ಬುಲೆಟ್ ಪ್ರಕಾಶ್ ನಾಲ್ಕೇ ದಿನ ಬಿಗ್ ಬಾಸ್ ಮನೆಯೊಳಗೆ ಇದ್ದಿದ್ದೇಕೆ? ಮಗ ರಕ್ಷಕ್ ಹೇಳಿದ್ದೇನು?
ಕಿರುತೆರೆಯಲ್ಲಿ ಬಿಗ್ ಬಾಸ್ ಹವಾ ಜೋರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಮಾಲ್ ಸ್ಕ್ರೀನ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೀಸನ್ 10 ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಬುಲೆಟ್ ಪ್ರಕಾಶ್ ಪುತ್ರ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಮೂಲಕ ತಂದೆ-ಮಗ ಇಬ್ಬರೂ ಮನೆಯೊಳಗೆ ಪ್ರವೇಶ ಮಾಡಿದಂತಾಗಿದೆ.
ಬಹುಶ: ತಂದೆ ಹಾಗೂ ಮಗ ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದು ಬಿಗ್ ಬಾಸ್ ಇತಿಹಾಸದಲ್ಲೇ ಕನ್ನಡದಲ್ಲಿ ಮೊದಲ ಎನ್ನಲಾಗಿದೆ. ಸದ್ಯ ರಕ್ಷಕ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ಬಗ್ಗೆ ಸಂದರ್ಶನಗಳಲ್ಲಿ ಅಸಮಧಾನವನ್ನು ಹೊರಹಾಕುತ್ತಿದ್ದಾರೆ.

ಇನ್ನೊಂದು ಕಡೆ ದಿವಂಗತ ಬುಲೆಟ್ ಪ್ರಕಾಶ್ ಎರಡನೇ ಸೀಸನ್‌ನಲ್ಲೇ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಆ ವೇಳೆ ಕೇವಲ ನಾಲ್ಕು ದಿನಕ್ಕೆ ಮನೆಯಿಂದ ಹೊರಬಂದಿದ್ದರು. ಅದ್ಯಾಕೆ ಅನ್ನೋದನ್ನು ರಕ್ಷಕ್ ಬುಲೆಟ್ ಗೌರೀಶ್ ಅಕ್ಕಿ ಯೂಟ್ಯೂಬ್‌ನಲ್ಲಿ ರಿವೀಲ್ ಮಾಡಿದ್ದಾರೆ. ಅಲ್ಲದೆ ತನಗಾದ ಅನುಭವವನ್ನೂ ಹೇಳಿಕೊಂಡಿದ್ದಾರೆ.
ತಂದೆ-ಮಗನ ಅನುಭವ ಹೇಗಿತ್ತು?
ಬಿಗ್‌ಬಾಸ್ ಸೀಸನ್ 2ಗೆ ಬುಲೆಟ್ ಪ್ರಕಾಶ್ ಎಂಟ್ರಿ ಕೊಟ್ಟಿದ್ದರು. ಅದೇ ಬಿಗ್ ಬಾಸ್ ಕನ್ನಡ ಸೀಸನ್ 10ಗೆ ರಕ್ಷಕ್ ಬುಲೆಟ್ ಹೋಗಿ ಬಂದಿದ್ದಾರೆ. ಈ ಸಂದರ್ಶನದಲ್ಲಿ ಅಪ್ಪ-ಮಗ ಇಬ್ಬರಿಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. "ನಮ್ಮ ಅಪ್ಪನಿಗೆ ಬಿಗ್ ಬಾಸ್ ಮನೆಯೊಳಗೆ ಹೋಗಬೇಕು. ಆ ಸೋಫಾ ಒಳಗೆ ಕೂರಬೇಕು ಅನ್ನೋ ಆಸೆಯಿತ್ತು. ನನಗೆ ಮನೆಯೊಳಗೆ ಹೇಗಿರುತ್ತೆ ಅನ್ನೋದನ್ನು ಎಕ್ಸ್‌ಪೀರಿಯನ್ಸ್ ಮಾಡಬೇಕು ಅನ್ನೋ ಆಸೆಯಿತ್ತು." ಎಂದು ರಕ್ಷಕ್ ಬುಲೆಟ್ ಹೇಳಿಕೊಂಡಿದ್ದಾರೆ.

ಬುಲೆಟ್ ಪ್ರಕಾಶ್ ನಾಲ್ಕೇ ದಿನ ಇದ್ದಿದ್ದೇಕೆ?
ಬುಲೆಟ್ ಪ್ರಕಾಶ್ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದೇನೋ ನಿಜ. ಆದರೆ, ನಾಲ್ಕು ದಿನಗಳ ಒಳಗಾಗಿಯೇ ಮನೆಯಿಂದ ಹೊರಬಂದಿದ್ದರು. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಸೀಸನ್ 2ಗೆ ನಮ್ಮ ಅಪ್ಪ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದರು. ನಾಲ್ಕು ದಿನ ಇರ್ತಾರೆ. ಅವರಿಗೆ ಆ ಲೈಫ್ ಸ್ಟೈಲ್ ಇಷ್ಟ ಆಗಲ್ಲ. ನಾಲ್ಕು ದಿನಕ್ಕೆ ಆಚೆ ಬರ್ತಾರೆ. ಬೇಡಪ್ಪ ನನಗೆ ಈ ಸಹವಾಸ ಅಂಡ್ಬಿಟ್ಟು. ಅವರು ಹೊರಗೆ ಬಂದ್ಮೇಲೆ ನಾನು ಕೇಳಿದ್ದು, ಊಟ ತುಂಬಾನೇ ಕಡಿಮೆ ಇರುತ್ತೆ. ನಿದ್ದೆ ಮಾಡೋ ಟೈಂ ತುಂಬಾನೇ ಕಡಿಮೆ ಇರುತ್ತೆ. ಕೆಲವು ಕೋಪ ತರಿಸೋ ಮಾತಾಡುತ್ತಾರೆ. ನಾವು ಹಲ್ಲು ಕಚ್ಚಿಕೊಂಡು ಇರಬೇಕು ಅಂದಿದ್ರು" ಎಂದು ತಂದೆಯ ಬಿಗ್ ಬಾಸ್ ಜರ್ನಿಯನ್ನು ರಕ್ಷಕ್ ಬುಲೆಟ್ ನೆನೆದಿದ್ದಾರೆ.
ನಾನು ಸ್ವಲ್ಪ ಕೋಪಿಷ್ಠ
"ನಾನು ಇರೋದೇ ಹಾಗೆ ಸ್ವಲ್ಪ ಕೋಪಿಷ್ಠ. ಬಿಗ್ ಬಾಸ್ ಮನೆಯೊಳಗೆ ಸ್ವಲ್ಪ ತಾಳ್ಮೆ ಕಲಿತೆ. ಅನ್ನದ ಬೆಲೆ ಕಲಿತೆ. ಚೆನ್ನಾಗಿತ್ತು ಎಕ್ಸ್‌ಪೀರಿಯನ್ಸ್. ವಿಭಿನ್ನ ಪರ್ಸನಾಲಿಟಿಸ್ ಇತ್ತು. ನನಗೇನು ಹೊಸದಂತೆ ಏನೂ ಅನಿಸಿಲ್ಲ. ಆದರೆ, ಮನೆಯೊಳಗೆ 24 ಗಂಟೆ ಏನು ಮಾಡ್ತಾರೆ? ಯಾಕಂದ್ರೆ, ನೀವು ಒಂದೂವರೆ ಗಂಟೆ ನೋಡ್ತೀರ. ನಾವೇನು ಮಾಡ್ತೀವಿ ಅನ್ನೋದು ಯಕ್ಷ ಪ್ರಶ್ನೆ ಆಗಿತ್ತು. ಎಂಜಾಯ್ ಮಾಡಿದೆ. ಅಪ್ಪ ಮಗ ಇಬ್ಬರೂ ಹೋಗಿದ್ದು ಖುಷಿ ಆಯ್ತು" ಎಂದು ರಕ್ಷಕ್ ಹೇಳಿದ್ದಾರೆ.
ಹೀಗಂದಿದ್ದರೆ ಹೋಗುತ್ತಲೇ ಇರಲಿಲ್ಲ
24 ಗಂಟೆ ನಡೆದಿದ್ದನ್ನು ಕೇವಲ ಒಂದೂವರೆ ಗಂಟೆಗಳಲ್ಲಿ ಎಡಿಟ್ ಮಾಡಿ ತೋರಿಸುತ್ತಾರೆ. 24 ಗಂಟೆ ಸುಮ್ಮನೆ ಕೂರುವುದಕ್ಕಂತೂ ಆಗುವುದಿಲ್ಲ. ನನ್ನ ಕೆಲವು ಪೋಷನ್ ಅನ್ನು ಕಟ್ ಮಾಡಿದ್ದಾರೆ. ಕೆಲವು ನೆಗೆಟಿವ್ ಅಂಶಗಳನ್ನು ಮಾತ್ರ ತೋರಿಸಿದ್ದಾರೆ. ಹೀಗೆ ಅಂತ ಗೊತ್ತಿದ್ದರೆ, ನಾನು ಬಿಗ್ ಬಾಸ್ ಮನೆಯೊಳಗೆ ಹೋಗುತ್ತಲೇ ಇರಲಿಲ್ಲ" ಎಂದು ರಕ್ಷಕ್ ಬುಲೆಟ್ ಹೇಳಿದ್ದಾರೆ.


Click it and Unblock the Notifications











