Bharjari Bachelors: ಬಲೂನ್ ಗೇಮ್‌ನಲ್ಲಿ ಸಂತೂ Vs ಮನೋಹರ್ .. ಹೆಂಡತಿಯನ್ನು ಕಾಪಾಡೋದ್ರಲ್ಲಿ ಯಾರು ಬೆಸ್ಟ್..?
'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋ ಶುರುವಾಗಿ ವಾರಗಳು ಕಳೆಯುತ್ತಿವೆ. ಆದರೆ, ಮನರಂಜನೆಗೇನು ಕಡಿಮೆ ಇಲ್ಲ. ಜೀ ಕನ್ನಡದಲ್ಲಿ ವೀಕೆಂಡ್ ಅಂದ್ರೆನೆ ಮನರಂಜನೆಗೆ ಹೇಳಿ ಮಾಡಿಸಿದ ಜಾಗ. ವಾರಪೂರ್ತಿ ಧಾರಾವಾಹಿಗಳಲ್ಲಿ ಜನರನ್ನು ಹಿಡಿದಿಟ್ಟುಕೊಳ್ಳುವ ಜೀ ಕನ್ನಡ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಹಿಡಿದಿಟ್ಟುಕೊಳ್ಳುತ್ತೆ. ಆ ಹಾದಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಕೂಡ ಒಂದು.
ಭರ್ಜರಿ ಬ್ಯಾಚುಲರ್ಸ್ ನಲ್ಲಿ ಬಹಳ ದಿನಗಳ ಬಳಿಕ ಹಲವು ಕಲಾವಿದರನ್ನು ನೋಡಲಾಗುತ್ತಿದೆ. ಗೇಮ್, ಕಾಮಿಡಿ ಹೀಗೆ ಹಲವು ವಿಚಾರಗಳಿಂದ ಸಾಕಷ್ಟು ಫೇಮಸ್ ಆಗುತ್ತಿದೆ. ವೀಕೆಂಡ್‌ನಲ್ಲಿ ಕಿರುತೆರೆ ವೀಕ್ಷಕರನ್ನು ನಕ್ಕು ನಗಿಸುತ್ತಿದೆ. ಬ್ಯಾಚುಲರ್ಸ್ ಬದುಕು - ಬವಣೆ ತೋರಿಸಿ, ಮನರಂಜನೆಯನ್ನು ನೀಡುತ್ತಿದೆ. ಆದರೆ, ಈ ವಾರ ಕೊಂಚ ಡಿಫ್ರೆಂಟ್ ಆಗಿದೆ. ಆಟಗಳು ವಿಭಿನ್ನವಾಗಿದೆ. ಏನದು..? ಹೇಗೆ ವಿಭಿನ್ನ ಅನ್ನೋದು ಇಲ್ಲಿದೆ ನೋಡಿ.

ರೀಲ್ - ರಿಯಲ್ ನಡುವೆ ಗೆಲ್ಲೋದು ಯಾರು?
ಈ ವಾರ ಭರ್ಜರಿ ಬ್ಯಾಚುಲರ್ ಕೊಂಚ ವಿಭಿನ್ನವಾಗಿದೆ. ಬ್ಯಾಚುಲರ್‌ಗಳ ಪ್ರಾಬ್ಲಮ್ಸ್ ಕೇಳ್ತಾರೆ ಎಂದುಕೊಂಡಿದ್ದೆವು. ಆದರೆ, ಬ್ಯಾಚುಲರ್‌ಗಳಿಗೆ ಬ್ಯೂಟಿಫುಲ್ ಜೋಡಿಯನ್ನು ಜೀ ಕನ್ನಡವೇ ಒದಗಿಸಿಕೊಟ್ಟಿದೆ. ಜೋಡಿಗಳ ಜೊತೆಗೆ ಮುಂದಿನ ಜೀವನ ಹೇಗಿರಲಿದೆ ಎಂಬ ಪಾಠವನ್ನು ಕಲಿಸುತ್ತಿದೆ. ಹೀಗಾಗಿ ಆಟದ ಮೂಲಕ ಪಾಠ ಕಲಿಯುವ ಬ್ಯಾಚಲರ್‌ಗಳಿಗೆ ರೀಲ್ ಹಾಗೂ ರಿಯಲ್ ಜೋಡಿಗಳ ನಡುವೆ ಒಂದು ಸ್ಪರ್ಧೆ ಏರ್ಪಡಿಸಿದ್ದಾರೆ. ಆಟದಲ್ಲಿ ಗೆಲ್ಲೋದು ಯಾರು ಅನ್ನೋದೆ ಸದ್ಯದ ಪ್ರಶ್ನೆ.
ಸಂತು- ಮನೋಹರ್ ನಡುವೆ ಫೈಟ್
ಇಂದಿನ ಸಂಚಿಕೆಯಲ್ಲಿ ರೀಲ್ ಅಥವಾ ರಿಯಲ್ ಜೋಡಿಗಳ ಸ್ಪರ್ಧೆಯಲ್ಲಿ ಸಂತು ಹಾಗೂ ಮನೋಹರ್ ಮುಖಾ ಮುಖಿಯಾಗಿದ್ದಾರೆ. ಅದಾಗಲೇ ಆಟಕ್ಕೆ ಅಖಾಡ ಸಿದ್ಧವಾಗಿದೆ. ಈ ಅಖಾಡದಲ್ಲಿ ಯುದ್ಧಕ್ಕೆ ಎಲ್ಲಾ ಸಿದ್ಧತೆ ರೆಡಿಯಾಗಿದೆ. ಅದಕ್ಕೂ ಮುನ್ನ ಅಕುಲ್ ಬಾಲಾಜಿ ಇಬ್ಬರನ್ನು ಎದುರು ಬದುರು ನಿಲ್ಲಿಸಿ, ಒಂದಷ್ಟು ಸಿದ್ಧತೆಯನ್ನು ಮಾಡಿದ್ದಾರೆ. ಜೊತೆಗೆ ಆ ಕಡೆ ರೀಲ್ ಜೋಡಿ, ಈ ಕಡೆಯ ರಿಯಲ್ ಜೋಡಿಗೆ ಸವಾಲು ಹಾಕಿದೆ.
ಬಲೂನ್ ಒಡೆಯುವ ಆಟ
ರೀಲ್ ಮತ್ತು ರಿಯಲ್ ಜೋಡಿಯ ಸ್ಪರ್ಧೆಯಲ್ಲಿ ಬಲೂನ್ ಒಡೆಯುವ ಸ್ಪರ್ಧೆ. ಹಾಗಂತ ಅದು ಜೋಡಿಗಳು ಒಡೆಯುವ ಸ್ಪರ್ಧೆ ಅಲ್ಲ. ಆ ಬಲೂನ್‌ನಿಂದ ತಮ್ಮ ಜೋಡಿಯನ್ನು ಕಾಪಾಡಿಕೊಳ್ಳುವ ಸ್ಪರ್ಧೆ. ಅದರಲ್ಲಿ ಮೊದಲಿಗೆ ಬಲೂನ್ ಎಸೆಯುವ ಕಡೆಗೆ ಸಂತು ಹಾಗೂ ಪತ್ನು ಬಂದ್ರೆ ಆ ಕಡೆ ಬಲೂನ್ ದಾಳಿಯಲ್ಲಿ ಉಳಿಸಿಕೊಳ್ಳಬೇಕಾದ ಸ್ಥಾನದಲ್ಲಿ ಮನೋಹರ್ ಹಾಗೂ ಸಂಜನಾ ನಿಂತಾಗಿತ್ತು. ಈಗ ಸಂತು ಮತ್ತು ವೈಫ್ ಬಲೂನ್ ಎಸೆಯುತ್ತಿದ್ದರೆ ಆ ಕಡೆ ಮನೋಹರ್ ಕೋಪ ಮಾಡಿಕೊಳ್ಳುತ್ತಲೇ ಸಂಜನಾರನ್ನು ಕಾಪಾಡುತ್ತಿದ್ದರು.
ರಿವೇಂಜ್ ತೀರಿಸಿಕೊಂಡ ಮನೋಹರ್
ಎರಡು ಟೀಂ ಎಂದ ಮೇಲೆ ಒಂದು ಕಡೆಯ ಬೌಲಿಂಗ್ ಮುಗಿದ ಮೇಲೆ ಇನ್ನೊಂದು ಕಡೆಗೆ ಬರಲೇಬೇಕು ಅಲ್ವಾ. ಈಗ ಸಂತು ಸರದಿ ಮುಗಿದು ಮನೋಹರ್ ಸರದಿ ಬಂದಿದೆ. ಸಂತು, ಮನೋಹರ್ ಎಸೆಯುವ ಬಲೂನ್‌ನಿಂದ ತನ್ನ ಹೆಂಡತಿಯನ್ನು ಕಾಪಾಡಿಕೊಳ್ಳಲೇಬೇಕಿದೆ. ಆದರೆ, ರಿವೇಂಜ್ ಇತ್ತಲ್ಲ ಮನೋಹರ್ ಅಂಡ್ ಸಂಜನಾಗೆ, ಹೇಗೆ ಎಸೆದರು ಎಂದರೆ ಸಂತು ಪತ್ನಿಗೆ ಕೋಪ ಬಂದು ಜಾಡಿಸಿಯೇ ಒದ್ದರು. ನೋಡುಗರಿಗೆ ಮಾತ್ರ ಅದರಷ್ಟು ಕಾಮಿಡಿ ಮತ್ತೊಂದಿಲ್ಲ ಎನ್ನಿಸದೆ ಇರುವುದಿಲ್ಲ.


Click it and Unblock the Notifications











