ಖಿನ್ನತೆಯಿಂದ ಬದುಕು ಸಾಕೆನಿಸಿ 'ಹೊರಟು ಹೋಗಲು' ನಿರ್ಧರಿಸಿದ್ದೆ ಎಂದ ನಟಿ

ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ ನಟಿ ರಶಮಿ ದೇಸಾಯಿ. ತೆರೆಯ ಮೇಲಿನ ಅಭಿನಯದಿಂದ ಮನೆಮಾತಾದರೂ, ರಶಮಿ ಜನರಿಗೆ ಹೆಚ್ಚು ಚಿರಪರಿಚಿತರಾಗಿದ್ದು ಬಿಗ್ ಬಾಸ್ ಮೂಲಕ.

Recommended Video

ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿದ್ದ ರಶಮಿ ದೇಸಾಯಿ, ಪ್ರಸ್ತುತ ಹಿಂದಿ ಕಿರುತೆರೆ ಜಗತ್ತಿನ ಅತಿ ದೊಡ್ಡ ಸರಣಿಯಾದ 'ನಾಗಿಣಿ 4'ರಲ್ಲಿ ನಟಿಸುತ್ತಿದ್ದಾರೆ. 'ನಾಗಿಣಿ'ಯಾಗಿ ರಶಮಿ ಕಿರುತೆರೆ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಅವರ ಅಭಿನಯವನ್ನು ಮೆಚ್ಚಿಕೊಂಡು ಅವರ ಅಭಿಮಾನಿಗಳಾಗಿದ್ದಾರೆ. ಆದರೆ ಅವರ ಬದುಕು ತೆರೆ ಮೇಲೆ ಕಂಡಷ್ಟು ಸೊಗಸಾಗಿ ಇರಲಿಲ್ಲ. ಸಾಕಷ್ಟು ಸಂಕಷ್ಟ, ನೋವುಗಳನ್ನು ದಾಟಿಕೊಂಡು, ದೃಢವಾಗಿ ಬೆಳೆದಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಅತೀವ ಖಿನ್ನತೆಯಿಂದ ಬಳಲಿದ್ದಾಗಿ ಸ್ವತಃ ರಶಮಿ ದೇಸಾಯಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಾಲ್ಕು ವರ್ಷ ಖಿನ್ನತೆಯಿಂದಿದ್ದೆ

ನಾಲ್ಕು ವರ್ಷ ಖಿನ್ನತೆಯಿಂದಿದ್ದೆ

'ಹೆಚ್ಚೂ ಕಡಿಮೆ ನಾಲ್ಕು ವರ್ಷ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಈ ಬದುಕು ಸಾಕು. ಅದನ್ನು ಬಿಟ್ಟು ಹೋಗಬೇಕು ಎಂದೂ ನಿರ್ಧರಿಸಿದ್ದೆ. ನನಗೆ ಯಾರ ಮುಖವನ್ನು ನೋಡಲು ಕೂಡ ಇಷ್ಟವಿರಲಿಲ್ಲ' ಎಂದು ರಶಮಿ ತಿಳಿಸಿದ್ದಾರೆ.

ಜೀವನ ಅಚ್ಚರಿಗಳನ್ನು ನೀಡುತ್ತದೆ

ಜೀವನ ಅಚ್ಚರಿಗಳನ್ನು ನೀಡುತ್ತದೆ

'ನೀವು ಏನನ್ನಾದರೂ ಬಯಸಿದ್ದೀರಿ ಮತ್ತು ಅದನ್ನು ಬಿಟ್ಟು ಬೇರೆ ಏನಾದರೂ ಪಡೆದುಕೊಂಡರೆ ಅಥವಾ ಜೀವನ ನಿಮಗೆ ಅನೇಕ ರೀತಿಗಳಲ್ಲಿ ಅಚ್ಚರಿಗಳನ್ನು ನೀಡಿದರೆ ಮತ್ತು ನೀವು ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದರೆ ಅದನ್ನು ಎದುರಿಸುವುದು ನಿಮಗೆ ಕಷ್ಟವಾಗುತ್ತದೆ' ಎಂದು ತಮ್ಮ ಅನುಭವವನ್ನು ತೆರೆದಿಟ್ಟಿದ್ದಾರೆ.

ಕೆಲಸದಿಂದಾಗಿ ಖಿನ್ನತೆಯಿಂದ ಹೊರಬಂದೆ

ಕೆಲಸದಿಂದಾಗಿ ಖಿನ್ನತೆಯಿಂದ ಹೊರಬಂದೆ

'ವೃತ್ತಿ ಬದುಕಿನಲ್ಲಿ ನಾನು ಯಾವಾಗಲೂ ಚೆನ್ನಾಗಿಯೇ ಮಾಡುತ್ತಿದ್ದೆ. ಏಕೆಂದರೆ ನಾನು ಎಂದಿಗೂ ನನ್ನ ಕೆಲಸಕ್ಕೆ ನಿಷ್ಠಳಾಗಿರುತ್ತಿದ್ದೆ. ಹಾಗೆಯೇ ಕೆಲಸ ಮಾಡುವಾಗ ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತಿದ್ದೆ. ವಾಸ್ತವವಾಗಿ ನನ್ನನ್ನು ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದ್ದು ಕೂಡ ಇದೊಂದೇ ಸಂಗತಿ. ಅದು ನನಗೆ ಅಪಾರ ಶಕ್ತಿ ಮತ್ತು ವಾಸ್ತವದ ಅರಿಕೆಯನ್ನು ನೀಡಿತು. ವೈಯಕ್ತಿಕವಾಗಿ ನಾನು ಯಾವುದೇ ಪರಿಸ್ಥಿತಿಯನ್ನು ಎದುರಿಸಿದರೂ ಅದು ನನ್ನ ಕೆಲಸಕ್ಕೆ ಎಂದಿಗೂ ಅಡ್ಡಿಯುಂಟು ಮಾಡಲಿಲ್ಲ ಎಂದು ಹೇಳಿದ್ದಾರೆ.

ವಿಚ್ಛೇದನ ಪಡೆದಿದ್ದ ರಶಮಿ

ವಿಚ್ಛೇದನ ಪಡೆದಿದ್ದ ರಶಮಿ

ಕಳೆದ ಕೆಲವು ವರ್ಷಗಳಲ್ಲಿ ರಶಮಿ ದೇಸಾಯಿ ಖಾಸಗಿ ಬದುಕು ಸಾಕಷ್ಟು ಏರಿಳಿತಗಳನ್ನು ಕಂಡಿದೆ. 'ಉತ್ತರಣ್' ಸಹ ನಟ ನಂದೀಶ್ ಸಂಧು ಜತೆ ನಟಿಸುವಾಗಲೇ ಮದುವೆಯಾದರು. ಆದರೆ ಮನಸ್ತಾಪಗಳ ಕಾರಣ ಇಬ್ಬರೂ 2016ರಲ್ಲಿ ಬೇರೆಯಾದರು. ಇತ್ತೀಚೆಗೆ ರಶಮಿ, ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಮುನ್ನ ತಮ್ಮ ಅಮ್ಮ ರಸಿಲಾ ದೇಸಾಯಿ ಜತೆಗೆ ಉತ್ತಮ ಬಾಂಧವ್ಯ ಇಲ್ಲ ಎಂಬುದನ್ನು ತಿಳಿಸಿದ್ದರು. ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ.

More from Filmibeat

English summary
Actress, Bigg Boss contestant Rashami Desai said, I was in deep depression for almost four years and i really wanted to leave life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X