»   » ಮೇ 27 ರಿಂದ ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ ಲವ್ ಸ್ಟೋರಿ' ಶುರು

ಮೇ 27 ರಿಂದ ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ ಲವ್ ಸ್ಟೋರಿ' ಶುರು

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ ನಾಲ್ಕನೇ ಆವೃತ್ತಿ ಮುಗಿದರು, ಕೆಲವು ಸ್ವರ್ಧಿಗಳನ್ನ ಜನ ಇನ್ನು ಮರೆತಿಲ್ಲ. ಅಂತವರಲ್ಲಿ ಪ್ರಥಮ್, ಸಂಜನಾ, ಮತ್ತು ಭುವನ್ ಪ್ರಮುಖರು. ಯಾಕಂದ್ರೆ, ಈ ಮೂವರು 'ಬಿಗ್ ಬಾಸ್' ಮನೆಯೊಳಗೆ ಕೊಟ್ಟಿರುವ ಕಾಟ ಅಷ್ಟಿಷ್ಟಲ್ಲ.

ಈಗ ಮತ್ತೆ ಈ ಮೂವರು ಒಟ್ಟಿಗೆ ಬರ್ತಿದ್ದಾರೆ. ಆದ್ರೆ, ರಿಯಾಲಿಟಿ ಶೋ ನಲ್ಲಿ ಅಲ್ಲ, ಬದಲಾಗಿ ವಾರಾಂತ್ಯದ ಧಾರವಾಹಿಯಲ್ಲಿ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರವಾಹಿ ಶುರುವಾಗುತ್ತಿದೆ. ಅದರ ಹೆಸರು 'ಸಂಜು ಮತ್ತು ನಾನು'.[ತೆರೆಮೇಲೆ ಬಂತು 'ಬಿಗ್ ಬಾಸ್' ಪ್ರಣಯ ಪಕ್ಷಿಗಳ 'ತ್ರಿಕೋನ' ಪ್ರೇಮಕಥೆ!]

ಇಷ್ಟು ದಿನ ಪೋಸ್ಟರ್, ಪ್ರೋಮೋಗಳಿಂದ ಕುತೂಹಲ ಮೂಡಿಸಿದ್ದ 'ಸಂಜು ಮತ್ತು ನಾನು' ಇದೇ ತಿಂಗಳಿಂದ ನಿಮ್ಮ ಮುಂದೆ ಬರುತ್ತಿದೆ. ಮುಂದೆ ಓದಿ.....

ಮೇ 27 ರಿಂದ 'ಸಂಜು ಮತ್ತು ನಾನು'

ಟೈಟಲ್, ಪೋಸ್ಟರ್, ಪ್ರೋಮೋಗಳಿಂದ ಕುತೂಹಲ ಮೂಡಿಸಿದ್ದ 'ಸಂಜು ಮತ್ತು ನಾನು' ಇದೇ ತಿಂಗಳು 27 ರಿಂದ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಎಷ್ಟು ಗಂಟೆಗೆ?

ಪ್ರತಿ ಭಾನುವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ನಿಮ್ಮ ಮನೆಗೆ ಬರಲಿದ್ದಾರೆ. ಅಂದ್ರೆ ಒಂದು ಗಂಟೆಗಳ ಕಾಲ ಈ ಧಾರವಾಹಿ ಪ್ರಸಾರವಾಗುತ್ತೆ.['ಸಂಜು ಮತ್ತು ನಾನು' ಹೊಸ ಟೀಸರ್, ಅಸಲಿಗೆ ಈ 'ನಾನು' ಯಾರು?]

ತ್ರಿಕೋನ ಪ್ರೇಮಕಥೆ!

'ಸಂಜು ಮತ್ತು ನಾನು' ಇದು ತ್ರೀಕೋನ ಪ್ರೇಮಕಥೆ. ಬಿಗ್ ಬಾಸ್ ಸಂಜನಾ, ಭುವನ್, ಪ್ರಥಮ್ ನಡುವೆ ನಡೆಯುವ ಲವ್ ಸ್ಟೋರಿ. ಒಬ್ಬ ನಾಯಕಿಗಾಗಿ, ಇಬ್ಬರು ನಾಯಕರ ಮಧ್ಯೆ ಪೈಪೋಟಿ ಯಾವ ರೀತಿ ಇರುತ್ತೆ ಎಂಬುದೇ ಕಥಾ ಹಂದರ.

'ಬಿಗ್ ಬಾಸ್' ನಲ್ಲಿ ನೀವು ನೋಡಿರುವ ಕಥೆ!

ಅಂದ್ಹಾಗೆ, ಇದು 'ಬಿಗ್ ಬಾಸ್ ಕನ್ನಡ-4'ನೇ ಆವೃತ್ತಿಯಲ್ಲಿ ಬಿಗ್ ಬಾಸ್ ಮನೆಯೊಳಗೆ ನಡೆದ ಅಂಶಗಳನ್ನಿಟ್ಟುಕೊಂಡು ಚಿತ್ರಕಥೆ ಮಾಡಲಾಗಿದೆಯಂತೆ. ಸಂಜನಾ ಲವ್ ಮಾಡಿ ಅಂತ ಪ್ರಥಮ್ ಹಿಂದೆ ಬಿದ್ದಿದ್ದು, ಸಂಜನಾ ವಿಷ್ಯದಲ್ಲಿ ಭುವನ್ ಮತ್ತು ಪ್ರಥಮ್ ಗೆ ಜಗಳವಾಗಿದ್ದು, ಹೀಗೆ ಈ ಮೂವರ ನಡುವೆ ನಡೆಯುವ ಕಥೆ ಇದಾಗಿದೆ.

English summary
'Sanju Mathu Naanu' Weekend Serial Will Starts From May 27th. Sanjana, Pratham and Bhuvan are in the lead Role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada