ಬಿಗ್ ಬಾಸ್‌ ನಿರೂಪಣೆಗೆ ಸಲ್ಮಾನ್ ಬೇಡಿಕೆ ಇರಿಸಿರುವ ಸಂಭಾವನೆ ಇಷ್ಟೊಂದಾ?

ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಜಗತ್ತು ತಲ್ಲಣಿಸಿದೆ. ಮನರಂಜನಾ ಲೋಕ ತತ್ತರಿಸಿದೆ. ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಿ ಅವು ಪ್ರಸಾರವಾಗುತ್ತಿದ್ದರೂ ರಿಯಾಲಿಟಿ ಶೋಗಳು ಪ್ರಾರಂಭವಾಗಿಲ್ಲ. ಆದರೆ ಈ ನಡುವೆ ಹಿಂದಿಯಲ್ಲಿ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್‌ನ ಮುಂದಿನ ಆವೃತ್ತಿ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಈಗಾಗಲೇ ಬಿಗ್ ಬಾಸ್ ಬಗ್ಗೆ ಬಾಲಿವುಡ್ ಸುತ್ತಮುತ್ತ ಚರ್ಚೆ ಶುರುವಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್ ಅಂತ್ಯದ ವೇಳೆಗೆ ಬಿಗ್ ಬಾಸ್‌ನ ಹೊಸ ಸೀಸನ್ ಆರಂಭವಾಗಲಿದೆ. ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಮುನ್ನ ಪ್ರತಿ ಸ್ಪರ್ಧಿಯನ್ನೂ ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಷ್ಟೇ ಅಲ್ಲ, ಬಿಗ್ ಬಾಸ್ ಒಳಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಯಮ ಇರಲಿದೆ.

ಹೀಗಾಗಿ ಬಿಗ್ ಬಾಸ್‌ನಲ್ಲಿ ಕಿತ್ತಾಟದ ಟಾಸ್ಕ್‌ಗಳು ಇರುವುದಿಲ್ಲ. ವಿಭಿನ್ನ ರೀತಿಯ ಟಾಸ್ಕ್‌ಗಳನ್ನು ರೂಪಿಸಲಾಗುತ್ತದೆ. ಅಷ್ಟೇ ಅಲ್ಲ, ಪ್ರತಿ ಬಾರಿಯೂ ಹೆಚ್ಚು ಸದ್ದು ಮಾಡುತ್ತಿದ್ದ ಪ್ರೀತಿ-ಪ್ರೇಮ-ಪ್ರಣಯದ ದೃಶ್ಯಗಳಂತೂ ಇರಲಾರದು. ಮುಂದೆ ಓದಿ...

ಭಾರಿ ಮೊತ್ತದ ಬೇಡಿಕೆ

ಭಾರಿ ಮೊತ್ತದ ಬೇಡಿಕೆ

ಸುದೀರ್ಘ ಸಮಯದಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಸಲ್ಮಾನ್ ಖಾನ್ ಅವರೇ ಬಿಗ್ ಬಾಸ್ ಸೀಸನ್ 14ರ ಅತಿಥ್ಯ ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ವಾರದ ಎರಡು ದಿನ ನಿರೂಪಣೆ ಮಾಡಲು ಅವರು ಭಾರಿ ಮೊತ್ತದ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.

16 ಕೋಟಿ ರೂ ಸಂಭಾವನೆ

16 ಕೋಟಿ ರೂ ಸಂಭಾವನೆ

ಈಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಬಿಗ್ ಬಾಸ್ 14ರ ಸೀಸನ್‌ನಲ್ಲಿ ಒಂದು ವಾರದ, ಅಂದರೆ ವಾರದ ಕೊನೆಯ ಎರಡು ದಿನದ ನಿರೂಪಣೆಗಾಗಿ 16 ಕೋಟಿ ರೂ ಸಂಭಾವನೆ ನೀಡುವಂತೆ ಸಲ್ಮಾನ್ ಖಾನ್ ಕೇಳಿದ್ದಾರೆ. ಅನೇಕ ಮಿತಿಗಳ ನಡುವೆ ನಿರೂಪಣೆ ಮಾಡಬೇಕಿರುವುದರಿಂದ ಸಲ್ಮಾನ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಆನ್ ಲೈನ್ ಮೂಲಕ ಆಯ್ಕೆ

ಆನ್ ಲೈನ್ ಮೂಲಕ ಆಯ್ಕೆ

ಕಳೆದ ಬಿಗ್ ಬಾಸ್ 13ರ ಅವಧಿಯಲ್ಲಿ ಸಲ್ಮಾನ್ ಖಾನ್ ಪ್ರತಿ ವಾರ ತೆರೆಯ ಮೇಲೆ ಕಾಣಿಸಿಕೊಳ್ಳಲು 12-14 ಕೋಟಿ ರೂ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಬಿಗ್ ಬಾಸ್ ನಿರ್ಮಾಣ ತಂಡ ಈಗಾಗಲೇ ಸಂಭಾವ್ಯ 30 ಸ್ಪರ್ಧಿಗಳ ಹೆಸರನ್ನು ಅಂತಿಮಗೊಳಿಸಿದೆ. ಆನ್‌ಲೈನ್ ಮೂಲಕವೇ ಈ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

13 ಸೆಲೆಬ್ರಿಟಿಗಳು

13 ಸೆಲೆಬ್ರಿಟಿಗಳು

30 ಸ್ಪರ್ಧಿಗಳ ಪಟ್ಟಿಯಲ್ಲಿ 16 ಮಂದಿ ಬಿಗ್ ಬಾಸ್ ಮನೆಗೆ ಹೋಗಲಿದ್ದು, ಅವರಲ್ಲಿ 13 ಮಂದಿ ಸೆಲೆಬ್ರಿಟಿಗಳು ಮತ್ತು ಮೂವರು ಜನಸಾಮಾನ್ಯರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಭಾಗವಹಿಸುವ ಅನೇಕ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಂಚೂಣಿಯಲ್ಲಿ ಎರಡು ಹೆಸರು

ಮುಂಚೂಣಿಯಲ್ಲಿ ಎರಡು ಹೆಸರು

ಬಿಗ್ ಬಾಸ್ 13ರಲ್ಲಿ ಫೈನಲ್ ತಲುಪಿದ್ದ ಪರಾಸ್ ಛಾಬ್ರಾ ಅವರ ಮಾಜಿ ಗೆಳತಿ ಆಕಾಂಕ್ಷಾ ಪುರಿ ಮತ್ತು ನಾಗಿನ್ 4ರ ನಟಿ ಜಾಸ್ಮಿನ್ ಭಾಸಿನ್, ಬಿಗ್ ಬಾಸ್ ಪ್ರವೇಶಿಸುವ ಅಂತಿಮ ಸ್ಪರ್ಧಿಗಳಲ್ಲಿ ಇಬ್ಬರು ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬರಬೇಕಿದೆ.

ಇತರೆ ಸ್ಪರ್ಧಿಗಳ ಹೆಸರು

ಇತರೆ ಸ್ಪರ್ಧಿಗಳ ಹೆಸರು

ಅವರ ಜತೆಗೆ, ಕರಣ್ ಕುಂದ್ರ, ಟಿವಿ ನಟಿ ಅಲಿಶಾ ಪನ್ವಾರ್, ಎಂಟಿವಿ ರೋಡೀಸ್ ಸೀಸನ್ 8ರ ವಿನ್ನರ್ ಅಂಚಲ್ ಖುರಾನಾ, ಎಂಟಿವಿ ಸ್ಪಿಲ್ಟ್‌ಸ್ವಿಲ್ಲಾದ ಮಾಜಿ ಸ್ಪರ್ಧಿ ಆರುಷಿ ದತ್ತಾ ಮತ್ತು ಟಿವಿ ನಟಿ ಮಾನ್ಸಿ ಶ್ರೀವಾಸ್ತವ ಅವರ ಹೆಸರುಗಳೂ ಕೇಳಿಬರುತ್ತಿವೆ.

More from Filmibeat

English summary
Reports says Salman Khan has demanded Rs 16 crore per episode to host Bigg Boss 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X