Sanjana Galrani: ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ; ಒಂದು ವಾರಕ್ಕೆ ಈ ನಟಿ ಸಿಗ್ತಿರೋ ಸಂಭಾವನೆ ಎಷ್ಟು ಗೊತ್ತೇ?
ಸ್ಯಾಂಡಲ್‌ವುಡ್‌ನ ವಿವಾದಾತ್ಮಕ ನಟಿ ಸಂಜನಾ ಗಲ್ರಾನಿ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯಿಂದ(ಸೆಪ್ಟೆಂಬರ್ 8) ಆರಂಭಗೊಂಡಿರುವ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ ಆರಂಭಗೊಂಡಿದೆ. ಒಬ್ಬೊಬ್ಬರೇ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಸರ್ಪ್ರೈಸ್ ಕೊಟ್ಟಿದ್ದು ನಟಿ ಸಂಜನಾ ಗಲ್ರಾನಿ. ವಿವಾಹದ ಬಳಿಕ ನಟನೆಯಿಂದ ದೂರ ಉಳಿದಿದ್ದ ನಟಿ ದಿಢೀರನೇ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 9ಕ್ಕೆ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟಿದ್ದಾರೆ. ಇವರ ಎಂಟ್ರಿಯನ್ನು ಸರ್ಪ್ರೈಸ್ ಎಂಟ್ರಿ ಎಂದೇ ಹೇಳಲಾಗುತ್ತಿದೆ. ಈಗಾಗಲೇ ತೆಲುಗು ಕಿರುತೆರೆ ಲೋಕದಲ್ಲಿ ಸಂಜನಾ ಗಲ್ರಾನಿಗೆ ಅತೀ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಮನೆಯೊಳಗಿರುವ ಸ್ಪರ್ಧಿಗಳಿಗೆ ಹೋಲಿಸಿದರೆ, ಇವರೇ ಹೆಚ್ಚು ಸಂಭಾವನೆ ಸಿಕ್ಕಿದೆ ಅನ್ನೋದು ಚರ್ಚೆ. ಹಾಗಿದ್ದರೆ, ಒಂದು ವಾರಕ್ಕೆ ಇವರಿಗೆ ಸಿಗುವ ಸಂಭಾವನೆ ಎಷ್ಟು ನೋಡುವುದಕ್ಕೆ ಮುಂದೆ ಓದಿ.

ಹೈಲೈಟ್ಸ್
ಬಿಗ್ ಬಾಸ್ ತೆಲುಗು ಸೀಸನ್ 9ಕ್ಕೆ ಸಂಜನಾ ಗಲ್ರಾನಿ ಎಂಟ್ರಿ
ಸಂಜನಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ
ಲಕ್ಷಗಳಲ್ಲಿ ಒಂದು ವಾರಕ್ಕೆ ಸಂಜನಾ ಕೈ ಸೇರುತ್ತೆ ಸಂಭಾವನೆ
ತೆಲುಗು ಕಿರುತೆರೆಯಲ್ಲಿ ಸಂಜನಾ ಸಂಭಾವನೆ ಬಗ್ಗೆನೇ ಚರ್ಚೆ
ಹೌದು, ಸಂಜನಾ ಗಲ್ರಾನಿ ತೆಲುಗು ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಕಿರುತೆರೆಯಲ್ಲಿ ಸಂಭಾವನೆ ಬಗ್ಗೆ ಶುರುವಾಗಿದೆ. ಸಂಜನಾ ಗಲ್ರಾನಿ ತೆಲುಗು ಬಿಗ್ ಬಾಸ್‌ಗೆ ಎಂಟ್ರಿ ಕೊಡಬಹುದೆಂಬ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ತೆಲುಗು ರಿಯಾಲಿಟಿ ಶೋನಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಅಬ್ಬರ ಇನ್ನೇನು ಶುರುವಾಗಲಿದೆ. ತೆಲುಗು ಮಂದಿಗೆ ಮನರಂಜನೆಯ ಮಹಾಪೂರವೇ ಸಿಗಲಿದೆ ಎಂಬ ನಿರೀಕ್ಷೆಯಿದೆ.
ಎರಡನೇ ಬಾರಿ ಬಿಗ್ ಬಾಸ್‌ಗೆ ಎಂಟ್ರಿ
ಸಂಜನಾ ಗಲ್ರಾನಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಮೊದಲ ಬಾರಿಯೇನಲ್ಲ. ಕನ್ನಡದಲ್ಲಿಯೇ ಸುಮಾರು 12 ವರ್ಷಗಳ ಹಿಂದೆನೇ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. 2013ರಲ್ಲಿ ಸಂಜನಾ ಬಿಗ್ ಬಾಸ್‌ಗೆ ಮನೆ ಪ್ರವೇಶ ಮಾಡಿದ್ದರು. ಈಗ ತೆಲುಗು ಬಿಗ್ ಬಾಸ್‌ನಲ್ಲಿ ಸಂಚಲನ ಸೃಷ್ಟಿಸುವುದಕ್ಕೆ ಸಂಜನಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಆರಂಭದಲ್ಲಿಯೇ ಡ್ರಗ್ ಕೇಸ್ ವಿಚಾರದಲ್ಲಿ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಿಯೇ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಜನಾ ಈ ವಿಷಯದ ಬಗ್ಗೆ ಗಮನ ಸೆಳೆಯುವ ಸಾಧ್ಯತೆಯಿದೆ.
ಸಂಜನಾಗೆ ಅತೀ ಹೆಚ್ಚು ಸಂಭಾವನೆ
ತೆಲುಗು ಕಿರುತೆರೆಯ ಮೂಲಗಳು ಹೇಳುವಂತೆ ಕನ್ನಡ, ತೆಲುಗು ಎರಡೂ ಚಿತ್ರರಂಗದಲ್ಲೂ ಜನಪ್ರಿಯರಾಗಿರುವ ಸಂಜನಾ ಗಲ್ರಾನಿಗೆ ಅತೀ ಹೆಚ್ಚು ಸಂಭಾವನೆ ನೀಡಲಾಗಿದೆ. ಒಂದು ವಾರಕ್ಕೆ ಸಂಜನಾ ಡಿಮ್ಯಾಂಡ್ ಮಾಡಿದಂತೆ ಬರೋಬ್ಬರಿ 5 ಲಕ್ಷ ರೂಪಾಯಿಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ. ಎಷ್ಟು ವಾರ ಮನೆಯೊಳಗೆ ಇರುತ್ತಾರೋ ಅಷ್ಟು ವಾರಗಳ ಕಾಲ 5 ಲಕ್ಷ ರೂಪಾಯಿಯನ್ನು ಸಂಭಾವನೆ ರೂಪದಲ್ಲಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅಧಿಕೃತವಾಗಿ ಸಂಜನಾ ಅಥವಾ ಸ್ಟಾರ್ ಮಾ ಎಲ್ಲೂ ಹೇಳಿಕೊಂಡಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 1ರ ಸ್ಪರ್ಧಿ
ಸಂಜನಾ ಗಲ್ರಾನಿ ಕನ್ನಡ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿದ್ದರು. ಸುಮಾರು 14 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇದ್ದರು. ಆದರೆ, ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಇವರಿಂದ ಆಗಿರಲಿಲ್ಲ. ಬಿಗ್ ಬಾಸ್ ಸೀಸನ್ 1ರಲ್ಲಿ ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದರು. ಹೀಗಾಗಿ ತೆಲುಗು ಬಿಗ್ ಬಾಸ್‌ನಲ್ಲಿ ಸಂಜನಾ ಗಲ್ರಾನಿ ಎಷ್ಟು ದಿನ ಮನೆಯೊಳಗೆ ಇರುತ್ತಾರೋ ಅನ್ನೋ ಕುತೂಹಲವಿದೆ.
ಬಿಗ್ ಬಾಸ್ ತೆಲುಗು ಸ್ಪರ್ಧಿಗಳ್ಯಾರು?
ಬಿಗ್ ಬಾಸ್ ತೆಲುಗು ಸೀಸನ್ 9 ಈಗಾಗಲೇ ಆರಂಭ ಆಗಿದ್ದು, ಮತ್ತೊಬ್ಬ ಕನ್ನಡದ ನಟಿ ತನುಜಾ ಗೌಡ, ಫ್ಲೋರಾ ಶೈನಿ, ಇಮ್ಯಾನ್ಯುಯೆಲ್, ಮಾಸ್ಕ್ ಮ್ಯಾನ್ ಹರೀಶ್, ಭರಣಿ, ಪವನ್ ಕಲ್ಯಾಣ್ ಪಡಾಲ, ರಾಮು ರಾಥೋಡ್, ದಮ್ಮು ಶ್ರೀಜಾ ಸ್ಪರ್ಧಿಗಳಾಗಿ ಮನೆಯೊಳಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಇವರ ಮಧ್ಯೆ ಸಂಜನಾ ಗಲ್ರಾನಿ 10ನೇ ಸ್ಪರ್ಧಿಯಾಗಿ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಮನೆಯೊಳಗೆ ಎಂಟ್ರಿ ಕೊಟ್ಟಿದ್ದೇನೋ ಆಗಿದೆ. ಏನೆಲ್ಲ ಹಂಗಾಮ ಮಾಡುತ್ತಾರೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











