Ramachari Serial:ಶ್ರುತಿ ಗರ್ಭಿಣಿ.. ಮೋಸ ಮಾಡಿದವನಿಗಾಗಿ ಮಾಸ್ ಅವತಾರವೆತ್ತಿ ಬೆಂಡೆತ್ತಿದ ಚಾರುಲತಾ..

ಕಳೆದ ಕೆಲವು ದಿನಗಳಿಂದ 'ರಾಮಾಚಾರಿ' ಧಾರಾವಾಹಿಯ ಎಪಿಸೋಡ್‌ಗಳು ಸೆಂಟಿಮೆಂಟ್‌ ಮೂಡ್‌ನಲ್ಲಿ ಸಾಗುತ್ತಿತ್ತು. ಚಾರುಲತಾ ಸೈಲೆಂಟ್‌ಗಾಗಿದ್ದಳು. ಅತ್ತೆ ಇದ್ದಕ್ಕಿದ್ದ ಹಾಗೇ ಚಾರುಲತಾಗೆ ಟಾರ್ಗೆಟ್ ಮಾಡುವಂತಹ ಸಂದರ್ಭ ಎದುರಾಗಿತ್ತು. ಅತ್ತೆಯ ವರ್ತನೆ ಕಂಡ ಚಾರುಲತಾ ಗೊಂದಲಕ್ಕೆ ಬಿದ್ದಿದ್ದಳು. ಕೊನೆಗೂ ಈ ಸೆಂಟಿಮೆಂಟ್‌ಗೆಲ್ಲ ತೆರೆ ಬಿದ್ದಿದೆ. ಚಾರುಲತಾ ಮಾಸ್ ಅವತಾರವೆತ್ತಿದ್ದಾಳೆ.

ಇಷ್ಟು ದಿನ ಅತ್ತೆ ಕೈಯಲ್ಲಿ ಏಟು ತಿಂದು ಮಂಕಾಗಿದ್ದ ಚಾರುಲತಾ ದಿಢೀರನೇ ಬದಲಾಗಿದ್ದೇಕೆ? ಅನ್ನೋ ಪ್ರಶ್ನೆ ಎದ್ದೇಳುವುದು ಸಹಜ. ಆದರೆ, ಅದಕ್ಕೊಂದು ಕಾರಣವಿದೆ. ಚಾರುಲತಾ ಮೇಲೆ ಅತ್ತೆ ಪ್ರೀತಿ ಇದ್ದರೂ ದ್ವೇಷ ಮಾಡಿದ್ದೇಕೆ? ಅದಕ್ಕೆ ಶ್ರುತಿ ಹೇಗೆ ಕಾರಣ ಅಂತ ಗೊತ್ತಾಗಿದ್ದು ಹೇಗೆ? ಈ ಎಲ್ಲಾ ಸನ್ನಿವೇಶಗಳು ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುವುದಕ್ಕೆ ಶುರು ಮಾಡಿದೆ.

Ramachari Kannada serial Feb 13th 2025 episode about Charulatha in action mood

ಕಲರ್ಸ್ ಕನ್ನಡ 'ರಾಮಾಚಾರಿ' ಧಾರಾವಾಹಿಯ ಪ್ರೋಮೊ ಒಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಚಾರುಲತಾ ಆಂಗ್ರಿ ವುಮನ್ ಅವತಾರವೆತ್ತದಿದ್ದಾಳೆ. ಒಂದಿಷ್ಟು ಮಂದಿಗೆ ಬಾರಿಸಿದ್ದಾಳೆ. ಮಾಸ್ ಡೈಲಾಗ್ ಬಿಟ್ಟಿದ್ದಾಳೆ. ಈ ವಿಡಿಯೋ ನೋಡಿದರೆ, 'ರಾಮಾಚಾರಿ' ಮಾಸ್ ಆಕ್ಷನ್ ಅನ್ನು ನಿರೀಕ್ಷೆ ಮಾಡಬಹುದು ಅನಿಸುತ್ತಿದೆ. ಸದ್ಯ ಹೊರ ಬದ್ದಿರೋ ವಿಡಿಯೋ ವೀಕ್ಷಕರಿಗೆ ಸಖತ್ ಕಿಕ್ ಕೊಡುತ್ತಿದೆ.

ಹೌದು, ಚಾರುಲತಾಗೆ ಅಸಲಿ ಸತ್ಯ ಗೊತ್ತಾಗಿಬಿಟ್ಟಿದೆ. ಅತ್ತೆ ಜಾನಕಿ ವರ್ತನೆ ಬದಲಾಗಿತ್ತು. ಸುಖಾಸುಮ್ಮನೆ ಚಾರುಲತಾ ಜೊತೆ ಕಿತ್ತಾಡುತ್ತಿದ್ದರು.ಕೆಲವೊಮ್ಮೆ ಸಿಲ್ಲಿ ಕಾರಣಕ್ಕೆ ಚಾರುಲತಾಗೆ ಬಾರಿಸಿದ್ದು ಕೂಡ ಇದೆ. ಅತ್ತೆ ಹೀಗ್ಯಾಕೆ ಒರಟಾಗಿ ನಡೆದುಕೊಳ್ಳುತ್ತಿದ್ದಾರೆ ಅನ್ನೋ ಗೊಂದಲದಲ್ಲಿ ಇರುವಾಗಲೇ ಚಾರುಲತಾಗೆ ಅಸಲಿ ಮ್ಯಾಟರ್ ಗೊತ್ತಾಗಿ ಹೋಗಿದೆ. ಅಲ್ಲಿಂದ ಚಾರುಲತಾ ಮಾಸ್ ಅವತಾರದಲ್ಲಿ ವೀಕ್ಷಕರ ಮುಂದೆ ಪ್ರತ್ಯಕ್ಷ ಆಗಿಬಿಟ್ಟಿದ್ದಾಳೆ.

Ramachari Kannada serial Feb 13th 2025 episode about Charulatha in action mood

ಇನ್ನು 'ರಾಮಾಚಾರಿ' ಧಾರಾವಾಹಿ ಪ್ರೋಮೊದಲ್ಲಿ ಕೆಲವು ಸಂಗತಿಗಳನ್ನು ರಿವೀಲ್ ಮಾಡಲಾಗಿದೆ. ಇಲ್ಲಿ ಶ್ರುತಿ ಮೋಸ ಆಗಿದೆ. ಶ್ರುತಿ ಗರ್ಭಿಣಿಯಾಗಿದ್ದಾಳೆ ಅಂತ ಗೊತ್ತಾಗುತ್ತಿದ್ದಂತೆ ಜಾನಕಿಗೆ ಟೆನ್ಷನ್ ಹೆಚ್ಚಾಗಿದೆ. ಅದಕ್ಕೆ ಯಾಕೆ ಚಾರುಲತಾ ಜೊತೆ ಕಿತ್ತಾಡಬೇಕು ? ಅನ್ನೋ ಪ್ರಶ್ನೆ ಎದುರಾದಾಗಲೇ ಯಾರೋ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಅನ್ನೋ ವಿಷಯವನ್ನು ಜಾನಕಿನೇ ಶ್ರುತಿ ಬಳಿ ಹೇಳಿದ್ದಾರೆ ಕೋಪ ಹೊರಹಾಕಿದ್ದಾರೆ. ಇದರಿಂದ ನೊಂದು ಶ್ರುತಿಗೆ ಬಾವಿಗೆ ಹಾರೋಕೆ ಹೋಗಿದ್ದಾಳೆ. ಅಷ್ಟರಲ್ಲಿ ಚಾರುಲತಾಗೆ ಅಸಲಿ ಮ್ಯಾಟರ್ ಗೊತ್ತಾಗಿದೆ.

ಆಗಲೇ ಕ್ಲಾಸ್ ಆಗಿದ್ದ ಚಾರುಲತಾ ಮಾಸ್ ಅವತಾರವೆತ್ತಿದ್ದಾಳೆ. ಶ್ರುತಿಯನ್ನು ಕರೆದುಕೊಂಡು ಮೋಸ ಮಾಡಿದವನನ್ನು ಹುಡುಕಿಕೊಂಡು ಹೊರಟಿದ್ದಾಳೆ. ಆ ವೇಳೆ ಎದುರಾದ ಪುಡಿ ರೌಡಿಗಳ ವಿರುದ್ಧ ಕಾಳಗಕ್ಕೆ ಬಿದ್ದಿದ್ದಾರೆ. ಆಗಲೇ ಒಂದು ಮಾಸ್ ಡೈಲಾಗ್ ಕೂಡ ಬಿದ್ದಿದೆ. ಅದೇನಂದ್ರೆ, "ಹೆಣ್ಣಿಗೆ ಅನ್ಯಾಯ ಆದಾಗ ಆ ದೇವರನ್ನು ಕರೆದರೆ ದೇವರು ಬರಲ್ಲ. ಆ ಹುಡುಗಿನೇ ದುರ್ಗಿ ಆಗಬೇಕಾಗುತ್ತೆ. ಕಾಳಿ ಆಗಬೇಕಾಗುತ್ತೆ. ಚಂಡಿ ಆಗಬೇಕಾಗುತ್ತೆ." ಎಂದಿದ್ದಾಳೆ.

ಇಷ್ಟೆಲ್ಲ ನೋಡಿದ ಮೇಲೆ ಚಾರುಲತಾ ಆಕ್ಷನ್ ಮೂಡಿಗೆ ಕಾರಿದ್ದು ಕನ್ಫರ್ಮ್ ಆಗಿದೆ. 'ರಾಮಾಚಾರಿ' ಧಾರಾವಾಹಿಯಲ್ಲಿ ಇನ್ಮುಂದೆ ಚಾರುಲತಾ ಮಾಸ್ ಮಹಿಳೆಯಾಗಿ ಕಾಣಿಸಿಕೊಳ್ಳಬಹುದು. ಸದ್ಯಕ್ಕೀಗ ಶ್ರುತಿಗೆ ಆಗಿರುವ ಮೋಸಕ್ಕೆ ನ್ಯಾಯ ಕೊಡಿಸುತ್ತಾಳಾ? ಚಾರುಲತಾ ಮಾಸ್ ಅವತಾರವನ್ನು ವೀಕ್ಷಕರು ಇಷ್ಟ ಪಡುತ್ತಾರಾ? ಚಾರುಲತಾ ಹಾಗೂ ರಾಮಾಚಾರಿಯ ಮುಂದಿನ ನಡೆ ಹೇಗಿರುತ್ತೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Ramachari Kannada serial Feb 13th 2025 episode about Charulatha in action mood
Read more about: serial filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X