ್ರೆಗೆ ಹೋದಾಗ ಕಂಠಿ ಕೂಡ ಇಲ್ಲಿಗೆ ಬಂದಿದ್ದ ಎಂಬ ಮಾತು ಕೇಳಿ ಶಾಕ್ ಆಗಿದ್ದಾಳೆ. ಇವರೆಲ್ಲಾ ಹೇಳುವ ಪ್ರಕಾರ, ಕಂಠಿ ಹೊರಗಿದ್ದಾನೆ. ಆದರೆ, ಕಂಠಿ ಮಾಡಿದ ಫ್ಲ್ಯಾನ್ ಪ್ರಕಾರ, ಬಂಗಾರಮ್ಮನ ಮಗ ಜೈಲಿನಲ್ಲಿಯೆ ಇದ್ದಾನೆ. ಬೇರೆಯವರ ಮಾತು ಕೇಳಿ ಸ್ಟೇಷನ್‌ಗೆ ಸ್ನೇಹಾ ಹೋದರೆ ಗೊಂದಲಕ್ಕೀಡಾಗುವುದು ಸಹಜ. ಆದರೆ ಪುಟ್ಟಕ್ಕ ಹೇಳಿದಂತೆ, ಬಂಗಾರಮ್ಮನ ಮಗನನ್ನು ನೋಡಿದ್ದಿಯಾ ಎಂಬ ಪ್ರಶ್ನೆಗೆ ಸ್ನೇಹಾ ಬಂಗಾರಮ್ಮನ ನಿಜವಾದ ಮಗ ಯಾರು ಎಂಬುದನ್ನು ಹುಡುಕಲು ಹೊರಡಬಹುದು.

More from Filmibeat

English summary
Zee Kannada Serial Puttakkana Makkalu Written Update On June 10th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X