ಕ್ರೇಜಿಕ್ವೀನ್ ರಕ್ಷಿತಾರ ಮೊದಲ ಸೆಲೆಬ್ರಿಟಿ ಕ್ರಷ್ ಇವರಂತೆ..!
ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡ ಕಲಾರಸಿಕರಿಗೆ ಮನರಂಜನೆ ನೀಡುತ್ತಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ 'ಕಲರ್ಸ್ ಸೂಪರ್' ಚಾನೆಲ್ ನಲ್ಲಿ 'ಸೂಪರ್ ಟಾಕ್ ಟೈಮ್' ಎಂಬ ಹೊಸ ಟಾಕ್ ಶೋ ಶುರುವಾಗಿದೆ. ಈ ಬಗ್ಗೆ ನಾವೇ ಹೇಳಿದ್ವಿ.[ಇಂದಿನಿಂದ ಕಲರ್ಸ್ ಸೂಪರ್ ಚಾನೆಲ್ ನಲ್ಲಿ 'ಸೂಪರ್ ಟಾಕ್ ಟೈಮ್' ಶುರು]
ಸೆಲೆಬ್ರಿಟಿಗಳಿಗೆ ತರ್ಲೆ ಪ್ರಶ್ನೆಗಳನ್ನು ಕೇಳುತ್ತಾ, ವೀಕ್ಷಕರಿಗೆ ಮನರಂಜನೆ ನೀಡುವ ಅಕುಲ್ ಬಾಲಾಜಿ ನಿರೂಪಣೆಯ 'ಸೂಪರ್ ಟಾಕ್ ಟೈಮ್' ಮೊದಲ ಎಪಿಸೋಡ್ ಜೂನ್ 1 ರಂದು ಪ್ರಸಾರವಾಗಿದೆ.
'ಸೂಪರ್ ಟಾಕ್ ಟೈಮ್' ಮೊದಲ ಎಪಿಸೋಡ್ ಗೆ ಅತಿಥಿಯಾಗಿ ಬಂದಿದ್ದ ನಟಿ ರಕ್ಷಿತಾ ಪ್ರೇಮ್, ಅಕುಲ್ ಬಾಲಾಜಿ ಕೇಳಿದ 'ತಮ್ಮ ಮೊದಲ ಸೆಲೆಬ್ರಿಟಿ ಕ್ರಷ್ ಯಾರು' ಎಂಬುದಕ್ಕೆ ಉತ್ತರಿಸಿದ್ದಾರೆ. ರಕ್ಷಿತಾ ಪ್ರೇಮ್ ಅವರ ಫಸ್ಟ್ ಸೆಲೆಬ್ರಿಟಿ ಕ್ರಷ್ ಯಾರು? ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ಯಾ.. ಹಾಗಿದ್ರೆ ಮುಂದೆ ಓದಿರಿ..

ನಿಮ್ಮ ಮೊದಲ ಸೆಲೆಬ್ರಿಟಿ ಕ್ರಷ್ ಯಾರು?
ಜೂನ್ 1 ರಂದು ಪ್ರಸಾರವಾದ 'ಸೂಪರ್ ಟಾಕ್ ಟೈಮ್' ಮೊದಲ ಎಪಿಸೋಡ್ ನಲ್ಲಿ ನಿರೂಪಕ ಅಕುಲ್ ಬಾಲಾಜಿ ರವರು ರಕ್ಷಿತಾ ಪ್ರೇಮ್ ಅವರಿಗೆ ಈ ಪ್ರಶ್ನೆಗೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಕ್ರೇಜಿಕ್ವೀನ್ ಸಲ್ಮಾನ್ ಖಾನ್ ಎಂದು ಉತ್ತರಿಸಿದ್ದಾರೆ.

ಯಾವ ಟೈಮ್ ನಲ್ಲಿ?
ಅಕುಲ್ ಈ ಪ್ರಶ್ನೆಗೆ ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್, "ಸಲ್ಮಾನ್ ಖಾನ್ ಅಭಿನಯದ 'ಮೈನೇ ಪ್ಯಾರ್ ಕಿಯಾ(Maine Pyar Kiya)' ಚಿತ್ರ ನೋಡಿ ಅವರ ಮೇಲೆ ಕ್ರಷ್ ಆಗಿತ್ತು" ಎಂದರು.

ಸಲ್ಲು ಮೇಲೆ ಕ್ರಷ್ ಆದಾಗ ವಯಸ್ಸೆಷ್ಟು?
ಬಹುಭಾಷಾ ನಟಿ ರಕ್ಷಿತಾ ಪ್ರೇಮ್ ಗೆ ಸಲ್ಲು ಮೇಲೆ ಕ್ರಷ್ ಆಗಿದ್ದು ಅವರು ಚಿತ್ರತಂಗಕ್ಕೆ ಎಂಟ್ರಿಕೊಟ್ಟ ನಂತರವಲ್ಲ. ಅವರು 7ನೇ ವಯಸ್ಸಿನಲ್ಲಿದ್ದಾಗಲೇ ಸಲ್ಲು ಮೇಲೆ ಅವರ 'ಮೈನೇ ಪ್ಯಾರ್ ಕಿಯಾ' ಚಿತ್ರ ನೋಡಿ ಕ್ರಷ್ ಆಗಿತ್ತಂತೆ.

6 ಅಡಿ ಸಲ್ಲು ಪೋಸ್ಟರ್ ಗಿಫ್ಟ್ ನೀಡಿದ್ದ ತಾಯಿ
ರಕ್ಷಿತಾ ರವರು 15 ವರ್ಷದವರಾಗಿದ್ದಾಗ ಅವರ ತಾಯಿ 6 ಅಡಿ ಉದ್ದದ ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ಪೋಸ್ಟರ್ ಗಿಫ್ಟ್ ನೀಡಿದ್ದರಂತೆ.

ದೇವರ ಬದಲು ಸಲ್ಲು ನೋಡುತ್ತಿದ್ದ ರಕ್ಷಿತಾ
ರಕ್ಷಿತಾ ಸಲ್ಮಾನ್ ಖಾನ್ ರ 6 ಅಡಿ ಉದ್ದದ ಸಿಕ್ಸ್ ಪ್ಯಾಕ್ ಪೋಸ್ಟರ್ ಅನ್ನು ಬೆಡ್ ರೂಂ ಬಾಗಿಲಿಗೆ ಅಂಟಿಸಿಕೊಂಡಿದ್ದರಂತೆ. ಬೆಳಿಗ್ಗೆ ವೇಳೆ ಎದ್ದಾಗ ದೇವರ ಮುಖ ನೋಡುವ ಬದಲು ಸಲ್ಲು ಮುಖ ನೋಡುತ್ತಿದ್ದರಂತೆ.


Click it and Unblock the Notifications











