ಈ ಕಿರುತೆರೆ ನಟಿಯರು ಯಾರಿಗೂ ಕಮ್ಮಿಯಿಲ್ಲ; ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ?

ಭಾರತದಲ್ಲಿ ಸಿನಿಮಾಗಳಿಗೆಷ್ಟು ಬೇಡಿಕೆ ಇದೆಯೋ.. ಅಷ್ಟೇ ಬೇಡಿಕೆ ಕಿರುತೆರೆಗೂ ಇದೆ. ದೇಶಾದ್ಯಂತ ಮನೆಯಲ್ಲಿ ಸೀರಿಯಲ್‌ ನೋಡುವವರ ಸಂಖ್ಯೆನೂ ಅಷ್ಟೇ ದೊಡ್ಡದಿದೆ. ಭಾರತದ ಯಾವುದೇ ಮೂಲೆಗೆ ಹೋದರೂ, ಧಾರಾವಾಹಿ ನೋಡುವವರ ಸಂಖ್ಯೆ ಕಮ್ಮಿಯಿಲ್ಲ. ಅದಕ್ಕಾಗಿ ಕಿರುತೆರೆ ನಟಿಯರಿಗೂ ಬೇಡಿಕೆ ಹೆಚ್ಚಿದೆ.

ಕೆಲವು ಧಾರಾವಾಹಿಗಳು ಕೆಲ ನಟಿಯನ್ನು ಸೂಪರ್‌ಸ್ಟಾರ್‌ಗಳನ್ನಾಗಿ ಮಾಡಿದೆ. ಈ ನಟಿಯರ ಸಂಭಾವನೆ ಕೂಡ ಯಾವುದೇ ಸ್ಟಾರ್‌ ನಟರಿಗೇನು ಕಮ್ಮಿಯಿಲ್ಲ. ಸ್ಟಾರ್ ನಟರು ಒಂದು ಸಿನಿಮಾದಿಂದ ದುಡಿಯುವ ಸಂಭಾವನೆಯನ್ನು ಈ ಕಿರುತೆರೆ ನಟಿಯರು ಸೀರಿಯಲ್‌ನಿಂದಲೇ ದುಡಿ ಮುಗಿಸುತ್ತಾರೆ.

ಭಾರತದ ಕಿರುತೆರೆಯಲ್ಲಿ ಈಗ ಸೂಪರ್‌ಸ್ಟಾರ್‌ ರೇಂಜ್‌ನಲ್ಲಿರುವ ರುಪಾಲಿ ಗಂಗೂಲಿ, ಹೀನಾ ಖಾನ್, ಅಂಕಿತಾ ಲೋಕಂಡೆ, ತೇಜಸ್ವಿ ಪ್ರಕಾಶ್ ಸೇರಿದಂತೆ ಕೆಲ ನಟಿಯರು ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಲಕ್ಷದ ಮೇಲಿದೆ. ಅಂತಹ ನಟಿಯರ ಪಟ್ಟಿ ಇಲ್ಲಿದೆ.

Ankita Lokhande here the list of highest paid tv actress list

ಅಂಕಿತಾ ಲೋಕಂಡೆ

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗರ್ಲ್‌ಫ್ರೆಂಡ್ ಅಂಕಿತಾ ಲೋಕಂಡೆ ಕಿರುತೆರೆಯ ಜನಪ್ರಿಯ ನಟಿ. 2023ರಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕಿರುತೆರೆ ನಟಿಯೀಕೆ. ಬಿಗ್‌ಬಾಸ್ ಹಿಂದಿ ಸೀಸನ್ 17ನಲ್ಲಿ ಭಾಗವಹಿಸಿದ್ದ ಈ ನಟಿ ಜನಪ್ರಿಯರಾಗಿದ್ದಾರೆ. ಮನೆಯೊಳಗೆ ತನ್ನ ಪತಿ ವಿಕ್ಕಿ ಜೈನ್ ಜೊತೆ ಪ್ರವೇಶ ಮಾಡಿದ್ದ ನಟಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಲ್‌ಚಲ್ ಎಬ್ಬಿಸಿದ್ದರು. ಈಗಾಗಲೇ ವರದಿಯಾಗಿರುವ ಪ್ರಕಾರ, ಅಂಕಿತಾ ಲೋಕಂಡೆ ಒಂದು ಎಪಿಸೋಡ್‌ಗೆ 1.8 ರಿಂದ 2 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ 'ನಾಗಿಣಿ 7' ಧಾರಾವಾಹಿ ಶುರುವಾಗಲಿದ್ದು, ಅದಕ್ಕೆ ಅಂಕಿತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಏಕ್ತಾ ಕಪೂರ್ ಪ್ರತಿ ಎಪಿಸೋಡ್‌ಗೆ 3 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

Hina Khan here the list of highest paid tv actress list

ಹೀನಾ ಖಾನ್

ಭಾರತದ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಧಾರಾವಾಹಿ 'ಯೇ ರಿಷ್ತಾ ಕ್ಯಾ ಕೆಹಲಾತಾ ಹೇ'. ಹಾಗೇ 'ಕಸೌಟಿ ಜಿಂದಗಿ ಕಿ' ಈ ಎರಡೂ ಧಾರಾವಾಹಿಗಳು ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಇದರಲ್ಲಿ ಕಿರುತೆರೆಯಲ್ಲಿ ನಟಸಿದ ಹೀನಾ ಖಾನ್ ಜನಪ್ರಿಯರಾಗಿದ್ದರು. ಈ ನಟಿ ಒಂದು ಎಪಿಸೋಡ್‌ಗೆ 2 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Tejasswi prakash here the list of highest paid tv actress list

ತೇಜಸ್ವಿ ಪ್ರಕಾಶ್

ಕಿರುತೆರೆಯ ಮತ್ತೊಂದು ಧಾರಾವಾಹಿ ತೇಜಸ್ವಿ ಪ್ರಕಾಶ್. 'ಸ್ವರ್ಗಿಣಿ' ಅನ್ನೋ ಧಾರಾವಾಹಿ ಮೂಲಕ ಹಿಂದಿ ವೀಕ್ಷಕರ ಗಮನ ಸೆಳೆದ ನಟಿಯೀಕೆ. ಕಿರುತೆರೆಯ ಜೊತೆಗೆ ತನ್ನ ಯೂಟ್ಯೂಬ್ ಚಾನೆಲ್ ಮೂಲಕವೂ ಜನಪ್ರಿಯತೆ ಪಡೆದಿದ್ದರು. 'ನಾಗಿಣಿ 6' ಧಾರಾವಾಹಿಯಲ್ಲಿ ತೇಜಸ್ವಿನಿ ಪ್ರಕಾಶ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಈಕೆಗೂ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಹೆಸರಿದೆ. ಒಂದು ಎಪಿಸೋಡ್‌ಗೆ 2 ರಿಂದ 3 ಲಕ್ಷ ರೂಪಾಯಿ ಪಡೆಯುತ್ತಾರೆ.

Rupali Ganguly here the list of highest paid tv actress list
ರುಪಾಲಿ ಗಂಗೂಲಿ

ಕಿರುತೆರೆ ಪ್ರಪಂಚದ ಅಚ್ಚು ಮೆಚ್ಚಿನ ಸೊಸೆ ಯಾರು ಅಂತ ಕೇಳಿದ್ರೆ, ರುಪಾಲಿ ಗಂಗೂಲಿ ಹೆಸರು ಬರುತ್ತೆ. ಸದ್ಯ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರ ಆಗುತ್ತಿರುವ 'ಅನುಪಮಾ' ಧಾರಾವಾಹಿ ಅತೀ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಹಾಗಂತ ಕಿರುತೆರೆ ಅಷ್ಟೇ ಅಲ್ಲ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. ಹೀಗಾಗಿ ಇವರಿಗೆ ಬೇಡಿಕೆ ಹೆಚ್ಚಿದೆ. ಕಿರುತೆರೆಯ ಈ ಬಹು ಬೇಡಿಕೆಯ ನಟಿ ಒಂದು ಎಪಿಸೋಡ್‌ಗೆ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Jannifar Winget here the list of highest paid tv actress list

ಜನ್ನಿಫರ್ ವಿಂಗೆಟ್

'ಶಕ ಲಕ ಬೂಮ್ ಬೂಮ್' ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಜನ್ನಿಫರ್ ವಿಂಗೆಟ್. ಈ ನಟಿ 'ಕಸೌಟಿ ಜಿಂದಗಿ ಕೀ', 'ದಿಲ್ ಮಿಲ್ ಗಯೇ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಗಳು ಈಕೆಯ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಎನ್ನಬಹುದು. ವೆಬ್ ಸೀರಿಸ್, ಧಾರಾವಾಹಿ, ಸಿನಿಮಾ ಎಲ್ಲದರ ಮೂಲಕವೂ ವೀಕ್ಷಕರನ್ನು ಸೆರೆ ಹಿಡಿದಿದೆ. ಈಕೆ ಕೂಡ ಒಂದು ಎಪಿಸೋಡ್‌ಗೆ 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

More from Filmibeat

English summary
Rupali Ganguly, Ankita Lokhande, Jennifer Winget here the list of highest paid tv actress list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X