'ಪುಟ್ಟಗೌರಿ ಮದುವೆ' ಟ್ರೋಲ್‌ನಿಂದ ರಂಜನಿ ರಾಘವನ್ ನಟಿಸಿದ್ದ ಸಿನಿಮಾನೂ ಸೋತಿತ್ತು; ಏನಂತಾರೆ ನಟಿ?

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ಧಾರಾವಾಹಿ ಅಂದರೆ, ಅದು 'ಪುಟ್ಟ ಗೌರಿ ಮದುವೆ'. ಈ ಧಾರಾವಾಹಿ ಸುಮಾರು ಏಳು ವರ್ಷ ಪ್ರಸಾರ ಕಂಡು ಬಳಿಕ 'ಮಂಗಳಗೌರಿ ಮದುವೆ' ಅಂತ ಮರುನಾಮಕರಣಗೊಂಡು ಪ್ರಸಾರ ಮುಂದುವರೆಸಿತ್ತು. ಈ ಸೀರಿಯಲ್ ಹೆಚ್ಚು ಕಡಿಮೆ 11 ವರ್ಷಗಳ ಕಾಲ ಪ್ರಸಾರ ಕಂಡಿತ್ತು. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಅತೀ ಹೆಚ್ಚು ಪ್ರಸಾರ ಕಂಡ ಧಾರಾವಾಹಿ ಆಗಿತ್ತು.

ಇಷ್ಟೊಂದು ಜನಪ್ರಿಯತೆ ಕಂಡಿದ್ದ ಧಾರಾವಾಹಿ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್‌ಗಳಲ್ಲಿ 'ಪುಟ್ಟಗೌರಿ'ಯ ಸಾಹಸವೇ ಚರ್ಚೆಯಾಗುತ್ತಿತ್ತು. ಪುಟ್ಟಗೌರಿಯನ್ನು ಸಾಯಿಸುವುದಕ್ಕೆ ದೊಡ್ಡ ಬೆಟ್ಟದಿಂದ ತಳ್ಳಿದರು ಬದುಕಿದ್ದಳು. ಕಾಡಿನಲ್ಲಿ ಹುಲಿಯನ್ನು ಎದುರಿಸಿ ಜೀವ ಉಳಿಸಿಕೊಂಡಿದ್ದಳು. ಸರ್ಪದ ಕೈಯಿಂದ ಕಚ್ಚಿಸಿಕೊಳ್ಳದೆ ಬದುಕಿದ್ದಳು. ಈ ಸೀನ್‌ಗಳನ್ನು ನೋಡಿ ಪುಟ್ಟಗೌರಿ ಪಾತ್ರದಲ್ಲಿ ನಟಿಸುತ್ತಿದ್ದ ರಂಜನಿ ರಾಘವನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದರು.

Ranjani Raghavan open up about Puttagowri Maduve serial trolls that how affected her

ರಂಜನಿ ರಾಘವನ್ ಅವರನ್ನು 'ಜಂಗಲ್ ಗೌರಿ' ಅಂತ ಹೆಸರಿಟ್ಟು ಟ್ರೋಲ್ ಮಾಡಿದ್ದರು. ಇಷ್ಟೇ ಅಲ್ಲ. ಅಣ್ಣಾವ್ರ ಸಿನಿಮಾದ ಫೋಟೊ ಹಾಕಿ ಆಕ್ರೋಶಗೊಂಡವರಂತೆ "ಬೆಟ್ಟದಿಂದ ನೂಕಿದರೂ ಸಾಯಲಿಲ್ಲ, ಹುಲಿ ಕೊಲ್ಲಲಿಲ್ಲ, ಸರ್ಪ ಕಚ್ಚಲಿಲ್ಲ" ಎಂದು ಟ್ರೋಲ್ ಮಾಡಿದ್ದರು. ಟಾಲಿವುಡ್‌ ದಿಗ್ಗಜ ಬಾಲಯ್ಯನ ಆಕ್ಷನ್ ಸೀನ್‌ಗಳ ಜೊತೆ ರಂಜನಿ ರಾಘವನ್ ಅವರನ್ನು ಟ್ರೋಲ್ ಮಾಡಿದ್ದರು. ಸೂಪರ್‌ಮ್ಯಾನ್, ಬ್ಯಾಟ್‌ಮ್ಯಾನ್‌ಗಳನ್ನಿಟ್ಟುಕೊಂಡು ಟ್ರೋಲ್ ಮಾಡಿದ್ದರು. 'ಗೆದ್ದು ಬಾ ವೀರ ಮಹಿಳೆ' ಎಂದು ಕಾಲೆಳೆದಿದ್ದರು. 'ಕಲಿಯುಗದಲ್ಲಿ ಮಂತ್ರ ಹಾವು ಓಡಿಸಿದ ತಪ್ಪಿಸಿಕೊಂಡ ಏಕೈಕ ಮಹಿಳೆ ಎಂದು ಟ್ರೋಲ್ ಮಾಡಿದ್ದರು. ಅಂದು, ಈ ದೃಶ್ಯಗಳಿಂದ ರಂಜನಿ ರಾಘವನ್ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಬೇಕಾಯ್ತು. ಈ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ರಂಜನಿ ರಾಘವನ್ ರಿವೀಲ್ ಮಾಡಿದ್ದಾರೆ.

ಮುಂದೆ ಓದಿ

'ಪುಟ್ಟಗೌರಿ ಮದುವೆ' ಅದೇ ವರನೂ ಆಯ್ತು.. ಅದೇ ಶಾಪನೂ ಆಗಿತ್ತು.
ಸಿನಿಮಾ ಮಾಡಿದರೂ ಪುಟ್ಟಗೌರಿಯಾಗಿಯೇ ಟ್ರೋಲ್ ಮಾಡಿದ್ದರು.
ಎಫರ್ಟ್‌ ಅನ್ನು ಸರಿಯಾದ ಜಾಗದಲ್ಲಿ ಹಾಕಿದಾಗ ನಮಗೂ ಬೆಲೆ.
ಕನ್ನಡತಿಯಲ್ಲಿ ಒಳ್ಳೆಯ ಭಾಷೆ.. ಒಳ್ಳೆಯ ಕಂಟೆಂಟ್ ಇತ್ತು.
ನನಗೋಸ್ಕರ ಸಿನಿಮಾ ಮಾಡಿ ಅಂತ ಓಡಾಡುವುದಕ್ಕೆ ಶುರು ಮಾಡಿದೆ.

'ಪುಟ್ಟ ಗೌರಿ ಮದುವೆ' ಸೀರಿಯಲ್ ಮಾಡುವಾಗ ಟ್ರೋಲ್ ಆಗಿದ್ದ ಕ್ಷಣಗಳನ್ನು ನೆನೆಪಿಸಿಕೊಂಡಿದ್ದಾರೆ. ಆ ವೇಳೆ ಮಾಡಿದ ಮೊದಲ ಸಿನಿಮಾಗೆ ಹೇಗೆ ಎಫೆಕ್ಟ್ ಆಯ್ತು ಅಂತನೂ ಹೇಳಿದ್ದಾರೆ. "ಪುಟ್ಟಗೌರಿ ಸೀರಿಯಲ್ ಒಪ್ಪಿಗೊಂಡಿದ್ದೆ. ಅದು ಫೇಮಸ್ ಆಗುತ್ತಿದೆ. ಆದರೆ, ಅದೇ ವರನೂ ಆಯ್ತು.. ಅದೇ ಶಾಪನೂ ಆಗಿತ್ತು ನನಗೆ. 2017ರಲ್ಲಿ ನನ್ನ ಮೊದಲ ಸಿನಿಮಾ ರಾಜಹಂಸ ರಿಲೀಸ್ ಆಗಿತ್ತು. ನಾನು ಆಗ ಪುಟ್ಟಗೌರಿ ಮದುವೆ ಮಾಡುತ್ತಿದ್ದೆ. ರಾಜಹಂಸ ಬ್ಯೂಟಿಫುಲ್ ಟೀಮ್. ಆ ಸಿನಿಮಾವನ್ನು ತುಂಬಾ ಚೆನ್ನಾಗಿ ಪ್ರಮೋಟ್ ಮಾಡಿದ್ವಿ. ಹೊಸ ತಂಡ ಅಂತ ಅಪ್ಪು ಸರ್, ಶಿವರಾಜ್‌ಕುಮಾರ್ ಸರ್ ಎಲ್ಲರ ಹತ್ತಿರನೂ ಪ್ರಮೋಟ್ ಮಾಡಿ ಅಷ್ಟು ದೊಡ್ಡ ಸಿನಿಮಾ ಮಾಡಿದರೂ ನಮ್ಮ ಜನ ನನ್ನನ್ನು ನೋಡಿದ್ದು ಟ್ರೋಲ್ ಮಾಡಿದ ಪುಟ್ಟಗೌರಿಯಾಗಿಯೇ. ಆ ಸಿನಿಮಾಗೆ ದೊಡ್ಡ ಹೊಡೆತ ಆಗೋಯ್ತು. ನನ್ನನ್ನು ಹೊಸದಾಗಿ ಜನರು ಒಪ್ಪಿಕೊಳ್ಳುತ್ತಿಲ್ಲ. ಅದು ಎಷ್ಟು ದೊಡ್ಡ ಸಮಸ್ಯೆ ಆಗೋಯ್ತು ಅಂದರೆ, ಯಾರಿಗೂ ಹೇಳಿಕೊಳ್ಳುವುದಕ್ಕೆ ಸಾಧ್ಯನೇ ಇಲ್ಲ." ಎಂದು ನಟಿ ರಂಜನಿ ರಾಘವನ್ ಹೇಳಿದ್ದಾರೆ.

ಪುಟ್ಟಗೌರಿ ಮದುವೆಯಲ್ಲಿ ಟ್ರೋಲ್‌ ಆದ ಸೀನ್‌ಗೆ ತಾನೆಷ್ಟು ಕಷ್ಟ ಪಟ್ಟಿದ್ದೆ. ಆ ಸೀನ್‌ಗೆ ಕೆಟ್ಟದಾಗಿ ಸಿಜಿಗಳನ್ನು ಬಳಿಸಿ ಹಾಳುಮಾಡಿದ್ದರು ಎಂದು ನಟಿ ರಂಜನಿ ರಾಘವನ್ ಆರೋಪಿಸಿದ್ದಾರೆ. "ಈಗ ನಾನು ಕೊಡುವ ಉತ್ತರ ನಿಮಗೆ ತಮಾಷೆ ಅನಿಸಬಹುದು. ಅವತಾರ್ ಸಿನಿಮಾವನ್ನು ಗ್ರೀನ್ ಮ್ಯಾಟ್‌ನಲ್ಲಿ ಮಾಡಿದರೂ, ನಟರು ಅನಕೊಂಡ ಬಂತು ಅಂದುಕೊಂಡೇ ನಟನೆ ಮಾಡುತ್ತಾರೆ. ನಾನು ಕೂಡ ಅದೇ ಬದ್ಧತೆಯಲ್ಲೇ ಆಕ್ಟ್ ಮಾಡಿದ್ದೇನೆ. ಆಮೇಲೆ ಸಿಜಿನಲ್ಲಿ ಅವರು ಡಬ್ಬತರ ಏನೋ ಒಂದು ಹಾಕಿದರೆ, ನಾನೇ ಅಲ್ಲಿ ತಮಾಷೆಯಾಗೋದು. ನನ್ನ ಎಫರ್ಟ್ ಕಮ್ಮಿಯಾಗಲಿಲ್ಲ. ನಾನು ಬರಿಗಾಲಲ್ಲಿ ಓಡಿದೆ, ಕಾಡಿನಲ್ಲಿ ಓಡಿದೆ. ಎಲ್ಲೋ ಬಿದ್ದೆ. ರೋಪ್ ಹಾಕಿಕೊಂಡು ಜಂಪ್ ಮಾಡಿದೆ. ನನ್ನ ಎಫರ್ಟ್‌ ಸೇಮ್ ಇದೆ. ಆದರೆ, ಸರಿಯಾದ ಜಾಗದಲ್ಲಿ ಇರಲಿಲ್ಲ ಅಷ್ಟೇ. ನಮ್ಮ ಎಫರ್ಟ್‌ ಅನ್ನು ಸರಿಯಾದ ಜಾಗದಲ್ಲಿ ಹಾಕಿದಾಗ ನಮಗೂ ಬೆಲೆ ಇರುತ್ತೆ. ನಾನು ಬಿದ್ದು ಎದ್ದು ಆಕ್ಟಿಂಗ್ ಮಾಡಿದರೆ, ಏನು ಆಕ್ಷನ್ ಮಾಡಿದ್ದಾಳೆ ಅಂತಾರೆ. ಇಲ್ಲಾ ಅಂದರೆ ಟ್ರೋಲ್ ಆಗುತ್ತೆ." ಎನ್ನುತ್ತಾರೆ.

Ranjani Raghavan open up about Puttagowri Maduve serial trolls that how affected her

ಟ್ರೋಲ್ ಮಾಡಿದ್ದು ತನಗೊಂದು ಪಾಠ ಆಗಿತ್ತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. "ಆಗ ಸೋಶಿಯಲ್ ಮೀಡಿಯಾದಲ್ಲಿ ಮೇಮ್, ಟ್ರೋಲ್ ಅಂತ ಶುರುವಾಗಿದ್ದ ಕಾಲ. ಆಗ ಮೊದಲು ಬಂದಿದ್ದು ನಮ್ಮದೇ ಕಂಟೆಂಟ್. ಅದಕ್ಕೆ ಅಷ್ಟು ದೊಡ್ಡದಾಗಿ ವೈರಲ್ ಆಯ್ತು. ಅದೆಲ್ಲ ನನಗೆ ಪಾಠ ಆಗಿತ್ತು. ಎಫರ್ಟ್ ಎಲ್ಲಿ ಹಾಕಬೇಕೋ ಅಲ್ಲೇ ಹಾಕಬೇಕು. ಇಲ್ಲಾ ಅಂದರೆ, ತಮಾಷೆನೇ ಆಗೋದು. ಟ್ರೋಲ್ ಮಾಡಿದವರಿಗೆ ಏನೂ ಹೇಳುವುದಕ್ಕೆ ಆಗುವುದಿಲ್ಲ. ಅದೇ ಕನ್ನಡತಿಯಲ್ಲಿ ನಾನು ಯಾವುದೇ ಆಕ್ಷನ್ ಮಾಡಿಲ್ಲ. ಒಳ್ಳೆಯ ಭಾಷೆ. ಒಳ್ಳೆಯ ಮಾತು. ಒಳ್ಳೆಯ ಕಂಟೆಂಟ್ ಇತ್ತು. ಅಲ್ಲಿಂದ ನನ್ನ ಪೂರ್ತಿ ಇಮೇಜ್ ಬದಲಾಯ್ತು. ಅದಾದ್ಮೇಲೆ ಯಾರೂ ಟ್ರೋಲ್ ಅಂತ ಯೋಚನೆಯೇ ಮಾಡಲಿಲ್ಲ." ಎಂದಿದ್ದಾರೆ.

ಇನ್ನು ಪುಟ್ಟಗೌರಿ ಮದುವೆ ಬಳಿಕ ಸ್ಕ್ರಿಪ್ಟ್‌, ನಿರ್ದೇಶನ ಅಂತ ಆಸಕ್ತಿ ಬೆಳೆಸಿಕೊಂಡಿದ್ದರು. ಅದು ಹೇಗೆ ಬೆಳೀತು ಅಂತಾನೂ ಹೇಳಿದ್ದಾರೆ. "ಪುಟ್ಟಗೌರಿ ಆದ್ಮೇಲೆ ನಾನು ಬರವಣಿಗೆ ಮೇಲೆ ಸಂಪೂರ್ಣವಾಗಿ ಗಮನ ಹರಿಸುವುದಕ್ಕೆ ಶುರು ಮಾಡಿದೆ. ಟೆಲಿವಿಷನ್‌ನಲ್ಲಿ ಬಂದರೆ ಆಕ್ಟ್ ಮಾಡುತ್ತೇನೆ. ಸಿನಿಮಾ ಬಂದರೆ ಮಾಡುತ್ತೇನೆ. ಆದರೆ, ನನ್ನದೇ ಆಗಿರುವ ಬೇರೆ ಸ್ಕಿಲ್ ಅನ್ನು ಬೆಳೆಸಿಕೊಳ್ಳಬೇಕು ಅಂತ ಸ್ಕ್ರಿಪ್ಟ್ ರೈಟಿಂಗ್ ಮೇಲೆ ತುಂಬಾ ಗಮನ ಹರಿಸಿದೆ. ಆ ಮೇಲೆ ನನಗೋಸ್ಕರ ಸಿನಿಮಾ ಮಾಡಿ ಅಂತ ಹೇಳಿಕೊಂಡು ಓಡಾಡುವುದಕ್ಕೆ ಶುರು ಮಾಡಿದೆ." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

Read more about: ranjani raghavan actress trolls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X