For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಸ್ಯಾಟಲೈಟ್‌, ಓಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್: ಎಷ್ಟು ಕೋಟಿಗೆ ಮಾರಾಟ?

  |

  ಈ ಬಾರಿ ದಸರಾ ಹಬ್ಬಕ್ಕೆ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದ್ದವು. ಆದರೆ, ನವರಾತ್ರಿಗೆಂದು ಬಿಡುಗಡೆಯಾದ ಸಿನಿಮಾಗಳಲ್ಲಿಯೂ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ್ದು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ'.

  ಈಗಾಗಲೇ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಅಂತ ಸಾಬೀತಾಗಿದೆ. ಇನ್ನು ದಸರಾ ಹಬ್ಬದ ರಜೆಯಲ್ಲಿ ಮತ್ತಷ್ಟು ಕಲೆಕ್ಷನ್ ಮಾಡಬಹುದು ಅನ್ನೋ ನಿರೀಕ್ಷೆನೂ ಇದೆ. ಈ ಬೆನ್ನಲ್ಲೇ 'ಕಾಂತಾರ' ಸ್ಯಾಟಲೈಟ್ ಹಾಗೂ ಓಟಿಟಿ ವಲಯದಲ್ಲೂ ಜಾಕ್‌ಪಾಟ್ ಹೊಡೆದಿದೆ.

  ಎಲ್ಲರ ಬಾಯಲ್ಲೂ 'ಕಾಂತಾರ': ಮೂರು ದಿನ ಈ ಸಿನಿಮಾ ದೋಚಿದ್ದೆಷ್ಟು?ಎಲ್ಲರ ಬಾಯಲ್ಲೂ 'ಕಾಂತಾರ': ಮೂರು ದಿನ ಈ ಸಿನಿಮಾ ದೋಚಿದ್ದೆಷ್ಟು?

  'ಕೆಜಿಎಫ್ 2' ಬಳಿಕ ಹೊಂಬಾಳೆ ನಿರ್ಮಿಸಿದ 'ಕಾಂತಾರ' ಸದ್ದಿಗೆ ಪರಭಾಷೆಯ ಸಿನಿಮಾಗಳೂ ಕೂಡ ಸೈಲೆಂಟ್ ಆಗಿವೆ. ಅದೆಷ್ಟೇ ದೊಡ್ಡ ಸಿನಿಮಾ ರಿಲೀಸ್ ಆಗಿದ್ರೂ, ಕರ್ನಾಟಕದಲ್ಲಿ 'ಕಾಂತಾರ'ನೇ ಸಾರ್ವಭೌಮ ಎನಿಸಿಕೊಂಡಿದೆ. ಹೀಗಾಗಿ ಇದೂವರೆಗೂ ಥಿಯೇಟರ್‌ನಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಸಿನಿಮಾ, ಸ್ಯಾಟಲೈಟ್ ರೈಟ್ಸ್ ಹಾಗೂ ಓಟಿಟಿ ರೈಟ್ಸ್‌ನಿಂದಲೂ ಕೋಟಿ ಲೆಕ್ಕದಲ್ಲಿ ಬಾಚಿಕೊಂಡಿದೆ.

  'ಕಾಂತಾರ' ಬೇಡಿಕೆ ಹೆಚ್ಚು

  'ಕಾಂತಾರ' ಬೇಡಿಕೆ ಹೆಚ್ಚು

  ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್ ಹಾಗೂ ಓಟಿಟಿಗೆ ಸೇಲ್ ಆಗುತ್ತೆ. ಆದರೆ, 'ಕಾಂತಾರ' ಸಿನಿಮಾದ ಮೇಲೆ ನಿರೀಕ್ಷೆ ಇದ್ದಿದ್ದರಿಂದ ಸ್ಯಾಟಲೈಟ್‌ಗೆ ಹಾಗೂ ಟಿವಿಗೆ ಹಕ್ಕುಗಳನ್ನು ಮಾರಾಟ ಮಾಡಿರಲಿಲ್ಲ. ಆದ್ರೀಗ ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ ಹಾಗೂ ಓಟಿಟಿಗೆ ಸೇಲ್ ಆಗಿದೆ. 'ಕಾಂತಾರ' ಸಿನಿಮಾಗೆ ಅದ್ಬುತ ರೆಸ್ಪಾನ್ಸ್ ಸಿಕ್ಕಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿತ್ತು. ಕೊನೆಗೂ ಹೊಂಬಾಳೆ ಫಿಲ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಮಾಡಿದೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

  ದಾಖಲೆ..ದಾಖಲೆ.. ಬರೀ ದಾಖಲೆ: ಬುಕ್‌ಮೈ ಶೋ, IMDb ರೇಟಿಂಗ್‌ನಲ್ಲೂ 'ಕಾಂತಾರ' ಭಾರತದಲ್ಲೇ ನಂಬರ್ 1ದಾಖಲೆ..ದಾಖಲೆ.. ಬರೀ ದಾಖಲೆ: ಬುಕ್‌ಮೈ ಶೋ, IMDb ರೇಟಿಂಗ್‌ನಲ್ಲೂ 'ಕಾಂತಾರ' ಭಾರತದಲ್ಲೇ ನಂಬರ್ 1

  'ಕಾಂತಾರ' ಸ್ಯಾಟಲೈಟ್ ಹಕ್ಕು ಎಷ್ಟಕ್ಕೆ ಸೇಲ್?

  'ಕಾಂತಾರ' ಸ್ಯಾಟಲೈಟ್ ಹಕ್ಕು ಎಷ್ಟಕ್ಕೆ ಸೇಲ್?

  ಸಿನಿಮಾಗಳಿಗೆ ಸ್ಯಾಟಲೈಟ್ ಹಕ್ಕುಗಳಿಗೆ ಟಿವಿ ಚಾನೆಲ್‌ಗಳು ಪೈಪೋಟಿ ಬೀಳುತ್ತವೆ. ಅದರಲ್ಲೂ 'ಕಾಂತಾರ' ಅಂತಹ ಸಿನಿಮಾಗಳನ್ನು ಕೊಂಡುಕೊಳ್ಳುವುದಕ್ಕೆ ಕಾಂಪಿಟೇಷನ್ ಇರುತ್ತೆ. ಸದ್ಯ 'ಕಾಂತಾರ' ಸಿನಿಮಾದ ಸ್ಯಾಟಲೈಟ್ಸ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ. ಸ್ಟಾರ್ ಸುವರ್ಣಗೆ 'ಕಾಂತಾರ' ಸೇಲ್ ಆಗಿದ್ದು, ಸುಮಾರು 6 ರಿಂದ 7 ಕೋಟಿ ರೂ.ಗೆ ಮಾರಾಟ ಆಗಿದೆ ಅಂತ ಕಿರುತೆರೆ ವಲಯದಲ್ಲಿ ಓಡಾಡುತ್ತಿದೆ.

  'ಕಾಂತಾರ' ಓಟಿಟಿಗೆ ಸೇಲ್ ಆಗಿದ್ದುಎಷ್ಟಕ್ಕೆ?

  'ಕಾಂತಾರ' ಓಟಿಟಿಗೆ ಸೇಲ್ ಆಗಿದ್ದುಎಷ್ಟಕ್ಕೆ?

  ಓಟಿಟಿಯಲ್ಲೂ ಸಿನಿಮಾಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಸಿನಿಮಾಗಳಿಗೆ ಓಟಿಟಿಯಲ್ಲಿ ಬೇಡಿಕೆ ಕಡಿಮೆ ಅನ್ನೋ ನೋವನ್ನು ಸಾಕಷ್ಟು ನಿರ್ಮಾಪಕರು ಹಂಚಿಕೊಂಡಿದ್ದಾರೆ. ಆದರೆ, ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಾಣ ಮಾಡಿರುವುದರಿಂದ 'ಕಾಂತಾರ'ಗೂ ಪೈಪೋಟಿ ಇತ್ತು. ಮೂಲಗಳ ಪ್ರಕಾರ, 'ಕಾಂತಾರ' ಅಮೆಜಾನ್ ಪ್ರೈಂಗೆ ಸಿನಿಮಾ ಸೋಲ್ಡ್ ಆಗಿದೆ. ಅಮೆಜಾನ್ ಪ್ರೈಂ ಸುಮಾರು 7 ಕೋಟಿ ರೂ. ಈ ಸಿನಿಮಾವನ್ನು ಕೊಂಡುಕೊಂಡಿದೆ ಎನ್ನಲಾಗಿದೆ.

  ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಕಾಂತಾರ': 4 ದಿನಗಳಲ್ಲಿ ಸಿನಿಮಾ ಗಳಿಸಿದೆಷ್ಟು..?ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಕಾಂತಾರ': 4 ದಿನಗಳಲ್ಲಿ ಸಿನಿಮಾ ಗಳಿಸಿದೆಷ್ಟು..?

  'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್

  'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾಗೆ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಿದೆ. ಅದರಲ್ಲೂ 'ಕಾಂತಾರ' ಕರ್ನಾಟಕ ಚಿತ್ರಮಂದಿರಗಳಲ್ಲಿ ಸಿನಿಮಾಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಾಲ್ಕನೇ ದಿನವೂ ಥಿಯೇಟರ್‌ಗಳಲ್ಲಿ ಗದ್ದಲ ಎಬ್ಬಿಸಿದೆ. 6.50 ಕೋಟಿ ರೂ.ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಸಿನಿಮಾ 22 ರಿಂದ 23 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ. ಇನ್ನು ಎರಡೂ ದಿನ ಕಲೆಕ್ಷನ್ ಅದ್ಭುತವಾಗಿರುತ್ತೆ ಅನ್ನೋ ನಿರೀಕ್ಷೆಯಿದೆ.

  English summary
  Rishab Shetty Movie Kantara Satellite Rights Star Suvarna OTT Amazon Prime, Know More.
  Tuesday, October 4, 2022, 17:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X