»   » 'ಸಂಜು ಮತ್ತು ನಾನು' ವಾರಾಂತ್ಯದ ಕತೆಯಲ್ಲಿ 'ಕಾರ್ತಿಕ್': ಯಾರಿದು.?

'ಸಂಜು ಮತ್ತು ನಾನು' ವಾರಾಂತ್ಯದ ಕತೆಯಲ್ಲಿ 'ಕಾರ್ತಿಕ್': ಯಾರಿದು.?

Posted By:
Subscribe to Filmibeat Kannada

'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಮೂಡಿ ಬರುತ್ತಿರುವ ನಿಗದಿತ ಕಂತುಗಳ 'ಸಂಜು ಮತ್ತು ನಾನು' ವಾರಾಂತ್ಯದ ಕತೆಯಲ್ಲಿ ಹೊಸ ತಿರುವು ಸಿಗಲಿದೆ. ಇಲ್ಲಿಯವರೆಗೂ ಸಂಜನಾ ಮತ್ತು ಭುವನ್ ಪ್ರೀತಿಗೆ ಅಡ್ಡಿಯೊಡ್ಡುತ್ತಿರುವುದೇ ಪ್ರಥಮ್ ಎಂದುಕೊಂಡಿದ್ದವರಿಗೆ ಈ ವಾರಾಂತ್ಯದಲ್ಲಿ ಸಿಗುವ ಉತ್ತರ ಬೇರೆ.

ಜೂನ್ 10 ರಂದು ರಾತ್ರಿ 9 ಗಂಟೆಗೆ ಮೂಡಿಬರುವ ಸಂಚಿಕೆಯಲ್ಲಿ ಸಂಜನಾಳನ್ನು ಕಾಡುತ್ತಿರುವ ವ್ಯಕ್ತಿ ಪ್ರಥಮ್ ಅಲ್ಲ ಕಾರ್ತಿಕ್ ಎಂದು ತಿಳಿಯುತ್ತದೆ. ಹಾಗಾದ್ರೆ, ಈ ಕಾರ್ತಿಕ್ ಯಾರು.?

'Sanju Mattu Naanu': 5th episode highlight

ಕಾರ್ತಿಕ್ ಗೆ ತನ್ನ ಕಾಲೇಜು ದಿನಗಳಿಂದಲೂ ಸಂಜನಾಳ ಮೇಲೆ ಎಲ್ಲಿಲ್ಲದ ಪ್ರೀತಿ. ಕಾರ್ತಿಕ್ ಗೆ ಫಸ್ಟ್ ಲವ್ ಆಗಿದ್ದು ಸಂಜನಾ ಮೇಲೆ. ಇಂದಿಗೂ ಅವನ ಕನಸಿನ ರಾಣಿ ಸಂಜನಾ.

[ಮೇ 27 ರಿಂದ ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ ಲವ್ ಸ್ಟೋರಿ' ಶುರು]

ಭುವನ್ ಹಾಗೂ ಪ್ರಥಮ್ ಮೇಲೆ ಕಾರ್ತಿಕ್ ಗೆ ಯಾವುದೇ ದ್ವೇಷ, ಅಸೂಯೆ ಇಲ್ಲ. ಆದ್ರೆ, ಸಂಜನಾಗೆ ಭುವನ್ ಹಾಗೂ ಪ್ರಥಮ್ ತೊಂದರೆ ಕೊಡುತ್ತಿದ್ದಾರೆ ಎಂಬ ಅಭಿಪ್ರಾಯ ಕಾರ್ತಿಕ್‌ ರವರದ್ದು.

'Sanju Mattu Naanu': 5th episode highlight

ಸಂಜನಾ ಹಾಗೂ ಕಾರ್ತಿಕ್ ಒಬ್ಬರಿಗೊಬ್ಬರು ಭೇಟಿ ಆಗುತ್ತಾರೆ. ಆದ್ರೆ ಕಾರ್ತಿಕ್ ರನ್ನ ಸಂಜನಾ ಗುರುತು ಹಿಡಿಯುವುದಿಲ್ಲ. ಕಾರ್ತಿಕ್ ಯಾರು ಎಂದು ಸಂಜನಾಗೆ ಯಾಕೆ ತಿಳಿಯುವುದಿಲ್ಲ ಎಂಬುದೇ ಮುಂದಿನ ಸಂಚಿಕೆಯ ಸಸ್ಪೆನ್ಸ್. ಕಾದು ನೋಡಿರಿ....

English summary
Read this article to know the highlight of 5th episode of 'Sanju mattu Naanu' which will telecast on June 10th at 9PM in Colors Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada