Ravichandran:ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಕ್ರೇಜಿ ಬರ್ತ್‌ಡೇ; ಸುಧಾರಾಣಿ, ಮಾಲಾಶ್ರೀ ಕ್ರೇಜಿ ಸ್ಟೆಪ್ಸ್
ಕ್ರೇಜಿ ಸಿನಿಮಾಗಳ ಸರದಾರ ಕ್ರೇಜಿಸ್ಟಾರ್ ರವಿಚಂದ್ರನ್. ಸಿನಿಮಾಗಾಗಿಯೇ ದುಡಿದು, ಸಿನಿಮಾಗಾಗಿಯೇ ಬದುಕಿತ್ತಿರುವ ನಟ. ಇವರ ಬತ್ತಳಿಕೆಯಿಂದ ಬಂದ ಕ್ರೇಜಿ ಸಿನಿಮಾಗಳು ಒಂದರೆಡಲ್ಲ. ಕನ್ನಡ ಚಿತ್ರರಂಗದಲ್ಲಿ ಇವರು ನಟಿಸಿದ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಕನ್ನಡ ಸಿನಿಮಾಗಳಿಗೆ ಶ್ರೀಮಂತಿಕೆಯನ್ನು ತುಂಬಿದ ನಟ ಕ್ರೇಜಿಸ್ಟಾರ್ ರವಿಚಂದ್ರನ್.
ಇಂದಿಗೂ ರವಿಚಂದ್ರನ್ ಸಿನಿಮಾಗಳಿಗೆ ಕ್ರೇಜಿ ಫ್ಯಾನ್ ಫಾಲೋವಿಂಗ್ ಇದೆ. ಕೇವಲ ನಟನಾಗಿ ಅಷ್ಟೇ ಅಲ್ಲ. ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ, ಸಿನಿ ಸಾಹಿತಿಯಾಗಿ ಗೆದ್ದಿರುವ ಸ್ಯಾಂಡಲ್‌ವುಡ್‌ನ ಏಕೈಕ ಸೂಪರ್‌ಸ್ಟಾರ್. ಸದ್ಯ ಮಕ್ಕಳಿಗಾಗಿ ಸಿನಿಮಾ ಮಾಡುತ್ತಿರುವ ರವಿಚಂದ್ರನ್ ರಿಯಾಲಿಟಿ ಶೋನಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಭರ್ಜರಿ ಬ್ಯಾಚುಲರ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಇವರ ಉಪಸ್ಥಿತಿ 'ಭರ್ಜರಿ ಬ್ಯಾಚುಲರ್' ಶೋ ಹೊರ ಮೆರುಗು ನೀಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ನಾಳೆ (ಮೇ 30) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ 64ನೇ ಹುಟ್ಟುಹಬ್ಬವನ್ನು 'ಭರ್ಜರಿ ಬ್ಯಾಚುಲರ್' ವೇದಿಕೆ ಮೇಲೆ ಸೆಲೆಬ್ರೆಟ್ ಮಾಡಲಾಗಿದೆ. ಈ ವೀಕೆಂಡ್‌ನಲ್ಲಿ ಭರ್ಜರಿ ಬ್ಯಾಚುಲರ್ ಕಂಪ್ಲೀಟ್ ರವಿಚಂದ್ರನ್ ಮಯವಾಗಲಿದೆ.
ಕ್ರೇಜಿ ಬ್ಯಾಚುಲರ್ಸ್
ಈ ವೀಕೆಂಡ್‌ನಲ್ಲಿ 'ಭರ್ಜರಿ ಬ್ಯಾಚುಲರ್ಸ್' ಎಲ್ಲಾ ಕ್ರೇಜಿ ಬ್ಯಾಚುಲರ್ಸ್ ಆಗಿ ಬದಲಾಗುತ್ತಿದ್ದಾರೆ. ರವಿಚಂದ್ರನ್ ಅವರ 64ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ವೇದಿಕೆ ಆಚರಿಸಿದ್ದಾರೆ. ರವಿಚಂದ್ರನ್ ನಟಿಸಿದ ಸೂಪರ್ ಹಾಡುಗಳಿಗೆ ಪರ್ಫಾರ್ಮ್ ಮಾಡಿದ್ದಾರೆ. ಬ್ಯಾಚುಲರ್ಸ್ ತಮ್ಮ ಹುಟ್ಟೂರಿನಲ್ಲಿ ಸಂಭ್ರಮಿಸುವುದರ ಜೊತೆಗೆ ಕ್ರೇಜಿಸ್ಟಾರ್ ಸಿನಿಮಾಗಳನ್ನು ರಿಲೇಟ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವೇದಿಕೆ ಮೇಲೆ ಕ್ರೇಜಿ ಹಾಡುಗಳ ಗಾನ ಬಜಾನಾ ಎಲ್ಲರೂ ಇರುತ್ತೆ.

ಸುಧಾರಾಣಿ-ಮಾಲಾಶ್ರೀ ಜೊತೆ ಡ್ಯೂಯೆಟ್
ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ 64ನೇ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುವುದಕ್ಕೆ ಇಬ್ಬರು ನಾಯಕ ನಟಿಯರು ಸ್ಟೈಲ್ ಆಗಿ ಎಂಟ್ರಿಕೊಟ್ಟಿದ್ದಾರೆ. ಒಬ್ಬರು ಸುಧಾರಾಣಿ, ಇನ್ನೊಬ್ಬರು ಮಾಲಾಶ್ರೀ. ರವಿಚಂದ್ರನ್ ಜೊತೆಯಲ್ಲಿ ಸುಧಾರಾಣಿ 'ಮನೆದೇವ್ರು' ಸಿನಿಮಾದಲ್ಲಿ ನಟಿಸಿದ್ದರು. ಹಾಗೇ ಮಾಲಾಶ್ರೀ 'ರಾಮಾಚಾರಿ'ಯಲ್ಲಿ ನಾಯಕಿಯಾಗಿದ್ದರು. ಈ ಇಬ್ಬರೂ ನಾಯಕಿಯರು ಭರ್ಜರಿ ಬ್ಯಾಚುಲರ್ ವೇದಿಕೆ ಮೇಲೆ ಕ್ರೇಜಿಸ್ಟಾರ್ ಜೊತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.
64 ಮಕ್ಕಳಿಂದ ಗಾಯನ
ರವಿಚಂದ್ರನ್ ಹುಟ್ಟುಹಬ್ಬಕ್ಕೆ ಜೀ ಕನ್ನಡ ವಿಶೇಷವಾಗಿ ಆಚರಣೆ ಮಾಡಿದೆ. 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರವಿಚಂದ್ರನ್‌ಗೆ 64 ಮಕ್ಕಳಿಂದ ಗಾಯನ ಕೂಡ ಇದೆ. ಕರುನಾಡ ತಾಯಿ ಸದಾ ಚಿನ್ಮಯಿ ಎನ್ನುವ ಹಾಡನ್ನು 64 ಪುಟಾಣಿ ಮಕ್ಕಳು ಕ್ರೇಜಿಸ್ಟಾರ್ ರವಿಚಂದ್ರನ್ ಮುಂದೆ ಹಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇದು ಕೂಡ ಭರ್ಜರಿ ಬ್ಯಾಚುಲರ್ಸ್ ಶೋನ ಮತ್ತೊಂದು ಹೈಲೈಟ್.
ಅಪ್ಪ-ಅಮ್ಮನ ನೆನಪು
ಭರ್ಜರಿ ಬ್ಯಾಚುಲರ್‌ನಲ್ಲಿ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದನ್ನು ಕಂಡು ರವಿಚಂದ್ರನ್ ಖುಷಿಯಾಗಿದ್ದಾರೆ. ಈ ವೇಳೆ ತಮ್ಮ ತಂದೆ ತಾಯಿಯನ್ನು ರವಿಚಂದ್ರನ್ ನೆನಪಿಸಿಕೊಂಡಿದ್ದಾರೆ. "ಅಪ್ಪ ಅಮ್ಮ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಗೊತ್ತಿಲ್ಲ" ಎಂದು ಕ್ರೇಜಿ ಸ್ಟಾರ್ ಹೇಳಿದ್ದಾರೆ. ಈ ಶೋ ವೇದಿಕೆ ಮೇಲೆ ರಚಿತಾ ರಾಮ್, ತಾರೆಯರು, ಮಕ್ಕಳು ಹಾಗೂ ಭರ್ಜರಿ ಬ್ಯಾಚುಲರ್ ತಂಡದೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಈ ಸಂಭ್ರಮದ ತುಣುಕುಗಳನ್ನು ಜೀ ಕನ್ನಡ ರಿವೀಲ್ ಮಾಡಿದೆ.


Click it and Unblock the Notifications











