Weekend With Ramesh: ಶೀಘ್ರದಲ್ಲೇ 'ವೀಕೆಂಡ್ ವಿತ್ ರಮೇಶ್' ಶೋ ಮತ್ತೆ ಶುರು.. ಕಂಪ್ಲೀಟ್ ಗೆಸ್ಟ್ ಲಿಸ್ಟ್ ಇದೇನೆ?

ಕನ್ನಡದ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರೋ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್'. ಕಳೆದ ನಾಲ್ಕು ಸೀಸನ್‌ಗಳು ಕಿರುತೆರೆಯ ವೀಕ್ಷಕರನ್ನು ಸೆಳೆದಿದೆ. ಆದರೆ, ಕೋವಿಡ್ ಕಾರಣದಿಂದ ಕಳೆದ ವರ್ಷ ವೀಕೆಂಡ್ ಸೀಸನ್ ಶುರುವಾಗಿರಲಿಲ್ಲ. ಈಗ ಮತ್ತೆ ಸೀಸನ್‌ 5 ಆರಂಭ ಆಗಲಿದೆ.

ವಿವಿಧ ಕ್ಷೇತ್ರಗಳ ದಿಗ್ಗಜರನ್ನು ವೇದಿಕೆ ಮೇಲೆ ಕರೆದು ಅವರ ಸಾಧನೆಯನ್ನು ವೀಕ್ಷಕರಿಗೆ ತೋರಿಸುವ ಕಾರ್ಯಕ್ರಮವೇ 'ವೀಕೆಂಡ್ ವಿತ್ ರಮೇಶ್'. ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳು ಈ ವೇದಿಕೆ ಮೇಲೆ ಅವರು ಬೆಳೆದು ಬಂದ ಹಾದಿಯನ್ನು ವೀಕ್ಷಕರ ಮುಂದಿಟ್ಟಿದ್ದಾರೆ. ಅದೆಷ್ಟೋ ಸಾಧಕರು ಈ ಕುರ್ಚಿಯನ್ನು ಅಲಂಕರಿಸಿದ್ದಾರೆ.

ಇದೀಗ ಮತ್ತೆ 'ವೀಕೆಂಡ್ ವಿತ್ ರಮೇಶ್' 5ನೇ ಸೀಸನ್ ಆರಂಭ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಸೀಸನ್ 5ರ ಮೊದಲ ಪ್ರೋಮೊವನ್ನು ರಿಲೀಸ್ ಮಾಡಲಾಗಿದೆ. ಜೊತೆಗೆ ಈ ಬಾರಿ ಜೀ ಕನ್ನಡ ಪಟ್ಟಿ ಮಾಡಿಕೊಂಡಿರೋ ಸಾಧಕರ ಸಂಭಾವನೀಯರ ಲಿಸ್ಟ್ ಹೀಗಿದೆ.

'ವೀಕೆಂಡ್ ವಿತ್ ರಮೇಶ್' ಪೋಮೊ ಔಟ್

'ವೀಕೆಂಡ್ ವಿತ್ ರಮೇಶ್' ಪೋಮೊ ಔಟ್

ಕಿರುತೆರೆಯಲ್ಲಿ ಕೇವಲ ಧಾರಾವಾಹಿಗಳನ್ನು ನೋಡುವ ವರ್ಗ ಅಷ್ಟೇ ಇಲ್ಲ. ರಿಯಾಲಿಟಿ ಶೋಗಳನ್ನು ಇಷ್ಟ ಪಡುವವರು ಒಂದು ವರ್ಗವಿದ್ದರೆ, ಇನ್ನೊಂದು ಕಡೆ ಇಂತಹ ಮಾಹಿತಿ ಆಧಾರಿತ ಟಾಕ್ ಶೋ ಅನ್ನು ನೋಡುವ ವರ್ಗ ಕೂಡ ಇದೆ. ಆದರೆ 'ವೀಕೆಂಡ್ ವಿತ್ ರಮೇಶ್' ಎಲ್ಲಾ ವರ್ಗದವರೂ ಇಷ್ಟ ಪಡುವ ಶೋ. ಅದರಲ್ಲೂ ರಮೇಶ್ ಅರವಿಂದ್ ನಿರೂಪಣೆಗೆ ಇಡೀ ಕರುನಾಡೇ ಮರುಳಾಗಿದೆ. ಇಷ್ಟು ದಿನ ಈ ಶೋ ಮಿಸ್ ಮಾಡಿಕೊಂಡಿದ್ದವರಿಗೆ ಕೊನೆಗೂ ಖುಷಿ ವಿಷಯ ಸಿಕ್ಕಿದೆ. 'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಮೊದಲ ಪ್ರೋಮೊ ರಿಲೀಸ್ ಆಗಿದೆ.

ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್

ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್

'ವೀಕೆಂಡ್ ವಿತ್ ರಮೇಶ್' ಸೀಸನ್ 5 ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಆರಂಭ ಆಗುತ್ತಿದೆ. ಹೀಗಾಗಿ ಜೀ ಕನ್ನಡ ಚಿಕ್ಕದೊಂದು ಪ್ರೋಮೊ ರಿಲೀಸ್ ಮಾಡಿದೆ. ಆ ಪ್ರೋಮೊದಲ್ಲಿ 'ರಂಗಿತರಂಗ' ಖ್ಯಾತಿಯ ರಾಧಿಕಾ ನಾರಾಯಣ್ ಕೂಡ ನಟಿಸಿದ್ದಾರೆ. ಶಿವಾಜಿ ಸೂರತ್ಕಲ್ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. ಅದೇ ಜೋಡಿ ಪ್ರೋಮೊದಲ್ಲೂ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರನ್ನು ಸೆಳೆಯುತ್ತಿದೆ.

ಮೊದಲ ಗೆಸ್ಟ್ ಯಾರು ಬರಬಹುದು?

ಮೊದಲ ಗೆಸ್ಟ್ ಯಾರು ಬರಬಹುದು?

'ವೀಕೆಂಡ್ ವಿಥ್ ರಮೇಶ್' ಸೀಸನ್ 5 ಆರಂಭ ಆಗುತ್ತಿದೆ ಅಂದ್ಮೇಲೆ ಗೆಸ್ಟ್ ಯಾರು? ಅನ್ನೋ ಕುತೂಹಲವಂತೂ ಮೂಡುತ್ತೆ. ಅದರಲ್ಲೂ ಮೊದಲ ಗೆಸ್ಟ್ ಯಾರು? ಅನ್ನೋದು ಎಲ್ಲರಲ್ಲೂ ಮೂಡಿರುವ ಪ್ರಶ್ನೆ. ಮೂಲಗಳ ಪ್ರಕಾರ, 'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಮೊದಲ ಗೆಸ್ಟ್ ಡಾಲಿ ಧನಂಜಯ್ ಅಥವಾ ರಿಷಬ್ ಶೆಟ್ಟಿ. ಇಬ್ಬರಲ್ಲಿ ಒಬ್ಬರು ಮೊದಲ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಅನ್ನೋ ಮಾಹಿತಿಯಿದೆ.

ಸೀಸನ್ 5ರ ಗೆಸ್ಟ್ ಲಿಸ್ಟ್ ಏನು?

ಸೀಸನ್ 5ರ ಗೆಸ್ಟ್ ಲಿಸ್ಟ್ ಏನು?

'ವೀಕೆಂಡ್ ವಿತ್ ರಮೇಶ್' ಸೀಸನ್ 5 ಗೆಸ್ಟ್ ಲಿಸ್ಟ್‌ ಈಗಾಗಲೇ ರೆಡಿಯಾಗಿದೆ. ಧನಂಜಯ್, ರಿಷನ್ ಶೆಟ್ಟಿ ಜೊತೆಗೆ ದಿಗ್ಗಜರ ದೊಡ್ಡ ಪಟ್ಟಿನೇ ಜೀ ಕನ್ನಡ ಬಳಿಯಿದೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ, ಹಿರಿಯ ನಟ ದತ್ತಣ್ಣ, ಮಾಲಾಶ್ರೀ, ಕಿಶೋರ್, ಡಾ.ಮಂಜುನಾಥ್, ಗವಿ ಸಿದ್ದೇಶ್ವರ, ನೆನಪಿರಲಿ ಪ್ರೇಮ್, ಅವಿನಾಶ್ ಹಾಗೂ ಮಾಳವಿಕ ಎಂದು ಹೇಳಲಾಗುತ್ತಿದೆ. ಇನ್ನು ಪ್ರೋಮೊ ರಿಲೀಸ್ ಆಗಿದ್ದು, ವೀಕ್ಷಕರು ಕಾರ್ಯಕ್ರಮ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

More from Filmibeat

English summary
Ramesh Aravind Hosting Weekend With Ramesh Season 5 Promo Released Here Is the probable guest List, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X