"15 ಜನ್ರಿಗೆ ಮೋಸ ಮಾಡಿ ಮದ್ವೆ ಆದ್ರೆ ಆಶೀರ್ವಾದ.. ಒಬ್ರನ್ನೇ ಪ್ರೀತಿಸಿದ್ರೆ ಯೋಚನೆ ಮಾಡ್ತಾರೆ" ಸರಿಗಮಪ ಸುಹಾನ ಸೈಯ್ಯದ್

ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದ ಗಾಯಕಿ ಸುಹಾನಾ ಸೈಯ್ಯದ್. ತಮ್ಮ ಗಾಯನದಿಂದಲೇ ಜನರ ಮನ ಗೆದ್ದಿದ್ದರು. ಇವರ ಹಾಡುಗಳಿಗೆ ಜನರು ಭೇಷ್ ಎಂದಿದ್ದರು. ಸರಿಗಮಪದಲ್ಲಿ ಇವರು ಹಾಡಿದ ಹಾಡುಗಳನ್ನು ನೆನಪಿಸಿಕೊಂಡು ಇಂದಿಗೂ ಗುನುಗುವವರು ಇದ್ದಾರೆ. ಕಳೆದ ವರ್ಷ ಸುಹಾನಾ ಸೈಯ್ಯದ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ತಮ್ಮದೇ ಪ್ರಪಂಚ ಕಟ್ಟಿಕೊಂಡಿರೋ ಗಾಯಕಿ ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿಯಾಗಿಯಾಗಿದ್ದಾರೆ.

ಗಾಯಕಿ ಸುಹಾನಾ ಸೈಯ್ಯದ್ ಮದುವೆ ರಾಜ್ಯಾದ್ಯಂತ ಚರ್ಚೆಯಾಗಿತ್ತು. ಅದಕ್ಕೆ ಕಾರಣ ಅವರದ್ದು ಅಂತರ್‌ಧರ್ಮೀಯ ವಿವಾಹ. ಹಿಂದೂ ಯುವಕ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಸುಮಾರು 16 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂತರ್‌ಧರ್ಮೀಯ ವಿವಾಹವಾಗಿದ್ದರಿಂದ ಇಬ್ಬರ ಮದುವೆ ಅಷ್ಟು ಸುಲಭದ್ದಾಗಿರಲಿಲ್ಲ. ಹೀಗಾಗಿ ಒಂದಿಷ್ಟು ಸಮಯ ತೆಗೆದುಕೊಂಡು ಎರಡೂ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Saregamapa Singer Suhana Syed said about love and marriage after her wedding in an interview

ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. 2025, ಅಕ್ಟೋಬರ್ ತಿಂಗಳಲ್ಲಿ ವಿವಾಹವಾಗಿದ್ದ ಈ ಜೋಡಿ ನೆಮ್ಮದಿಯ ಜೀವನ ನಡೆಸಿಕೊಂಡು ಬಂದಿದೆ. ಈಗ ಕೀರ್ತಿ ಇಎನ್‌ಟಿ ಕ್ಲಿನಿಕ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನ ನೀಡಿದ್ದು, ಕೇವಲ ಪ್ರೋಮೊ ಅಷ್ಟೇ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರೀತಿ ಹಾಗೂ ಮದುವೆ ಬಗ್ಗೆ ಸುಹಾನಾ ಸೈಯ್ಯದ್ ಮನಬಿಚ್ಚಿ ಮಾತಾಡಿದ್ದಾರೆ.

ಸರಿಗಮಪ ಶೋನಲ್ಲಿ ಸುಹಾನಾ ಸೈಯ್ಯದ್ ಹಿಂದೂ ದೇವರ ಗೀತೆಗಳನ್ನು ಹಾಡಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಹಿಂದೂ ಭಕ್ತಿ ಗೀತೆಯನ್ನು ಹಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಅದ್ಯಾವುದಕ್ಕೂ ಅಂಜದೆ ಸುಹಾನಾ ತಮ್ಮ ಗಾಯನವನ್ನು ಮುಂದುವರೆಸಿದ್ದರು. ಮುಂದಿನ ಸಂಚಿಕೆಯಲ್ಲಿ 'ನೀನೆ ರಾಮ ನೀನೇ ಶ್ಯಾಮ ನೀನೇ ಅಲ್ಲಾ' ಹಾಡು ಹಾಡಿ ಟೀಕಾಕಾರರಿಗೆ ತಿರುಗೇಟು ನೀಡಿದ್ದರು.

Also Read
ದಾಂಪತ್ಯ ವ್ರತ ಸ್ವೀಕರಿಸಿದ್ದೇವೆ; ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡು ಸುಹಾನ ಸಯ್ಯದ್ ಮಾತು
ದಾಂಪತ್ಯ ವ್ರತ ಸ್ವೀಕರಿಸಿದ್ದೇವೆ; ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡು ಸುಹಾನ ಸಯ್ಯದ್ ಮಾತು

ಕೀರ್ತಿ ಇಎನ್‌ಟಿ ಕ್ಲಿನಿಕ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ಪ್ರೋಮೋದಲ್ಲಿ ಮದುವೆ ನಂತರದ ಬದುಕಿನ ಬಗ್ಗೆ ಮಾತಾಡಿದ್ದಾರೆ. ವಿವಾಹದ ಬಳಿಕ ಇಬ್ಬರ ಲೈಫ್‌ ಸ್ಟೈಲ್‌ ಅನ್ನು ತಮಾಷೆಯಾಗಿ ವೀಕ್ಷಕರ ಮುಂದಿಟ್ಟಿದ್ದಾರೆ. ಆ ತುಣುಕುಗಳನ್ನು ಹಾಕಲಾಗಿದೆ. ಇಷ್ಟೇ ಅಲ್ಲದೆ ಇಬ್ಬರ ಮನೆಯವರು ಈ ಜೋಡಿಗೆ ಹೇಗೆ ಬೆಂಬಲ ನೀಡುತ್ತಿದೆ? ಮದುವೆ ಬಳಿಕ ಜೀವನ ಹೇಗಿದೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಆದರೆ, ಅದೆಲ್ಲಕ್ಕಿಂತ ಮುಖ್ಯವಾಗಿ ಹಲವು ಮಂದಿಗೆ ಮೋಸ ಮಾಡಿ ಕೊನೆಗೆ ತಮ್ಮದೇ ಸಮುದಾಯದವರನ್ನು ವಿವಾಹವಾದರನ್ನು ಹೇಗೆ ನೋಡುತ್ತಾರೆ. ಒಬ್ಬರನ್ನೇ ಪ್ರೀತಿಸಿ ಮದುವೆ ಆದವರನ್ನು ಹೇಗೆ ನೋಡುತ್ತಾರೆ? ಅನ್ನೋ ಬಗ್ಗೆ ಆಡಿದ ಮಾತುಗಳ ತುಣುಕುಗಳನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ.

Saregamapa Singer Suhana Syed said about love and marriage after her wedding in an interview

"ಒಂದು ಹುಡುಗ ಅಥವಾ ಒಂದು ಹುಡುಗಿ 10-15 ಜನರಿಗೆ ಮೋಸ ಮಾಡಿ ಫ್ಯಾಮಿಲಿ ನೋಡಿರುವ 16ನೇಯವರನ್ನು ತಮ್ಮದೇ ಸಮುದಾಯದಲ್ಲಿ ಮದುವೆ ಆದರೆ, ಮುಂದೆ ನಿಂತು ಹಿಂದೆ ಮಾಡಿದ ಪಾಪಗಳನ್ನೆಲ್ಲ ಮರೆತು ಆಶೀರ್ವಾದ ಮಾಡುತ್ತಾರೆ. ಒಬ್ಬರನ್ನೇ ನ್ಯಾಯವಾಗಿ ಪ್ರೀತಿಸಿದ್ದೀವಿ. ನಾವು ಬರೀ ಪ್ರೀತಿಯನ್ನು ಮಾತ್ರ ನೋಡುತ್ತಿದ್ದೇವೆ ಅಂದರೆ, ಬರುವುದಕ್ಕೆ ಯೋಚನೆ ಮಾಡುತ್ತಾರೆ." ಎಂದು ಗಾಯಕಿ ಸುಹಾನಾ ಸೈಯ್ಯದ್ ಹೇಳಿದ್ದಾರೆ.

ಹಾಗೇ ಈ ಪ್ರೋಮೊದ ಕೊನೆಯಲ್ಲಿ "ಇಲ್ಲಿ ತನಕ ಬಂದು, ಇಷ್ಟು ದೂರ ಬಂದು, ಇಷ್ಟು ಚಾಲೆಂಜ್‌ಗಳನ್ನು ಫೇಸ್ ಮಾಡಿದ್ದು, ಸೋಲು ಒಪ್ಪಿಕೊಳ್ಳುವುದಕ್ಕಾ?" ಎಂಬ ಪ್ರಶ್ನೆಯೊಂದಿಗೆ ಪ್ರೋಮೋ ಅಂತ್ಯವಾಗುತ್ತೆ. ಇದು ಅವರ ಪ್ರೀತಿಯ ದಿನಗಳನ್ನು ನೆನೆದು ಹೇಳಿರಬಹುದು. ಅದನ್ನು ತಿಳಿದುಕೊಳ್ಳುವುದಕ್ಕೆ ಸಂದರ್ಶನ ರಿಲೀಸ್ ಆಗುವವರೆಗೂ ಕಾಯಲೇಬೇಕಿದೆ.

More from Filmibeat

English summary
Saregamapa Singer Suhana Syed said about love and marriage after her wedding in an interview.
Read more about: saregamapa wedding zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X