ಕಮಲ್ ಹಾಸನ್ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್ ನಿರೂಪಣೆ ಮಾಡಲಿರುವ ಸ್ಟಾರ್ ನಟಿ

ತಮಿಳು ಬಿಗ್‌ಬಾಸ್ ರಿಯಾಲಿಟಿ ಶೋ ಪ್ರಸಾರವಾಗುತ್ತಿರುವ ಸಮಯದಲ್ಲಿಯೇ ಶೋ ನಿರೂಪಕ ಕಮಲ್ ಹಾಸನ್ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕಮಲ್‌ಗೆ ಕೊರೊನಾ ಪಾಸಿಟಿವ್ ಆಗಿದ್ದು, ಅವರು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಮಲ್ ಹಾಸನ್ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್ ಶೋ ಅನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರೇ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಹೊಸ ಸುದ್ದಿಯ ಪ್ರಕಾರ ಶ್ರುತಿ ಹಾಸನ್ ಬಿಗ್‌ಬಾಸ್ ಶೋ ನಿರೂಪಣೆ ಮಾಡುವುದಿಲ್ಲ.

ಶ್ರುತಿ ಹಾಸನ್, ಬಿಗ್‌ಬಾಸ್ ಶೋ ನಿರೂಪಣೆ ಮಾಡುವುದಿಲ್ಲ ಬದಲಿಗೆ ಹಿರಿಯ ನಟಿಯೊಬ್ಬರು ಬಿಗ್‌ಬಾಸ್ ನಿರೂಪಣೆ ಮಾಡಲಿದ್ದಾರೆ. ಅವರೇ ಬಹುಭಾಷಾ ನಟಿ ರಮ್ಯಾಕೃಷ್ಣ. ಕಮಲ್ ಹಾಸನ್ ಗುಣಮುಖರಾಗಿ ಮರಳಿ ಬಿಗ್‌ಬಾಸ್ ಸೆಟ್‌ಗೆ ಬರುವವರೆಗೆ ರಮ್ಯಾಕೃಷ್ಣ ಅವರೇ ಬಿಗ್‌ಬಾಸ್ ಶೋ ನಿರೂಪಣೆ ಮಾಡಲಿದ್ದಾರೆ.

Ramya Krishna Will Host Tamil Bigg Boss Show Instead Of Kamal Haasan

ನಟಿ ರಮ್ಯಾಕೃಷ್ಣಗೆ ಕಿರುತೆರೆ ಹೊಸದೇನೂ ಅಲ್ಲ ಈವರೆಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ರಿಯಾಲಿಟಿ ಶೋಗಳಿಗೆ ಜಡ್ಜ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈಗಾಗಲೇ ಬಿಗ್‌ಬಾಸ್ ಶೋ ನಿರೂಪಣೆಯನ್ನೂ ಮಾಡಿ ಅನುಭವವಿದೆ ರಮ್ಯಾಕೃಷ್ಣಗೆ.

2019ರಲ್ಲಿ ನಟಿ ರಮ್ಯಾ ಕೃಷ್ಣ ತೆಲುಗು ಬಿಗ್‌ಬಾಸ್ ಶೋ ನಿರೂಪಣೆ ಮಾಡಿದ್ದರು. ಆ ವರ್ಷ ಶೋನ ನಿರೂಪಕ ನಾಗಾರ್ಜು ಚಿತ್ರೀಕರಣದ ಕಾರಣ ವೀಕೆಂಡ್‌ನ ಕೆಲವು ಎಪಿಸೋಡ್‌ಗಳನ್ನು ಚಿತ್ರೀಕರಿಸಲು ಸಾಧ್ಯವಾಗಿರಲಿಲ್ಲ ಹಾಗಾಗಿ ರಮ್ಯಾ ಕೃಷ್ಣ ಶೋ ನಿರೂಪಣೆ ಮಾಡಿದ್ದರು. ಇದೀಗ ತಮಿಳು ಬಿಗ್‌ಬಾಸ್ ಶೋಗೆ ಅತಿಥಿ ನಿರೂಪಕಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Ramya Krishna Will Host Tamil Bigg Boss Show Instead Of Kamal Haasan

ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಗಳ ಹಲವು ಸಿನಿಮಾಗಳಲ್ಲಿ ನಟಿಸಿರುವ ರಮ್ಯಾಕೃಷ್ಣಗೆ ಕಿರುತೆರೆ ಹೊಸದೇನೂ ಅಲ್ಲ. 2008 ರಿಂದಲೂ ರಮ್ಯಾಕೃಷ್ಣ ಕಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. 'ಕಲಸಂ' ಧಾರಾವಾಹಿಯಲ್ಲಿ ಮೊದಲಿಗೆ ನಟಿಸಿದ ರಮ್ಯಾಕೃಷ್ಣ ನಂತರ 'ರಾಜಕುಮಾರಿ', 'ತಂಗಂ', 'ವಂಶಂ', 'ನಾಗ ಭೈರವಿ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವುಗಳ ಜೊತೆಗೆ 'ಜೋಡಿ ನಂಬರ್ 1', 'ಬಿಗ್‌ಬಾಸ್ ಜೋಡಿಗಳ್', 'ತಂಗ ವೇಟ್ಟೈ', 'ಬಂಗಾರಂ ನೀ ಕೋಸಂ' ಇನ್ನೂ ಕೆಲವು ರಿಯಾಲಿಟಿ ಶೋಗಳನ್ನು ನಿರೂಪಣೆ ಸಹ ಮಾಡಿದ್ದಾರೆ.

More from Filmibeat

English summary
Actress Ramya Krishna will host Tamil Bigg Boss show instead of Kamal Haasan for some weekend episodes. Kamal Haasan in positive with COVID 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X