Saregamapa Season 21: ಈ 13 ಸ್ಪರ್ಧಿಗಳಲ್ಲಿ ಫಿನಾಲೆ ತಲುಪುವ ಆ ಮೊದಲ ಸ್ಪರ್ಧಿ ಯಾರು?
ಬೆಂಗಳೂರು, ಮೇ15: ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಯಾವುದು ಅಂತ ಕೇಳಿದರೆ ತಟ್ಟನೆ ಹೇಳೋದು ಜೀ ಕನ್ನಡದ 'ಸರಿಗಮಪ'. ಹಲವು ವರ್ಷಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಸರಿಗಮಪ ಈಗ 21ನೇ ಸೀಸನ್‌ಗೆ ಬಂದು ನಿಂತಿದೆ. ಈ ಸೀಸನ್ ಕೂಡ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ವಿಭಿನ್ನ ಕಲ್ಪನೆಯ ಮೂಲಕ ಈ ಸಿಂಗಿಂಗ್ ರಿಯಾಲಿಟಿ ಶೋ ಅನ್ನು ಆರಂಭ ಮಾಡಲಾಗಿತ್ತು. ಅದ್ರೀಗ ಫಿನಾಲೆವರೆಗೂ ಬಂದಿದೆ.
ಸಂಗೀತ ಪ್ರತಿಭೆಗಳಿಗೆ ವೇದಿಕೆಯಾಗುತ್ತಾ ಬಂದಿರುವ ಕನ್ನಡದ 'ಸರಿಗಮಪ' ರಿಯಾಲಿಟಿ ಶೋಗೆ ಫ್ಯಾನ್ ಫಾಲೋವಿಂಗ್ ಏನು ಕಮ್ಮಿಯಿಲ್ಲ. ಈ ಶೋನಲ್ಲಿ ವಯಸ್ಸಿನ ಮಿತಿಯೇ ಇಲ್ಲದೆ ಭಾಗವಹಿಸುವುದಕ್ಕೆ ಅವಕಾಶವಿದೆ. ಅಂದರೆ, ಆರು ವರ್ಷದಿಂದ ಹಿಡಿದು 60 ವರ್ಷದವರೆಗಿನ ಗಾಯಕರು ಈ ಶೋನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬಹುದು.

ಈ ಬಾರಿಯ ರಿಯಾಲಿಟಿ ಶೋನಲ್ಲೂ ಕೂಡ ಆರು ವರ್ಷದಿಂದ 60 ವರ್ಷದವರೆಗೂ ಪ್ರತಿಭೆಗಳು ಭಾಗವಹಿಸಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯನ್ನು ನೀಡಿವೆ. ಈಗ ಫಿನಾಲೆಗೆ ಯಾರು ನೇರವಾಗಿ ಟಿಕೆಟ್ ಪಡೆಯುತ್ತಾರೆ ಅನ್ನೋದು ವೀಕ್ಷಕರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. 13 ಸ್ಪರ್ಧಿಗಳ ಪೈಕಿ ಒಬ್ಬರಿಗೆ ಫಿನಾಲೆ ಟಿಕೆಟ್ ಸಿಗೋದು ಗ್ಯಾರಂಟಿ. ಆದರೆ, ಅವರು ಯಾರು ಅನ್ನೋದೇ ಈಗ ಕುತೂಹಲ.
ಫಿನಾಲೆ ಸನಿಹದಲ್ಲಿ ಇರುವುದರಿಂದ ಸ್ಪರ್ಧಿಗಳ ನಡುವೆ ಪೈಪೋಟಿ ಕಠಿಣವಾಗಿದೆ. 'ಸರಿಗಮಪ ಸೀಸನ್ 21'ರ ಕಾಂಪಿಟೇಷನ್‌ನಲ್ಲಿ ಇರುವ 13 ಸ್ಪರ್ಧಿಗಳು ಯಾರು ಎಂದರೆ, ಬಾಳು ಬೆಳಗುಂದಿ, ಭೂಮಿಕಾ, ದ್ಯಾಮೇಶ, ಕಾರ್ತಿಕ್, ಲಹರಿ, ಮನೋಜ್, ಅಮೋಘ ವರ್ಷ, ರಶ್ಮಿ ಡಿ, ಸುಧೀಕ್ಷಾ, ದೀಪಕ್, ಆಗಮ ಶಾಸ್ತ್ರೀ, ಶಿವಾನಿ, ಮತ್ತು ಆರಾಧ್ಯ ರಾವ್. ಇವರ ನಡುವೆ ಹಣಾಹಣಿ ನಡೆಯುತ್ತಿದೆ. ಇವರಲ್ಲಿ ಇಬ್ಬರು ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ. ಅವರು ಯಾರು ಅನ್ನೋದು ಈ ವೀಕೆಂಡ್‌ನಲ್ಲಿ ಗೊತ್ತಾಗಲಿದೆ.
ಈ ವೀಕೆಂಡ್ ಸಿಕ್ಕಾಪಟ್ಟೆ ಸಂಗೀತ ಮಯವಾಗಿರುತ್ತೆ. ಜೊತೆ ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಮಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಜನಪ್ರಿಯ ಆಂಕರ್ ಅನುಶ್ರೀ ಅತೀ ದೊಡ್ಡ ಹೈಲೈಟ್. ಇವೆಲ್ಲರೂ ಸೇರಿ ಕಿರುತೆರೆ ವೀಕ್ಷಕರ ವೀಕೆಂಡ್ ಅನ್ನು ರಂಗಾಗಿಸುತ್ತಿದ್ದಾರೆ. ಹೀಗಾಗಿ ಕುತೂಹಲದ ಜೊತೆಗೆ ಮಸ್ತ್ ಎಂಟರ್‌ಟೈನ್ಮೆಂಟ್ ಅನ್ನು ಈ ವಾರ ನಿರೀಕ್ಷೆ ಮಾಡಬಹುದು.

ಒಂದ್ಕಡೆ ಸರಿಗಮಪದ ಸ್ಪರ್ಧಿಗಳು ಜೋಷ್‌ನಲ್ಲಿ ಪರ್ಫಾಮ್ ಮಾಡುತ್ತಿದ್ದರೆ, ಇತ್ತ ಆಂಕರ್ ಅನುಶ್ರೀ ಪಂಚಿಂಗ್ ಡೈಲಾಗ್ ಇರುತ್ತವೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಇವರ ಹಾಡು, ಮಾತು ಕಿಕ್ ಕೊಡುತ್ತೆ. ಇಷ್ಟೇ ಅಲ್ಲ, ಇವರೊಂದಿಗೆ ವಿಶೇಷ ಅತಿಥಿಗಳಾಗಿ ಟಿಕೆಟ್ ಟು ಫಿನಾಲೆ ಎಪಿಸೋಡ್‌ಗೆ ಇನ್ನಷ್ಟು ಮೆರುಗು ನೀಡುವುದಕ್ಕೆ ಕನ್ನಡ ಚಿತ್ರರಂಗದ ಅಧ್ಯಕ್ಷ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಅವರು ಬರುತ್ತಿದ್ದಾರೆ. ಈ ಎಪಿಸೋಡ್‌ನಲ್ಲಿ ಶರಣ್ ಅವರ ಕಾಮಿಡಿ, ಅದಿತಿ ಪ್ರಭುದೇವ ಅವರ ಚಾರ್ಮ್ 'ಟಿಕೆಟ್ ಟು ಫಿನಾಲೆ' ಎಪಿಸೋಡ್‌ಗೆ ಮತ್ತಷ್ಟು ರಂಗು ರಂಗಾಸುತ್ತಿದೆ.
13 ಸ್ಪರ್ಧಿಗಳಲ್ಲಿ ಯಾರಿಗೆ ಸಿಗಲಿದೆ ಫಿನಾಲೆಗೆ ಯಾರಿಗೆ ಸಿಗುತ್ತೆ ಟಿಕೆಟ್ ಅನ್ನೋದೇ ಕುತೂಹಲ. 'ಟಿಕೆಟ್ ಟು ಫಿನಾಲೆ' ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7:30 ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.


Click it and Unblock the Notifications











