twitter
    For Quick Alerts
    ALLOW NOTIFICATIONS  
    For Daily Alerts

    ಥಿಯೇಟರ್‌ನಲ್ಲಷ್ಟೇ ಅಲ್ಲ.. ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ 'ಕಾಂತಾರ': ಎಲ್ಲಾ ಪಂಜುರ್ಲಿ ಮಹಿಮೆ!

    |

    ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟಿದ್ದ ಸಿನಿಮಾ 'ಕಾಂತಾರ'. ಬಿಡುಗಡೆಯಾದ ದಿನದಿಂದಲೇ ಥಿಯೇಟರ್‌ನಲ್ಲಿ ರಿಷಬ್ ಶೆಟ್ಟಿ ಸಿನಿಮಾ ಸದ್ದು ಮಾಡಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಸಿನಿಮಾಗೆ ಹಿನ್ನೆಲೆಯಾಗಿದ್ದೇ ಇಲ್ಲ.

    ಒಂದು ಭಾಷೆಯಿಂದ ಆರಂಭ ಆದ ಯಶಸ್ಸಿನ ಯಾತ್ರೆ ಪ್ಯಾನ್‌ ಇಂಡಿಯಾವರೆಗೂ ಹಬ್ಬಿತ್ತು. ಕನ್ನಡ ಅಷ್ಟೇ ಅಲ್ಲ. ಹಿಂದಿ ಭಾಷೆಯಲ್ಲೂ 'ಕಾಂತಾರ' ಕಲೆಕ್ಷನ್ ಭರ್ಜರಿಯಾಗಿಯೇ ಇತ್ತು. ಐದು ಭಾಷೆಗಳಿಂದ ಸುಮಾರು 400 ಕೋಟಿ ರೂ. ದೋಚಿಸಿದ್ಧ ಸಿನಿಮಾ ಕೆಲವೇ ತಿಂಗಳ ಹಿಂದಷ್ಟೇ ಓಟಿಟಿಗೂ ಲಗ್ಗೆ ಇಟ್ಟಿತ್ತು.

    ಬಾಚಿ ಬಾಚಿ ಕೊಟ್ಟ ಪಂಜುರ್ಲಿ ದೈವಕ್ಕೆ ಹರಕೆ ಕೊಟ್ಟ ರಿಷಬ್ ಶೆಟ್ಟಿ: ವಿಡಿಯೋ ವೈರಲ್ಬಾಚಿ ಬಾಚಿ ಕೊಟ್ಟ ಪಂಜುರ್ಲಿ ದೈವಕ್ಕೆ ಹರಕೆ ಕೊಟ್ಟ ರಿಷಬ್ ಶೆಟ್ಟಿ: ವಿಡಿಯೋ ವೈರಲ್

    ಥಿಯೇಟರ್‌ನಲ್ಲೇ ಬಹುತೇಕ ಮಂದಿ ಸಿನಿಮಾ ವೀಕ್ಷಿಸಿ ಆಗಿತ್ತು. ಇನ್ನೊಂದು ಕಡೆ ಓಟಿಟಿಯಲ್ಲೂ ಸಿನಿಮಾ ಸದ್ದು ಮಾಡಿತ್ತು. ಹೀಗಿದ್ಮೇಲೆ ಕಿರುತೆರೆಯಲ್ಲಿ ಯಾರು ಸಿನಿಮಾ ನೋಡುತ್ತಾರೆ? ಅನ್ನೋ ಪ್ರಶ್ನೆಯಂತೂ ಇತ್ತು. ಆದ್ರೀಗ ಕಿರುತೆರೆಯಲ್ಲೂ 'ಕಾಂತಾರ' ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

    ಸಂಕ್ರಾಂತಿಯಂದು 'ಕಾಂತಾರ' ಕ್ರಾಂತಿ

    ಸಂಕ್ರಾಂತಿಯಂದು 'ಕಾಂತಾರ' ಕ್ರಾಂತಿ

    'ಕಾಂತಾರ' ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಸ್ಟಾರ್ ಸುವರ್ಣ ಪಡೆದುಕೊಂಡಿತ್ತು. ಸಂಕ್ರಾಂತಿ ಹಬ್ಬಕ್ಕೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿಗೌಡ ಕಾಂಬಿನೇಷನ್ ಸಿನಿಮಾವನ್ನು ವರ್ಲ್ಡ್‌ ಪ್ರೀಮಿಯರ್ ಮಾಡಲಾಗಿತ್ತು. ಸಂಜೆ 6 ಗಂಟೆಯಿಂದ ರಾತ್ರಿ 9.30ರವರೆಗೂ ಈ ಸಿನಿಮಾವನ್ನು ಪ್ರಸಾರ ಮಾಡಲಾಗಿತ್ತು. ರಿಷಬ್ ಶೆಟ್ಟಿ ಕರಿಯರ್‌ನಲ್ಲೇ 'ಕಾಂತಾರ' ಸಿನಿಮಾ ಅತೀ ಹೆಚ್ಚು ಟಿಆರ್‌ಪಿ ಪಡೆದುಕೊಂಡಿದೆ. ಮೊದಲನೇ ಪ್ರಸಾರದಲ್ಲೇ ಸುಮಾರು 15.8 TVR ಪಡೆದುಕೊಂಡು ಇತಿಹಾಸವನ್ನು ಸೃಷ್ಟಿಸಿದೆ.

    ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ

    ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ

    ಸ್ಟಾರ್ ಸುವರ್ಣ ಇತಿಹಾಸದಲ್ಲಿಯೇ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ 'ಕಾಂತಾರ'. SD ಹಾಗೂ HD ಎರಡರಿಂದಲೂ 'ಕಾಂತಾರ'ಗೆ 15.8 TVR ಗಿಟ್ಟಿಸಿಕೊಂಡಿದೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ 10+ TVR ಪಡೆದುಕೊಂಡಿತ್ತು. ಈ ಎರಡೂ ಸಿನಿಮಾಗಳಿಗಿಂತಲೂ ಹೆಚ್ಚು ಟಿಆರ್‌ಪಿ 'ಕಾಂತಾರ'ಗೆ ಸಿಕ್ಕಿದೆ. ಈ ಮೂಲಕ ಹೊಸ ಕಿರುತೆರೆಯಲ್ಲೂ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

    'ಕಾಂತಾರ' ಮೇಕಿಂಗ್‌ನಲ್ಲೂ ದಾಖಲೆ

    'ಕಾಂತಾರ' ಮೇಕಿಂಗ್‌ನಲ್ಲೂ ದಾಖಲೆ

    ಸ್ಟಾರ್ ಸುವರ್ಣದಲ್ಲಿ 'ಕಾಂತಾರ' ಸಿನಿಮಾ 9.30ಕ್ಕೆ ಮುಗಿದಿತ್ತು. ಆ ಬಳಿಕ 'ಕಾಂತಾರ' ಮೇಕಿಂಗ್ ಅನ್ನು ಅರ್ಧ ಗಂಟೆಗಳ ಕಾಲ ಪ್ರಸಾರ ಮಾಡಿದ್ದರು. ಈ 'ಕಾಂತಾರ' ಮೇಕಿಂಗ್‌ಗೂ ದಾಖಲೆ ಟಿಆರ್‌ಪಿ ಬಂದಿದೆ. ಮೇಕಿಂಗ್ 5.4 TVR ಪಡೆದುಕೊಂಡಿದೆ. ಕಿರುತೆರೆಯಲ್ಲಿ ಇದೂ ಕೂಡ ದಾಖಲೆ ಅಂತಲೇ ಪಂಡಿತರು ಹೇಳುತ್ತಾರೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಸಕ್ಸಸ್ ಸಿಕ್ಕಂತಾಗಿದೆ.

    'ಕಾಂತಾರ' ಪ್ರಸಾರಕ್ಕೂ ಪ್ರಚಾರ

    'ಕಾಂತಾರ' ಪ್ರಸಾರಕ್ಕೂ ಪ್ರಚಾರ

    'ಕಾಂತಾರ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಮಾಡುವುದಕ್ಕೂ ಪ್ರಚಾರ ಮಾಡಿದ್ದರು. ಮಂಗಳೂರಿನ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಸ್ಯಾಂಡ್ ಆರ್ಟ್ ಮಾಡಲಾಗಿತ್ತು. ಕಿರುತೆರೆಯಲ್ಲಿ ಪ್ರಸಾರ ಆಗುವ ಸಿನಿಮಾ ಇದೇ ಮೊದಲ ಬಾರಿಗೆ ಪ್ರಚಾರ ಮಾಡಲಾಗಿತ್ತು. ಸದ್ಯ ಇದೇ ಜೋಷ್‌ನಲ್ಲಿ ಸ್ಟಾರ್ ಸುವರ್ಣ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಅನ್ನೋ ಹೊಸ ಧಾರಾವಾಹಿಯನ್ನು ಈ ಸಮಯದಲ್ಲಿ ಪ್ರಸಾರ ಮಾಡುತ್ತಿದೆ.

    English summary
    Rishabh Shetty's Kantara registers massive TRP rating of 15.8 TVR, Know More.
    Friday, January 27, 2023, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X