ಒಂದೇ ದಿನ ಮುಗೀತು ತಮಿಳು-ತೆಲುಗು 'ಬಿಗ್ ಬಾಸ್': ವಿನ್ನರ್ ಗೆ ಸಿಕ್ಕ ಹಣವೆಷ್ಟು.?

'ಕನ್ನಡ ಬಿಗ್ ಬಾಸ್' ಆರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಹಿಂದಿಯ ಬಿಗ್ ಬಾಸ್ 12ನೇ ಆವೃತ್ತಿ ಆರಂಭವಾಗಿದೆ. ಈ ಮಧ್ಯೆ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಬಿಗ್ ಬಾಸ್ ತೆಲುಗು ಮತ್ತು ಬಿಗ್ ಬಾಸ್ ತಮಿಳು ಎರಡನೇ ಆವೃತ್ತಿಗೆ ತೆರೆ ಬಿದ್ದಿದೆ.

ಹೌದು, ಭಾರಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ್ದ ಬಿಗ್ ಬಾಸ್ ತಮಿಳಿನಲ್ಲಿ ನಟಿಯೊಬ್ಬರು ವಿಜಯಶಾಲಿಯಾಗಿದ್ದರೇ, ತೆಲುಗು ಬಿಗ್ ಬಾಸ್ ನಲ್ಲಿ ನಟನೊಬ್ಬ ಬಿಗ್ ಬಾಸ್ ಕಿರೀಟಕ್ಕೆ ಮುತ್ತಿಟ್ಟಿದ್ದಾರೆ.

ದಕ್ಷಿಣ ಭಾರತದ ಎರಡು ಬಿಗ್ ಬಾಸ್ ಫೈನಲ್ ಹೇಗಿತ್ತು.? ಯಾರೆಲ್ಲಾ ಫಿನಾಲೆಯಲ್ಲಿ ಪೈಪೋಟಿ ನಡೆಸಿದ್ದರು. ಬಿಗ್ ಬಾಸ್ ವಿನ್ನರ್ ಗಳಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು.? ಎಂಬ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಮುಂದೆ ತಿಳಿಯೋಣ. ಮುಂದೆ ಓದಿ.....

ಬಿಗ್ ಬಾಸ್ ಗೆದ್ದ ಕೌಶಲ್

ಬಿಗ್ ಬಾಸ್ ಗೆದ್ದ ಕೌಶಲ್

ಕಳೆದ ಮೂರು ತಿಂಗಳಿನಿಂದ ಸಖತ್ ಸದ್ದು ಮಾಡಿದ್ದ ತೆಲುಗು ಬಿಗ್ ಬಾಸ್ ಎರಡನೇ ಆವೃತ್ತಿಯಲ್ಲಿ ಕೌಶಲ್ ಮಂದ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಾನಿ ನಿರೂಪಣೆ ಮಾಡಿಕೊಟ್ಟ ಈ ಕಾರ್ಯಕ್ರಮದ ಫೈನಲ್ ಗೆ ನಟ ವೆಂಕಟೇಶ್ ಅತಿಥಿಯಾಗಿ ಆಗಮಿಸಿದ್ದರು.

ಕ್ಯಾನ್ಸರ್ ಪೀಡಿತರಿಗೆ ನೀಡಿದ ಬಹುಮಾನ

ಕ್ಯಾನ್ಸರ್ ಪೀಡಿತರಿಗೆ ನೀಡಿದ ಬಹುಮಾನ

ಬಿಗ್ ಬಾಸ್ ಫೈನಲ್ ಗೆದ್ದ ಕೌಶಲ್ ಗೆ ಅರ್ಧಕೋಟಿ ಅಂದ್ರೆ 50 ಲಕ್ಷ ಬಹುಮಾನವಾಗಿ ಸಿಕ್ತು. ಆದ್ರೆ, ಈ ಬಹುಮಾನದ ಸಂಪೂರ್ಣ ಮೊತ್ತವನ್ನ ನಟ ಕೌಶಲ್ ತಮ್ಮ ತಾಯಿಯ ಫೌಂಡೇಶನ್ ಗೆ ನೀಡಿ ಗಮನ ಸೆಳೆದರು. ಅವರ ತಾಯಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಹಾಗಾಗಿ, ಬೇರೆ ಯಾರೂ ಇಂತಹ ಪರಿಸ್ಥಿತಿಗೆ ಬರಬಾರದು. ಅದು ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ನೆರವು ನೀಡಿದರು.

ಗೀತಾ ಮಾಧುರಿ ರನ್ನರ್ ಅಪ್

ಗೀತಾ ಮಾಧುರಿ ರನ್ನರ್ ಅಪ್

ಎರಡನೇ ಆವೃತ್ತಿಯ ತೆಲುಗು ಬಿಗ್ ಬಾಸ್ ಫೈನಲ್ ನಲ್ಲಿ ಕೌಶಲ್, ಗೀತಾ ಮಾಧುರಿ, ಸಾಮ್ರಾಟ್, ದೀಪ್ತಿ, ತನೀಶ್ ಆಯ್ಕೆಯಾಗಿದ್ದರು. ಅಂತಿಮವಾಗಿ ಕೌಶಲ್ ವಿನ್ನರ್ ಆದ್ರೆ, ಗೀತಾ ಮಾಧುರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.

ತಮಿಳು ವಿನ್ನರ್ ರಿಯಾತ್ವಿಕ

ತಮಿಳು ವಿನ್ನರ್ ರಿಯಾತ್ವಿಕ

ಕಳೆದ ಜೂನ್ ತಿಂಗಳಲ್ಲಿ ಆರಂಭವಾಗಿದ್ದ ತಮಿಳು ಬಿಗ್ ಬಾಸ್ ಎರಡನೆ ಆವೃತ್ತಿಯ ಫೈನಲ್ ಕೂಡ ಮುಗಿದಿದೆ. ನಟಿ ರಿಯಾತ್ವಿಕ ಎರಡನೇ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಕಿರೀಟ ಗೆದ್ದ ನಟಿಗೆ 50 ಲಕ್ಷ ಬಹುಮಾನ ನೀಡಲಾಗಿದೆ. ಐಶ್ವರ್ಯ ದತ್ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಕಮಲ್ ಹಾಸನ್ ಈ ಶೋ ನಿರೂಪಣೆ ಮಾಡಿದ್ದರು.

ಅಕ್ಟೋಬರ್ 21ಕ್ಕೆ ಕನ್ನಡ ಬಿಗ್ ಬಾಸ್

ಅಕ್ಟೋಬರ್ 21ಕ್ಕೆ ಕನ್ನಡ ಬಿಗ್ ಬಾಸ್

'ಬಿಗ್ ಬಾಸ್' ಕನ್ನಡ ಕಾರ್ಯಕ್ರಮ ಮತ್ತೆ ವೀಕ್ಷಕರ ಮುಂದೆ ಬಂದಿದೆ. ಅಕ್ಟೋಬರ್ 21 ರಂದು 'ಬಿಗ್ ಬಾಸ್ ಕನ್ನಡ ಸೀಸನ್ 6'ರ ಗ್ರಾಂಡ್ ಓಪನಿಂಗ್ ನಡೆಯಲಿದೆ. ಈಗಾಗಲೇ ಬಿಗ್ ಬಾಸ್ ಪ್ರೋಮೋ ಪ್ರಸಾರವಾಗ್ತಿದ್ದು, ಸ್ಪರ್ಧಿಗಳು ಯಾರು ಎಂಬುದರ ಬಗ್ಗೆ ಹೆಚ್ಚು ಚರ್ಚೆಯಾಗ್ತಿದೆ.

More from Filmibeat

English summary
Riythvika on Sunday became the winner of the second season of Bigg Boss Tamil. and Kaushal Manda wins the Bigg Boss Telugu 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X