»   » ತೂಕ ಇಳಿಸಿದ ರಾಗಿಣಿಗೆ ಫುಲ್ ಡಿಮ್ಯಾಂಡ್: ಒಂದೇ ದಿನಕ್ಕೆ ಸಿಕ್ಕಿದೆ 3 ಚಿತ್ರಗಳು!

ತೂಕ ಇಳಿಸಿದ ರಾಗಿಣಿಗೆ ಫುಲ್ ಡಿಮ್ಯಾಂಡ್: ಒಂದೇ ದಿನಕ್ಕೆ ಸಿಕ್ಕಿದೆ 3 ಚಿತ್ರಗಳು!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಟಿ ರಾಗಿಣಿ ದ್ವಿವೇದಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ದಪ್ಪಗಿದ್ದ ರಾಗಿಣಿ ತೆಳ್ಳಗೆ ಬಳುಕುವ ಬಳ್ಳಿ ಆದ ಮೇಲೆ ಅವರ ಡಿಮ್ಯಾಂಡ್ ಡಬಲ್ ಆಗಿದೆ. ರಾಗಿಣಿ ಅಭಿನಯದಲ್ಲಿ ಈಗ ಮೂರು ಹೊಸ ಸಿನಿಮಾಗಳು ಸೆಟ್ಟೇರಿದೆ.

ರಾಗಿಣಿ ಹುಟ್ಟುಹಬ್ಬದ ವಿಶೇಷವಾಗಿ ನಿನ್ನೆ ಅವರ ಮೂರು ಹೊಸ ಸಿನಿಮಾಗಳ ಮುಹೂರ್ತ ನಡೆದಿದೆ. ಒಬ್ಬ ನಟಿಗೆ ಒಂದೇ ದಿನದಲ್ಲೇ ಮೂರು ಹೊಸ ಸಿನಿಮಾಗಳು ಸೆಟ್ಟೇರುವುದು ಅಂದ್ರೆ ಅದು ತಮಾಷೆಯ ಮಾತಂತೂ ಅಲ್ಲವೇ ಅಲ್ಲ. ಮುಂದೆ ಓದಿ....

ಒಂದೇ ದಿನ ಮೂರು ಸಿನಿಮಾ

ರಾಗಿಣಿ ಅಭಿನಯದಲ್ಲಿ ಒಂದೇ ದಿನ ಮೂರು ಹೊಸ ಸಿನಿಮಾಗಳು ಸೆಟ್ಟೇರಿದೆ. ಇವುಗಳ ಪೈಕಿ ಮುಸ್ಸಂಜೆ ಮಹೇಶ್ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.

ಆದಿತ್ಯ-ರಾಗಿಣಿ ಜೋಡಿ

ನಿರ್ದೇಶಕ ಮುಸ್ಸಂಜೆ ಮಹೇಶ್‌ ಅವರ ಈ ಚಿತ್ರದಲ್ಲಿ ರಾಗಿಣಿಗೆ ನಟ ಡೆಡ್ಲಿ ಆದಿತ್ಯ ಜೋಡಿಯಾಗಿದ್ದಾರೆ. ನಿನ್ನೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ರಾಗಿಣಿ-ಆದಿತ್ಯ ಮದುವೆ ಸನ್ನಿವೇಶದಲ್ಲಿ ಮಿಂಚಿದರು.[ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ..]

ಆಫ್ ದಿ ರೆಕಾರ್ಡ್

ನಿರ್ದೇಶಕ ಮುಸ್ಸಂಜೆ ಮಹೇಶ್ ಮತ್ತು ರಾಗಿಣಿ ಕಾಂಬಿನೇಷನ್ ನಲ್ಲಿ ಇನ್ನೂ ಎರಡು ಸಿನಿಮಾ ಬರಲಿವೆಯಂತೆ. ಈ ವಿಷಯವನ್ನು ಸ್ವತಃ ಮುಸ್ಸಂಜೆ ಮಹೇಶ್ ಆಫ್ ದಿ ರೆಕಾರ್ಡ್ ಹೇಳಿಕೊಂಡಿದ್ದಾರೆ.

ನಾನೇ ನೆಕ್ಟ್ ಸಿಎಂ

ರಾಗಿಣಿ ಅಭಿನಯದ 'ನಾನೇ ನೆಕ್ಟ್ ಸಿಎಂ' ಸಿನಿಮಾ ರಿಲೀಸ್ ಗೆ ರೆಡಿ ಇದೆ. ಈ ಸಿನಿಮಾಗೂ ಸಹ ಮುಸ್ಸಂಜೆ ಮಹೇಶ್ ಆಕ್ಷನ್ ಕಟ್ ಹೇಳಿರುವುದು ವಿಶೇಷ.['ಸೂಪರ್' ಆಗೊಂದು 'ಟಾಕ್ ಶೋ', ಮೊದಲ ವಾರ ರಕ್ಷಿತಾ-ರಾಗಿಣಿ ಅತಿಥಿ]

ಟೀಚರ್ ರಾಗಿಣಿ

ಜೋಗಿ ಪ್ರೇಮ್ ನಟನೆಯ 'ಗಾಂಧಿಗಿರಿ' ಸಿನಿಮಾದಲ್ಲಿ ರಾಗಿಣಿ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ.

ಕಿಚ್ಚು

ರಾಗಿಣಿ 'ಕಿಚ್ಚು' ಎನ್ನುವ ವಿಭಿನ್ನ ಸಿನಿಮಾದಲ್ಲಿ ನಟಿಸಿದ್ದು, ಇಲ್ಲಿ ಅವರದ್ದು ಡಿಗ್ಲಾಮರಸ್ ರೋಲ್ ಅಂತೆ.

ಅಮ್ಮ

ಈ ಹಿಂದೆಯೇ ಶುರುವಾಗಿದ್ದ ರಾಗಿಣಿ ನಟನೆಯ 'ಅಮ್ಮ' ಸಿನಿಮಾದ ಚಿತ್ರೀಕರಣಕ್ಕೆ ಈ ವರ್ಷ ಮತ್ತೆ ಚಾಲನೆ ಸಿಗಲಿದೆ.

ಕಳೆದ ವರ್ಷ ಒಂದೇ ಸಿನಿಮಾ

ಕಳೆದ ವರ್ಷ ರಾಗಿಣಿ 'ರಣಚಂಡಿ' ಎನ್ನುವ ಒಂದೇ ಒಂದು ಸಿನಿಮಾ ಮಾಡಿದ್ದರು. ಆದರೆ ಈಗ ಒಂದೇ ದಿನಕ್ಕೆ ಮೂರು ಸಿನಿಮಾ ಶುರುವಾಗಿವೆ.

English summary
Kannada Actress 'Ragini Dwivedi' in demand in Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada