'ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ!
ಕಳೆದ ಮೂರು ವರ್ಷಗಳಿಂದ ಜೀ ಕನ್ನಡ ವಾಹಿನಿ ಕನ್ನಡಿಗರಿಗೆ ಸದಭಿರುಚಿಯ ಮನೋರಂಜನೆ ನೀಡುತ್ತಾ ಬಂದಿದೆ. ಜನ ಸಾಮಾನ್ಯರಿಗೆ ಸ್ಫೂರ್ತಿ ನೀಡುವ ಸಾಧಕರ ಜೀವನದ ಬಗ್ಗೆ ತಿಳಿಸುವ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಮೂರನೇ ಸೀಸನ್ ಆರಂಭಕ್ಕೆ ಈಗ ಕ್ಷಣಗಣನೆ ಶುರುವಾಗಿದೆ.[ಈ ಬಾರಿಯಾದ್ರೂ 'ವೀಕೆಂಡ್ ವಿತ್ ರಮೇಶ್'ನಲ್ಲಿ 'ಇವರನ್ನೆಲ್ಲ' ನೋಡಬಹುದಾ.?]
ಅಂದಹಾಗೆ ನಿಮಗೆಲ್ಲಾ ತಿಳಿದಂತೆ 'ವೀಕೆಂಡ್ ವಿತ್ ರಮೇಶ್' ಸೀಸನ್ ಮೂರರ ಮೊದಲ ಅತಿಥಿಯಾಗಿ ಬಹುಭಾಷಾ ನಟ ಪ್ರಕಾಶ್ ರೈ ಅಲಂಕರಿಸಿದ್ದಾರೆ. ಇನ್ನೂ ಎರಡನೇ ಅತಿಥಿಯಾಗಿ ನವರಸನಾಯಕ ಜಗ್ಗೇಶ್ ಆಗಮಿಸಿರುವ ಬಗ್ಗೆ ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಫೋಟೋಗಳನ್ನು ಹರಿಯಬಿಟ್ಟಿದ್ದಾರೆ. ಉಳಿದಂತೆ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಸಾಧಕರ ಸೀಟ್ ಮೇಲೆ ಯಾರೆಲ್ಲಾ ಕೂರಲಿದ್ದಾರೆ ಎಂಬುದನ್ನು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ನಿಮ್ಮ ಫಿಲ್ಮಿ ಬೀಟ್ ನೊಂದಿಗೆ ರಿವೀಲ್ ಮಾಡಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ನೀವು ನೋಡಬಹುದಾದ ಸಾಧಕರ ಲಿಸ್ಟ್ ಇಲ್ಲಿದೆ ನೋಡಿ...

ಎಸ್ ಪಿ ರವಿ ಡಿ.ಚನ್ನಣ್ಣನವರ್
'ಕರ್ನಾಟಕದ ಸಿಂಗಂ' ಎಂದೇ ಕರೆಸಿಕೊಳ್ಳುವ, ಪ್ರಸ್ತುತದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಪಿ ರವಿ ಡಿ.ಚನ್ನಣ್ಣನವರ್ ಅವರನ್ನು ಸಾಧಕರ ಸೀಟ್ ಮೇಲೆ ನೋಡಬಹುದು. ಸಮಯ ಸಿಕ್ಕಾಗೆಲ್ಲಾ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಶಿಕ್ಷಣದ ಮೂಲ ಉದ್ದೇಶ, ನೀತಿ ಬೋಧನೆ ಮಾಡುವ ರವಿ.ಡಿ.ಚನ್ನಣ್ಣನವರ್, ಪೊಲೀಸ್ ಸೇವೆಗೆ ಸೇರಲು ಅವರು ಪಟ್ಟ ಕಷ್ಟ, ಅವರ ಸಾಧನೆಯ ಹಾದಿಯ ಕುರಿತು ತಿಳಿಯಬಹುದಾಗಿದೆ.

ಮಾಲಾಶ್ರೀ
25 ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ 'ಕನಸಿನ ರಾಣಿ' ಆಗಿ ಮೆರೆದ ನಟಿ ಮಾಲಾಶ್ರೀ ಅವರನ್ನು ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ನೋಡಬಹುದು.

ಅರ್ಜುನ್ ಜನ್ಯಾ
ಸ್ಯಾಂಡಲ್ ವುಡ್ ನಲ್ಲಿ ಪ್ರಸ್ತುತ ಬಹುಬೇಡಿಕೆ ಇರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಪ್ರತಿ ವೀಕೆಂಡ್ ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಇವರನ್ನು ನೋಡುತ್ತಲೇ ಇರುತ್ತೀರಿ. ಆದರೆ ಇವರು ಸಂಗೀತ ಕ್ಷೇತ್ರದಲ್ಲಿ ಖ್ಯಾತ ನಿರ್ದೇಶಕರಾಗಿ ಹೊರಹೊಮ್ಮಲು ಪಟ್ಟ ಕಷ್ಟಗಳೇನು, ಇವರು ನಡೆದು ಬಂದ ದಾರಿ ಬಗ್ಗೆ ಯಾರಿಗೂ ತಿಳಿದಿಲ್ಲ. ಇವರ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಮಿಸ್ ಮಾಡದೇ ತಿಳಿದುಕೊಳ್ಳಿ.

ಭಾರತಿ ವಿಷ್ಣುವರ್ಧನ್
ದಿವಂಗತ ಡಾ.ವಿಷ್ಣುವರ್ಧನ್ ಅವರ ಧರ್ಮ ಪತ್ನಿ ಭಾರತಿ ವಿಷ್ಣುವರ್ಧನ್ ಅವರು 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಈ ಭಾರಿ ಕೂರಲಿದ್ದಾರೆ.

ವಿ.ಹರಿಕೃಷ್ಣ
ಕನ್ನಡದ ಪ್ರಸಿದ್ಧ ಹಾಗೂ ಬಹು ಬೇಡಿಕೆಯ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಹ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜಯಂತ್ ಕಾಯ್ಕಿಣಿ
ಗೋಕರ್ಣ ಮೂಲದ ಜಯಂತ್ ಕಾಯ್ಕಿಣಿ ಅವರು ಕವಿ, ಸಿನಿಮಾ ಹಾಡುಗಳ ಸಾಹಿತಿ, ಸಂಭಾಷಣೆಗಾರ, ಅಂಕಣಕಾರ, ನಾಟಕಕಾರ, ಕಥೆಗಾರನಾಗಿ ಕನ್ನಡಿಗರ ಅಚ್ಚುಮೆಚ್ಚಿನ ಲೇಖಕರು. ಇವರ ಸಾಧನೆಯ ಹಾದಿ 'ವೀಕೆಂಡ್ ವಿತ್ ರಮೇಶ್' ಮೂರನೇ ಸೀಸನ್ ನಲ್ಲಿ ಅನಾವರಣಗೊಳ್ಳಲಿದೆ.

ಕಾಶೀನಾಥ್
ಕನ್ನಡ ಸಿನಿ ಪ್ರಿಯರಿಗೆ ತಮ್ಮ ಸಿನಿಮಾಗಳ ಮೂಲಕ ಹೊಸ ಸದಭಿರುಚಿ ಮೂಡಿಸಿ ಮನರಂಜನೆ ನೀಡಿದ ನಿರ್ದೇಶಕ ಕಮ್ ನಟ ಕಾಶೀನಾಥ್ ಈ ಬಾರಿ ಸಾಧಕರ ಸೀಟ್ ಮೇಲೆ ಕೂರಲಿದ್ದಾರೆ.

ಅರುಂಧತಿ ನಾಗ್
ಸಿನಿಮಾ ಕ್ಷೇತ್ರದಿಂದ ದೂರ ಉಳಿದು ರಂಗಭೂಮಿಯಲ್ಲಿಯೇ ತೊಡಗಿಕೊಂಡು ಸಾಧನೆ ಮಾಡಿದ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಅವರು ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ನಲ್ಲಿ ಭಾಗವಹಿಸಲಿದ್ದಾರೆ.

ವಿರೇಂದ್ರ ಹೆಗಡೆ
ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ವಿರೇಂದ್ರ ಹೆಗಡೆ ಬಗ್ಗೆ 'ವೀಕೆಂಡ್ ವಿತ್ ರಮೇಶ್-3' ರಲ್ಲಿ ತಿಳಿದುಕೊಳ್ಳಬಹುದಾಗಿದೆ.

ಅನಿಲ್ ಕುಂಬ್ಳೆ
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಸಾಧನೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಅವರ ಸಾಧನೆಯ ಹಾದಿ ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

ಗಂಗಾವತಿ ಪ್ರಾಣೇಶ್
ದಿನನಿತ್ಯ ಜೀವನದಲ್ಲಿ ಹಾಸ್ಯವನ್ನು ಹುಡುಕುತ್ತಾ ವಿಶ್ವದಾದ್ಯಂತ ಕನ್ನಡಿಗರನ್ನು ನಗಿಸುವ ಗಂಗಾವತಿ ಪ್ರಾಣೇಶ್ ಜೂನಿಯರ್ ಬೀಚಿ ಎಂತಲೇ ಕರೆಸಿಕೊಂಡಿದ್ದಾರೆ. ಹಾಸ್ಯ ಕಲಾವಿದರಾಗಿ ಖ್ಯಾತಿ ಆಗಿರುವ, ಇವರ ಸಾಧನೆ ಬಗ್ಗೆ ತಿಳಿದುಕೊಳ್ಳುವ ಹಂಬಲ ಇರುವವರು ಈ ಭಾರಿ 'ವೀಕೆಂಡ್ ವಿತ್ ರಮೇಶ್' ತಪ್ಪದೇ ನೋಡಿ.


Click it and Unblock the Notifications











