Sangeetha Sringeri: ಬಿಗ್ ಬಾಸ್ ಮನೆಯಿಂದ ಸಂಗೀತಾ ಶೃಂಗೇರಿ ಔಟ್: 2ನೇ ರನ್ನರ್ ಅಪ್!
ಬಿಗ್‌ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿತ್ತು. ಈ ಹಿಂದಿನ ಬಿಗ್ ಬಾಸ್ ಸೀಸನ್‌ಗಳಿಗಿಂತ 10ನೇ ಸೀಸನ್ ವಿಭಿನ್ನವಾಗಿತ್ತು. ಈ ಬಾರಿಯ ಸೀಸನ್‌ನಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ ಇತ್ತು. ಅದರಲ್ಲಿ ಸಂಗೀತ ಶೃಂಗೇರಿ ಪಯಣ ಕೂಡ ಅಷ್ಟೇ ಸೊಗಸಾಗಿತ್ತು. ಬಿಗ್ ಬಾಸ್‌ನಲ್ಲಿ ಎಮೋಷನಲ್ ಆಗಿ, ಖಡಕ್ ಆಟ ಆಡಿದ ನಟಿಯೀಕೆ.
ಮಲೆನಾಡಿನ ಕುವರಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ಕನ್ನಡ ಸೀಸನ್‌ನ 10ನೇ ಟಾಪ್ 3 ಪೊಸಿಷನಲ್‌ನಲ್ಲಿ ಇದ್ದರು. ಪ್ರಶಸ್ತಿಯನ್ನು ಗೆಲ್ಲುವ ಟಾಪ್ ಸ್ಥಾನದಲ್ಲಿ ಸಂಗೀತಾ ಪ್ರಬಲ ಸ್ಪರ್ಧಿಯಾಗಿ ಕಂಡಿದ್ದರು. ಡ್ರೋನ್ ಪ್ರತಾಪ್, ಕಾರ್ತಿಕ್ ಜೊತೆಗೆ ಸಂಗೀತಾ ಶೃಂಗೇರಿ ಪ್ರಬಲ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಈಗ 2ನೇ ರನ್ನರ್ ಅಪ್ ಆಗಿದ್ದಾರೆ.

ಸಂಗೀತಾ ಶೃಂಗೇರಿ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಲೆನಾಡ ಕಂಪನ್ನು ಪಸರಿಸಿದ ನಟಿ. 'ಹರ ಹರ ಮಹಾದೇವ' ಅನ್ನುವ ಧಾರಾವಾಹಿಯಲ್ಲಿ ಸತಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆದಿದ್ದ ನಟಿ ಸಂಗೀತ ಶೃಂಗೇರಿ. ಮಲೆನಾಡಿನ ಶೃಂಗೇರಿಯಿಂದ ಬಂದ ಚೆಂದುಳ್ಳಿ ಚೆಲುವೆಯ ಜರ್ನಿ ಬಿಗ್ ಬಾಸ್‌ನಲ್ಲೂ ಅಷ್ಟೇ ಕಲರ್ ಫುಲ್ ಆಗಿತ್ತು.
ಬಿಗ್‌ಬಾಸ್‌ಗೆ ಹೋಗುವುದಿಲ್ಲ ಎನ್ನುತ್ತಲೇ ಬಿಗ್ ಬಾಸ್ ಅನ್ನುವ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ನಟಿಯೀಕೆ. ಬಿಗ್ ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆಯಲ್ಲಿ ಸ್ವತ: ಕಿಚ್ಚ ಸುದೀಪ್ ಕೂಡ ಈ ಮಾತನ್ನು ನೆನಪಿಸಿದ್ದರು. ಅದಕ್ಕೆ ಸಂಗೀತಾ ಶೃಂಗೇರಿ ಕೂಡ ಸಮ್ಮತಿ ನೀಡಿದ್ದರು. ಆದರೆ, ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಇತರ ಸ್ಪರ್ಧಿಗಳೊಂದಿಗೆ ಕಾಂಪಿಟೇಟಿವ್ ಆಗಿ ಆಟ ಆಡಿದ್ದರು.
ಈ ಬಿಗ್ ಬಾಸ್‌ನ ಇನ್ನೊಂದು ವಿಶೇಷ ಅಂದರೆ, ಸಂಗೀತಾ ನಟಿಸಿದ ಧಾರಾವಾಹಿ 'ಹರ ಹರ ಮಹಾದೇವ'ದಲ್ಲಿಯೇ ವಿನಯ್ ಗೌಡ ಕೂಡ ನಟಿಸಿದ್ದರು. ಇದೇ ಜೋಡಿ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಒಟ್ಟಿಗೆ ಬಂದಿದ್ದರು. ಇಡೀ ಸೀಸನ್‌ನಲ್ಲಿ ಸಂಗೀತಾ ಹಾಗೂ ವಿನಯ್ ಗೌಡ ಇಬ್ಬರಿಗೂ ಮೊದಲೇ ಪರಿಚಯವಿದ್ದರೂ, ಮನೆಯಲ್ಲಿ ಹೆಚ್ಚಾಗಿ ಕಿತ್ತಾಡಿಕೊಂಡಿದ್ದೇ ಹೆಚ್ಚು.
ಅಂದ್ಹಾಗೆ, ಸ್ನೇಹಿತರ ಒತ್ತಾಯದ ಮೇರೆಗೆ ಕಿರುಚಿತ್ರವೊಂದರಲ್ಲಿ ನಟಿಸಿ ಸಂಗೀತಾ ಸೈ ಎನ್ನಿಸಿಕೊಂಡಿದ್ದರು. ಸಂಗೀತಾ ನಟನೆ ಕಂಡು ಸ್ಟಾರ್ ಸುವರ್ಣ 'ಹರ ಹರ ಮಹಾದೇವ'ದಂತಹ ಭಕ್ತಿಪ್ರಧಾನ ಧಾರಾವಾಹಿಯಲ್ಲಿ ಸತಿ ಪಾತ್ರವನ್ನು ನೀಡಿತ್ತು. 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಶಿವನ ಪತ್ನಿ ಸತಿದೇವಿಯ ಪಾತ್ರವನ್ನು ನೀಡಲಾಗಿತ್ತು. ಈ ಪಾತ್ರದಲ್ಲಿ ಮಿಂಚಿ ವೀಕ್ಷಕರ ಮನ: ಗೆದ್ದಿದ್ದರು.
ಇತ್ತೀಚೆಗಷ್ಟೇ ಸಂಗೀತಾ ಶೃಂಗೇರಿ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'ಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆ ಬಳಿಕ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಅಲ್ಲಿಂದ ಸೀತಾ ಬಿಗ್‌ಬಾಸ್ ಕನ್ನಡ ಸೀಸನ್ 10ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.


Click it and Unblock the Notifications











