ಸ್ಟಾರ್ ಸುವರ್ಣದಲ್ಲಿ ಕಾಮಿಡಿ ಉತ್ಸವ: ರಿಷಬ್ ಸ್ಪೆಷಲ್ ಎಂಟ್ರಿ, ತಾರೆಯರ ನೃತ್ಯ!
ವೀಕೆಂಡ್ ಬಂತು ಅಂದರೆ, ಮನರಂಜನಾ ವಾಹಿನಿಗಳು ರಂಗೇರುತ್ತವೆ. ವಿಭಿನ್ನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ತಮ್ಮ ವೀಕ್ಷಕರಿಗೆ ಮನರಂಜನೆಯನ್ನು ನೀಡಲೆಂದೇ ಕಾಂಪಿಟೇಷನ್‌ಗೆ ಬಿದ್ದು ಕಾರ್ಯಕ್ರಮಗಳನ್ನು ನೀಡುತ್ತವೆ. ಈ ವಾರ ಕೂಡ ಸ್ಟಾರ್ ಸುವರ್ಣದಲ್ಲಿ ಭರಪೂರ ಮನರಂಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಟಾರ್ ಸುವರ್ಣದಲ್ಲಿ ಈ ವಾರ ಮತ್ತೊಮ್ಮೆ ಮನರಂಜನೆಯ ಸಂಭ್ರಮ. ಇದೇ ಭಾನುವಾರ ಕಿರುತೆರೆ ಹಾಗೂ ಬೆಳ್ಳಿತೆರೆಯ ತಾರೆಯರ ಸಮಾಗಮ ಆಗಲಿದೆ. ಸ್ಟಾರ್ ಸುವರ್ಣದಲ್ಲಿ ಹಾಸ್ಯದ ಜೊತೆ ಜೊತೆಗೆ ತಾರೆಯರ ಪರ್ಫಾಮೆನ್ಸ್ ಕೂಡ ಇರುತ್ತೆ.
ಹೌದು, ಇದೇ ಭಾನುವಾರ ಸ್ಟಾರ್ ಸುವರ್ಣದಲ್ಲಿ 'ಕಾಮಿಡಿ ಗ್ಯಾಂಗ್ಸ್ ಉತ್ಸವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇದಿಕೆ ಮೇಲೆ ಸ್ಯಾಂಡಲ್‌ವುಡ್ ನಟ-ನಿರ್ದೇಶಕ ರಿಷಭ್ ಶೆಟ್ಟಿ , ಮಾನ್ವಿತಾ ಕಾಮತ್, ಖುಷಿ , ನಿಶ್ವಿಕಾ ನಾಯ್ಡು ಸೇರಿದಂತೆ, ಹಲವಾರು ತಾರೆಯರು ಭಾಗಿಯಾಗಲಿದ್ದಾರೆ. 'ಕಾಮಿಡಿ ಗ್ಯಾಂಗ್ಸ್ ಉತ್ಸವ'ದಲ್ಲಿ ಹಾಸ್ಯ ಕಲಾವಿದರ ಸ್ಕಿಟ್ ಇದೆ. ಈ ವಿಶೇಷ ಕಾರ್ಯಕ್ರಮವನ್ನು ನೋಡಿ ನಟ, ನಿರ್ದೇಶಕ ರಿಷಬ್ ಶೆಟ್ಟೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನೂ ಈ ವಾರದ ಹೈಲೈಟ್ ಅಂದರೆ, ನಿರೂಪಕ ಶಿವರಾಜ್ ಕೆ.ಆರ್ ಪೇಟೆ. ಹಾಗೇ ಪ್ರಮುಖ ತೀರ್ಪುಗಾರರಾದ ಮುಖ್ಯಮಂತ್ರಿ ಚಂದ್ರು, ಶ್ರುತಿ ಹರಿಹರನ್ ಮತ್ತು ಕುರಿ ಪ್ರತಾಪ್. ಯಾಕಂದ್ರೆ, ಕಾಮಿಡಿ ಗ್ಯಾಂಗ್ಸ್ ಈ ತೀರ್ಪುಗಾರರ ಅನುಕರಣೆ ಮಾಡಿ ಕಿರುತೆರೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿಸಿದ್ದಾರೆ.
'ಕಾಮಿಡಿ ಗ್ಯಾಂಗ್ಸ್ ಉತ್ಸವ' ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ಕಾಮತ್, ವೈಷ್ಣವಿ, ನಿಶ್ವಿಕಾ ನಾಯ್ಡು, ಖುಷಿ ಮತ್ತು ಪೃಥ್ವಿ ಡ್ಯಾನ್ಸ್ ಪರ್ಫಾಮೆನ್ಸ್ ಇದೆ. ಈ ಮೂಲಕ ಕಾಮಿಡಿ ಗ್ಯಾಂಗ್ಸ್ ಉತ್ಸವಕ್ಕೆ ಮತ್ತಷ್ಟು ಮೆರುಗು ತುಂಬಲಿದ್ದಾರೆ. ಕಾಮಿಡಿ ಗ್ಯಾಂಗ್ಸ್ ನಿರೂಪಕ ಶಿವರಾಜ್ ಕೆ.ಆರ್. ಪೇಟೆ ಈ ಬಾರಿ ಕಾಮಿಡಿ ಅಷ್ಟೇ ಮಾಡಿಲ್ಲ ಜೊತೆಗೆ ಡ್ಯಾನ್ಸ್ ಕೂಡ ಮಾಡಿರುವುದು ವಿಶೇಷ.

ಇವರೊಂದಿಗೆ ಗಾಯಕರಾದ ಹರ್ಷ ಮತ್ತು ಅಂಕಿತಾ ಕುಂದು ಸುಮಧುರ ಹಾಡುಗಳನ್ನು ಹಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಭಾನುವಾರ ಸಂಜೆ ಸ್ಟಾರ್ ಸುವರ್ಣದಲ್ಲಿ ಮತ್ತಷ್ಟು ಮನರಂಜನೆ ಗ್ಯಾರಂಟಿ. ಜೂನ್ 12ರಂದು ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ನಿರಂತರವಾಗಿ 3 ಗಂಟೆಗಳ ಕಾಲ ಕಾಮಿಡಿ, ಸಾಂಗ್, ಡ್ಯಾನ್ ಇರುತ್ತೆ.


Click it and Unblock the Notifications











