»   » ಈ ಬಾರಿಯಾದ್ರೂ 'ವೀಕೆಂಡ್ ವಿತ್ ರಮೇಶ್'ನಲ್ಲಿ 'ಇವರನ್ನೆಲ್ಲ' ನೋಡಬಹುದಾ.?

ಈ ಬಾರಿಯಾದ್ರೂ 'ವೀಕೆಂಡ್ ವಿತ್ ರಮೇಶ್'ನಲ್ಲಿ 'ಇವರನ್ನೆಲ್ಲ' ನೋಡಬಹುದಾ.?

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಎರಡನೇ ಸೀಸನ್ ಮುಕ್ತಾಯವಾಗಿ, ಮೂರನೇ ಸೀಸನ್ ಶುರುವಾಗುವುದಕ್ಕೆ ದಿನಗಣನೆ ಶುರುವಾಗಿದೆ.

ಮೊದಲನೇ ಆವೃತ್ತಿಯಲ್ಲಿ ಕ್ಯಾಪ್ಟನ್ ಗೋಪಿನಾಥ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನ ಪರಿಚಯ ಮಾಡಿಕೊಟ್ಟ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡನೇ ಸೀಸನ್ ಮಾತ್ರ ಸಂಪೂರ್ಣ 'ಚಿತ್ರರಂಗ'ಮಯವಾಗಿತ್ತು. [ಬಹುನಿರೀಕ್ಷಿತ 'ವೀಕೆಂಡ್' ಆರಂಭ: ಮೊದಲ ಅತಿಥಿ ಬಹಿರಂಗ.!]

ಮೂರನೇ ಸೀಸನ್ ನಲ್ಲಾದರೂ, 'ಇವರೆಲ್ಲರ' ಸಾಧನೆಯ ಪಯಣ ನೋಡುವ ಭಾಗ್ಯ ನಮಗೆ ಸಿಗಲಿ ಅಂತ ವೀಕ್ಷಕರು ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಷ್ಟಕ್ಕೂ, ಸಾಧಕರ ಸೀಟ್ ಮೇಲೆ ಯಾರನ್ನೆಲ್ಲ ನೋಡಲು ವೀಕ್ಷಕರು ಬಯಸುತ್ತಿದ್ದಾರೆ ಅಂದ್ರಾ..? ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ....

ವೀಕ್ಷಕರ ಇಚ್ಛೆಯಂತೆ....

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಕೆಲವರನ್ನ ಸಾಧಕರ ಸೀಟ್ ಮೇಲೆ ನೋಡಲೇಬೇಕು ಅನ್ನೋದು ವೀಕ್ಷಕರ ಬಯಕೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಬಯಲಾಗಿರುವ ವೀಕ್ಷಕರ ಬಯಕೆ-ಬೇಡಿಕೆಯ ಪಟ್ಟಿಯನ್ನ ಯಥಾವತ್ತಾಗಿ ನಾವು ನಿಮ್ಮ ಮುಂದೆ ಇಡ್ತಿದ್ದೀವಿ... ನೋಡಿ...

ರಾಹುಲ್ ಡ್ರಾವಿಡ್

ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ಡ್ರಾವಿಡ್ ರವರ ಜೀವನ ಚರಿತ್ರೆ ವೀಕೆಂಡ್ ವಿತ್ ರಮೇಶ್-3 ಕಾರ್ಯಕ್ರಮದಲ್ಲಿ ಕಣ್ತುಂಬಿಕೊಳ್ಳಬೇಕು ಎಂಬುದು ವೀಕ್ಷಕರ ಬಯಕೆ.

ಅನಿಲ್ ಕುಂಬ್ಳೆ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅನಿಲ್ ಕುಂಬ್ಳೆ ಕೂಡ ಸಾಧಕರ ಸೀಟ್ ಮೇಲೆ ಈ ಬಾರಿ ಕೂರಬೇಕು ಎಂಬುದು ವೀಕ್ಷಕರ ಆಸೆ.

ಜಾವಗಲ್ ಶ್ರೀನಾಥ್

ಕನ್ನಡಿಗ, ಮೈಸೂರಿನ ಹುಡುಗ ಜಾವಗಲ್ ಶ್ರೀನಾಥ್ ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಮಿಸ್ ಆಗಲೇಬಾರದು ಅಂತ ಕೆಲ ವೀಕ್ಷಕರು ಪಟ್ಟು ಹಿಡಿದಿದ್ದಾರೆ.

ವೆಂಕಟೇಶ್ ಪ್ರಸಾದ್

ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಜೀವನ ಚರಿತ್ರೆಯನ್ನ 'ವೀಕೆಂಡ್'ನಲ್ಲಿ ತಿಳಿದುಕೊಳ್ಳಲು ಯುವಕರಂತೂ ಕಾತರದಿಂದ ಕಾಯುತ್ತಿದ್ದಾರೆ.

ಸುನೀಲ್ ಜೋಶಿ

ಕನ್ನಡಿಗ, ಗದಗ ಜಿಲ್ಲೆಯ ಸುನೀಲ್ ಜೋಶಿ ಬಗ್ಗೆ ತಿಳಿದುಕೊಳ್ಳಲು ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ..?

ಇನ್ಫೋಸಿಸ್ ನಾರಾಯಣ ಮೂರ್ತಿ

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಸಾಧನೆಯ ಗುಟ್ಟು ತಿಳಿಯಲು ಕೆಲ ವೀಕ್ಷಕರು ಉತ್ಸುಕರಾಗಿದ್ದಾರೆ.

ಎಚ್.ಡಿ.ದೇವೇಗೌಡ

ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಮಣ್ಣಿನ ಮಗ ಎಚ್.ಡಿ.ದೇವೇಗೌಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದ್ರೆ..?

ರಾಜಕೀಯ ದಿಗ್ಗಜರನ್ನೆಲ್ಲ ನೋಡಬಹುದಾ.?

ಬರೀ ಚಲನಚಿತ್ರ ಹಾಗೂ ಕ್ರೀಡೆಗೆ ಸಂಬಂಧಪಟ್ಟ ಸಾಧಕರು ಮಾತ್ರ ಅಲ್ಲ.. ರಾಜ್ಯ ರಾಜಕೀಯದಲ್ಲಿ ಜನಪ್ರಿಯರಾಗಿರುವ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂಬುದು ವೀಕ್ಷಕರ ಇಚ್ಛೆ.

ಹಂಸಲೇಖ ಬರ್ತಾರಾ.?

ಈ ಬಾರಿಯಾದರೂ, ಸಂಗೀತ ನಿರ್ದೇಶಕ ಹಂಸಲೇಖ ಸಾಧಕರ ಸೀಟ್ ಮೇಲೆ ಕೂರಲಿ ಎಂಬುದು ವೀಕ್ಷಕರ ಅಭಿಲಾಷೆ

ಶಂಕರ್ ನಾಗ್ ಪತ್ನಿ

ಚಿತ್ರರಂಗದಿಂದ ದೂರ ಸರಿದು ನಾಟಕ ರಂಗದಲ್ಲಿಯೇ ಸಾಧನೆ ಮಾಡಿರುವ ಅರುಂಧತಿ ನಾಗ್ ಕೂಡ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ವೀಕ್ಷಕರ ಒತ್ತಾಯ.

ಚಿತ್ರರಂಗದವರೂ ಇದ್ದಾರೆ.!

ನವರಸ ನಾಯಕ ಜಗ್ಗೇಶ್, ನಟಿ ಆರತಿ, ಜಯಂತಿ, ಭಾರತಿ ವಿಷ್ಣುವರ್ಧನ್, ಮಾಲಾಶ್ರೀ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ನಿರ್ದೇಶಕ ಭಗವಾನ್, ನಟಿ ಮಾಲಾಶ್ರೀ.. ಇವರೆಲ್ಲರೂ ಕನ್ನಡ ಚಿತ್ರರಂಗದ ಏಳಿಗೆಗೆ ಶ್ರಮ ಪಟ್ಟಿದ್ದಾರೆ. ಈ ಬಾರಿ ಇವರೆಲ್ಲರನ್ನ ನಿರೀಕ್ಷೆ ಮಾಡಬಹುದಾ.?

ಕಾದು ನೋಡಿ...

ವೀಕ್ಷಕರ ಬೇಡಿಕೆ ಕುರಿತು ಹೇಳುತ್ತಾ ಹೋದರೆ, ಪಟ್ಟಿ ಉದ್ದ ಬೆಳೆಯುತ್ತಲೇ ಹೋಗುತ್ತೆ. 'ವೀಕೆಂಡ್ ವಿತ್ ರಮೇಶ್-2'ನಲ್ಲಿ ಸಂಪೂರ್ಣ ಚಿತ್ರರಂಗದವರೇ ಕೂಡಿದ್ದರಿಂದ ಕೆಲವರಿಗೆ ಬೇಸರ ಆಗಿದ್ದು ಸುಳ್ಳಲ್ಲ. ಈ ಬಾರಿ ಹಾಗೆ ಆಗದಿರಲಿ ಎಂಬುದು ವೀಕ್ಷಕರ ಆಶಯ. ಅಷ್ಟಕ್ಕೂ, ಈ ಬಾರಿ 'ವೀಕೆಂಡ್'ನಲ್ಲಿ ಯಾರೆಲ್ಲ ಕೂರುತ್ತಾರೆ ಅಂತ ಜೀ ವಾಹಿನಿ ಬಹಿರಂಗ ಪಡಿಸಿಲ್ಲ. ಮೊದಲ ಸಂಚಿಕೆಯ ಅತಿಥಿ ಯಾರು ಎಂಬುದು ಮಾತ್ರ ರಿವೀಲ್ ಆಗಿದೆ. ಮುಂದಿನ ದಿನಗಳಲ್ಲಿ ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಅಂತ ಕಾದು ನೋಡಬೇಕಷ್ಟೆ.

ಮೊದಲ ಸಂಚಿಕೆಯಲ್ಲಿ ಪ್ರಕಾಶ್ ರೈ

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ರವರ ಜೀವನ ಚರಿತ್ರೆ ಅನಾವರಣವಾಗಲಿದೆ. ಮಾರ್ಚ್ 25 ರಿಂದ 'ವೀಕೆಂಡ್ ವಿತ್ ರಮೇಶ್-3' ಶುರು.

English summary
Zee Kannada Channel's popular 'Weekend with Ramesh 3' is about to start. Here is the list of Achievers, whom viewers are eager to see in the show. Take a look

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada