ಮದುವೆಗೂ ಮುನ್ನವೇ ಪ್ರೆಗ್ನೆಂಟ್.. ಕ್ರಾಂತಿ ಮಾಡಲು ಹೊರಟಿದ್ದ ನಟಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ

ಭಾರತದಾದ್ಯಂತ ಎಲ್ಲಾ ಕಡೆ ಮತ್ತೆ ಬಿಗ್‌ಬಾಸ್ ಶುರುವಾಗಿದೆ. ಇನ್ನು ಕೆಲವು ಕಡೆ ಬಿಗ್‌ಬಾಸ್‌ಗೆ ತಯಾರಿಗಳು ನಡೆಯುತ್ತಿವೆ. ಭಾರತದ ದುಬಾರಿ ರಿಯಾಲಿಟಿ ಶೋ ಸಾಲಿನಲ್ಲಿ ನಿಲ್ಲುವ ಬಿಗ್ ಬಾಸ್ ಸೀಸನ್ 19 ಶುಭಾರಂಭಗೊಂಡಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬಿಗ್ ಬಾಸ್‌ನ 19ನೇ ಸೀಸನ್‌ನೊಂದಿಗೆ ಮತ್ತೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಪ್ರೀಮಿಯರ್ ವೇಳೆ ಸ್ಪರ್ಧಿಗಳ ಹೆಸರುಗಳ ಬಗ್ಗೆ ಇದ್ದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.

ಸಲ್ಮಾನ್ ಖಾನ್ ನಡೆಸಿ ಕೊಡುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಬ್ಬ ಮಹಿಳಾ ಸ್ಪರ್ಧಿಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆಕೆ ಹಿಂದಿ ಕಿರುತೆರೆ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಕುನಿಕಾ ಸದಾನಂದ್. ವೇದಿಕೆ ಮೇಲೆ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಂಡಿರುವ ಈ ನಟಿ ಹಲವು ವೈಯಕ್ತಿಕ ವಿಷಯಗಳಿಗೆ ಚರ್ಚೆಯಲ್ಲಿ ಇದ್ದರು.

Salman Khan to Welcome Popular Actress in Bigg Boss 19 Amid Buzz Over Her Past Marriage

ಬಾಲಿವುಡ್ ನಟಿ ಕುನಿಕಾ ಸದಾನಂದ್ ಅವರ ವೈಯಕ್ತಿಕ ಜೀವನ ಹಲವು ಕಾರಣಗೆ ಚರ್ಚೆಯಲ್ಲಿದೆ. ಹಲವು ಸೀರಿಯಲ್‌ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಈ ನಟಿ ಇತ್ತೀಚೆಗೆ ತನ್ನ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾತಾಡಿದ್ದರು. ಅದೇ ಕಾರಣಕ್ಕೆ ಅವರನ್ನು ಬಿಗ್‌ ಬಾಸ್‌ಗೆ ಕಳುಹಿಸಿ ಕೊಟ್ಟಿರಬಹುದೆಂದು ಚರ್ಚೆಯಾಗುತ್ತಿದೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಮದುವೆಯಾದ ವ್ಯಕ್ತಿಯನ್ನು ಪ್ರೀತಿಸಿದ್ದರು. ಈ ಬಗ್ಗೆ ಕುನಿಕಾ ಅವರು ತಮ್ಮ ಹಳೆಯ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈಗ ಈ ಶೋನಲ್ಲಿ ಕುನಿಕಾ ಅವರ ಬದುಕಿನ ಅಸಲಿ ಕಹಾನಿ ಬಹಿರಂಗಗೊಳ್ಳುವುದನ್ನು ನೋಡುವುದಕ್ಕೆ ವೀಕ್ಷಕರು ಎದುರು ನೋಡುತ್ತಿದ್ದಾರೆ.

ಕೆಲವು ವರದಿಗಳ ಪ್ರಕಾರ, ಕುನಿತಾ ಸದಾನಂದ್ ಮೊದಲ ಮದುವೆ ಅಭಯ್ ಕೊಠಾರಿ ಎಂಬುವವರೊಂದಿಗೆ ನಡೆದಿತ್ತು. 16ನೇ ವಯಸ್ಸಿನಲ್ಲಿಯೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ 17ನೇ ವಯಸ್ಸಿಗೆ ಕುನಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಹುಬೇಗನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರಿಂದ ಕುನಿಕಾ ಸದಾನಂದ್ ತಮ್ಮ ಪಿಯುಸಿಯನ್ನು ಗಂಡನ ಮನೆಯಲ್ಲಿದ್ದುಕೊಂಡೇ ಪೂರ್ಣಗೊಳಿಸಿದ್ದರು. ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ.

ಕುನಿಕಾ ಸದಾನಂದ್ ವಿಚ್ಚೇದನದ ಬಳಿಕ ತಮ್ಮ 35ನೇ ವಯಸ್ಸಿನಲ್ಲಿ ಎರಡನೇ ಮದುವೆ ಆದರು. ವಿನಯ್ ಲಾಲ್ ಎಂಬುವವರನ್ನು ಅಮೆರಿಕದಲ್ಲಿ ಮದುವೆ ಆದರು. ಎರಡನೇ ಮದುವೆಯಿಂದಲೂ ಒಬ್ಬ ಪುತ್ರನಿದ್ದಾನೆ. ಆದರೆ, ಎರಡನೇ ಮದುವೆ ಆಗುವುದಕ್ಕೂ ಮುನ್ನವೇ ಕುನಿಕಾ ಸದಾನಂದ್ ಗರ್ಭಿಣಿಯಾಗಿದ್ದರು. ಈ ವಿಷಯವನ್ನು ಅವರು ಇತ್ತೀಚೆಗೆ ಸಿದ್ಧಾರ್ಥ್ ಕನ್ನನ್ ಅವರ ಪಾಡ್‌ಕಾಸ್ಟ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

Salman Khan to Welcome Popular Actress in Bigg Boss 19 Amid Buzz Over Her Past Marriage

ಕುನಿಕಾ ಸದಾನಂದ್ ಅವರಿಗೆ ಮದುವೆ ಆಗುವುದಕ್ಕೆ ಇಷ್ಟವಿರಲಿಲ್ಲ. ಬಾಲಿವುಡ್‌ನ ಮತ್ತೊಬ್ಬ ಜನಪ್ರಿಯ ನಟಿ ನೀನಾ ಗುಪ್ತಾರಂತೆ ಇರುವುದಕ್ಕೆ ಬಯಸಿದ್ದಾಗಿ ಹೇಳಿಕೊಂಡಿದ್ದಾರೆ. ಬಾಲಿವುಡ್ ನಟಿ ಟಬು ಹಾಗೂ ನೀನಾ ಗುಪ್ತಾ ಅವರಂತೆ ಸಿಂಗಲ್ ಪೇರೆಂಟ್ ಬಗ್ಗೆ ಚರ್ಚೆ ಕೂಡ ಮಾಡಿದ್ದರಂತೆ. ಆದರೆ, ಅವರೆಲ್ಲರೂ ಮದುವೆ ಆಗುವಂತೆ ಸಲಹೆ ನೀಡಿದ್ದರು.

ಕುನಿಕಾ ಸದಾನಂದ್ ಪಾಡ್‌ಕಾಸ್ಟ್‌ನಲ್ಲಿ "ನನ್ನ ಎರಡನೇ ಮದುವೆಯಲ್ಲಿ ನನ್ನ ಕುಟುಂಬದ ಸದಸ್ಯರು ಯಾರೂ ಇರಲಿಲ್ಲ. ನನ್ನ ಅತ್ತೆ ಕೂಡ ಬಂದಿರಲಿಲ್ಲ. ವಿನಯ್ ಹಾಗೂ ಅವರ ಅಮೆರಿಕದ ಸ್ನೇಹಿತರು ಮಾತ್ರ ಬಂದಿದ್ದರು. ನಾನು ಮದುವೆಗೆ ರೆಡಿಯಾಗುವಾಗ ಕಣ್ಣೀರು ಹಾಕುತ್ತಿದ್ದೆ. ವಿನಯ್ ಅವರ ಸ್ನೇಹಿತರೇ ನನ್ನ ಕನ್ಯಾದಾನ ಮಾಡಿದರು. ನನ್ನ ತಂದೆ ಕೂಡ ನೀನು ಮದುವೆಯಾಗದಿದ್ದರೆ ಹೊಟ್ಟೆಯಲ್ಲಿರುವ ಮಗುವನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದ್ದನ್ನು ಸ್ಮರಿಸಿಕೊಂಡಿದ್ದರು.

ಇನ್ನು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಕುನಿಕಾ ಸದಾನಂದ್ ಪತಿಗೆ ಒಂದು ಸಲಹೆ ನೀಡಿದ್ದರಂತೆ. ನಾವು ಮೊದಲು ಒಂದು ತಿಂಗಳು ಒಟ್ಟಿಗೆ ಇರೋಣ. ಹೊಂದಿಕೆಯಾದರೆ ಮಾತ್ರ ಮದುವೆಯಾಗೋಣ. ಇಲ್ಲದೆ ಹೋದಲ್ಲಿ ನೀನು ನನ್ನನ್ನು ಮದುವೆ ಆಗುವುದು ಬೇಡ" ಎಂದಿದ್ದರಂತೆ. ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಆ ಬಳಿಕ ಅವರಿಗೆ 4-5 ತಿಂಗಳಲ್ಲಿ ಮಗು ಹುಟ್ಟಿತು.

More from Filmibeat

English summary
Bigg Boss 19 is set to heat up as Salman Khan welcomes a popular actress into the house. Social media buzz surrounds her personal life and past controversies, adding more drama to the show.
Read more about: bigg boss actress marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X