For Quick Alerts
  ALLOW NOTIFICATIONS  
  For Daily Alerts

  ಇಂದಿನಿಂದ ಕಲರ್ಸ್ ಸೂಪರ್ ಚಾನೆಲ್ ನಲ್ಲಿ 'ಸೂಪರ್ ಟಾಕ್ ಟೈಮ್' ಶುರು

  By Harshitha
  |

  'ಮಜಾ ಭಾರತ', ಶಾಂತಂ ಪಾಪಂ'.. ನಂತಹ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಾ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಈಗ 'ಸೂಪರ್ ಟಾಕ್ ಟೈಮ್' ಎಂಬ ಹೊಸ ಟಾಕ್ ಶೋ ಆರಂಭವಾಗುತ್ತಿದೆ.

  ಇಂದಿನಿಂದ (ಜೂನ್ 1) ಪ್ರತಿ ಗುರುವಾರ ಹಾಗೂ ಶುಕ್ರವಾರ ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಸೂಪರ್ ಟಾಕ್ ಟೈಮ್' ಪ್ರಸಾರ ಆಗಲಿದೆ. ['ಸೂಪರ್' ಆಗೊಂದು 'ಟಾಕ್ ಶೋ', ಮೊದಲ ವಾರ ರಕ್ಷಿತಾ-ರಾಗಿಣಿ ಅತಿಥಿ]

  ಈಗಾಗಲೇ ರಿಯಾಲಿಟಿ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಅಕುಲ್ ಬಾಲಾಜಿ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

  ಸೆಲೆಬ್ರಿಟಿ ಶೋ

  ಸೆಲೆಬ್ರಿಟಿ ಶೋ

  ಇದೊಂದು ಸೆಲೆಬ್ರಿಟಿ ಶೋ ಆಗಿದ್ದು, ಪ್ರತಿ ಸಂಚಿಕೆಯಲ್ಲಿಯೂ ಇಬ್ಬರು ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸುತ್ತಾರೆ. ಅದರಂತೆ, ಫನ್, ಗೇಮ್ಸ್, ಒಂದಷ್ಟು ಹರಟೆ, ಅಕುಲ್ ನ ತಲೆಹರಟೆ, ಗಾಸಿಪ್... ಎಲ್ಲವೂ ಡಬಲ್ ಇರುತ್ತೆ.[ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಜ್ವಲ್- ರಾಗಿಣಿ ಚಂದ್ರನ್ ಜೋಡಿ]

  ತರ್ಲೆ ಪ್ರಶ್ನೆ: ಮಸ್ತ್ ಮಜಾ

  ತರ್ಲೆ ಪ್ರಶ್ನೆ: ಮಸ್ತ್ ಮಜಾ

  ಅಕುಲ್ ಕೇಳುವ ತರ್ಲೆ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಉತ್ತರಿಸಲು ಪೇಚಾಟಕ್ಕೆ ಸಿಲುಕಬಹುದು. ಇದು ವೀಕ್ಷಕರಿಗೆ ಮಜಾ ನೀಡುವುದರಲ್ಲಿ ಡೌಟೇ ಬೇಡ. ಸೆಲೆಬ್ರಿಟಿಗಳನ್ನು ಕಾಲೆಳೆಯುತ್ತಲೇ, ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುವ ಶೋ ಇದಾಗಿದೆ.['ಚಿರಂಜೀವಿ ಸರ್ಜಾ-ಮೇಘನಾ ರಾಜ್' ಲವ್ ಸ್ಟೋರಿ ನಿಜವೋ.? ಸುಳ್ಳೋ.?]

  ಯಾರ್ಯಾರೆಲ್ಲಾ ಭಾಗವಹಿಸುತ್ತಾರೆ.?

  ಯಾರ್ಯಾರೆಲ್ಲಾ ಭಾಗವಹಿಸುತ್ತಾರೆ.?

  ಮೊದಲ ಸಂಚಿಕೆಯಲ್ಲಿ ರಕ್ಷಿತಾ ಪ್ರೇಮ್ ಮತ್ತು ರಾಗಿಣಿ ದ್ವಿವೇದಿ ಅತಿಥಿಗಳಾಗಿ ಭಾಗವಹಿಸಲಿದ್ದು, ಮುಂದಿನ ಸಂಚಿಕೆಗಳಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ಚಿರಂಜೀವಿ ಸರ್ಜಾ, ಪ್ರಿಯಾಮಣಿ, ಪ್ರಜ್ವಲ್ ದೇವರಾಜ್, ಮೇಘನಾ ರಾಜ್, ಯೋಗಿ, ನೀನಾಸಂ ಸತೀಶ್, ಸಿಂಧೂ ಲೋಕನಾಥ್, ರಘು ದೀಕ್ಷಿತ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

  ಅಕುಲ್ ಬಾಲಾಜಿ ಏನಂತಾರೆ.?

  ಅಕುಲ್ ಬಾಲಾಜಿ ಏನಂತಾರೆ.?

  ಕಾರ್ಯಕ್ರಮದ ಹೋಸ್ಟ್ ಅಕುಲ್ ಬಾಲಾಜಿ ಹೇಳುವಂತೆ, ''ಈ ಕಾರ್ಯಕ್ರಮ ನನಗೆ ಒಂದು ಹೊಸ ಅನುಭವ ನೀಡುವಂಥದ್ದು, ಇಲ್ಲಿಯವರೆಗೂ ಸಾಕಷ್ಟು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದೇನೆ. ಈಗ ಟಾಕ್ ಶೋ ಹೋಸ್ಟ್ ಮಾಡುವ ಅವಕಾಶ ಸಿಕ್ಕಿದೆ. 'ಸೂಪರ್ ಟಾಕ್ ಟೈಮ್' ಟೋಟಲ್ ಫನ್ ನೀಡುವ ಶೋ. ನಾನು ಮಾಡಿರುವ ಎಲ್ಲ ಶೋಗಳಲ್ಲಿ ತಲೆಹರಟೆಗೆ ಇರುತ್ತಿದ್ದ ಅವಕಾಶ ಕಮ್ಮಿ. ಆದರೆ ಇಲ್ಲಿ ಕಂಪ್ಲೀಟ್ ಹರಟೆ, ಮಸ್ತಿ ಜೊತೆಗೆ ಸೆಲೆಬ್ರಿಟಿಗಳ ಕಾಲೆಳೆಯುವ ಅವಕಾಶ. ಅದು ಒಬ್ಬರಲ್ಲ ಇಬ್ಬರು''

  English summary
  Super Talk Time: New show hosted by Akul Balaji to telecast from today, June 1st in Colors Super Channel at 9 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X