ಭಾವಿ ಪತಿ ವೈಷ್ಣವಿ ಗೌಡ ಜೊತೆ ಡಿನ್ನರ್ ಡೇಟ್; ನೆಟ್ಟಿಗರಿಂದ ವರನಿಗೊಂದು ಸಲಹೆ
ಕನ್ನಡ ಕಿರುತೆರೆಯ ಸ್ಟಾರ್ ನಟಿ ವೈಷ್ಣವಿ ಗೌಡ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ಈ ಸುದ್ದಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಫ್ಯಾನ್ಸ್ ಥ್ರಿಲ್ ಆಗಿದ್ದರು.
ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ವೈಷ್ಣವಿ ಗೌಡ ಬ್ಯುಸಿಯಾಗಿದ್ದಾರೆ. ಆದರೆ, ನಿಶ್ವಿತಾರ್ಥದ ಬಳಿಕ ತಮ್ಮ ಭಾವಿ ಪತಿಗೂ ಸಮಯವನ್ನು ಮೀಸಲಿಡುತ್ತಿದ್ದಾರೆ. ಇನ್ನು ವೈಷ್ಣವಿ ಗೌಡ ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಅನುಕೂಲ್ ಮಿಶ್ರಾ ಎಂಬುವವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕಿರುತೆರೆ ವೀಕ್ಷಕರು ಹಾಗೂ ಅವರ ಅಭಿಮಾನಿಗಳಿಂದ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ನಿಶ್ಚಿತಾರ್ಥದ ಬಳಿಕ ವೈಷ್ಣವಿ ಗೌಡ ತಮ್ಮ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಈಗ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಬಳಿ ನಟಿ ತಮ್ಮ ಭಾವಿ ಪತಿಯೊಂದುಗೆ ರೊಮ್ಯಾಂಟಿಂಗ್ ಡಿನ್ನರ್ ಡೇಟ್‌ಗೆ ಹೋಗಿದ್ದಾರೆ. ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಹೌದು, ನಿಶ್ಚಿತಾರ್ಥದ ಬಳಿಕ ನಟಿ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಇಬ್ಬರೂ ಹಂಚಿಕೊಂಡಿರುವ ಮೊದಲ ಫೋಟೋ ಇದು. ಈ ಫೋಟೋವನ್ನು ಇಬ್ಬರೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐಷಾರಾಮಿ ಹೋಟೆಲ್ ಒಂದಕ್ಕೆ ಈ ಜೋಡಿ ಡಿನ್ನರ್‌ಗೆ ಹೋಗಿತ್ತು. ಈ ವೇಳೆ ಅಲ್ಲಿನ ಸ್ವಿಮ್ಮಿಂಗ್ ಪೂಲ್ ಬಳಿಕ ಜೊತೆಯಾಗಿ ನಿಂತು ಫೋಟೋವನ್ನು ತೆಗೆಸಿಕೊಂಡಿದೆ. ಆ ಫೋಟೊಗಳನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಕಮೆಂಟ್‌ಗಳ ಮೇಲೆ ಕಮೆಂಟ್‌ಗಳನ್ನು ಹಾಕುತ್ತಲೇ ಇದ್ದಾರೆ.
ನೆಟ್ಟಿಗರೊಬ್ಬರು ವೈಷ್ಣವಿ ಗೌಡ ಭಾವಿ ಪತಿಗೆ ಕನ್ನಡ ಬರುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು "ಅಕ್ಕ ಮತ್ತು ಬಾವ" ಅಂತ ಒಪ್ಪಿಕೊಂಡಿದ್ದಾರೆ. ಮತ್ತೊಬ್ಬರು " ಇಬ್ಬರದ್ದೂ ಸೂಪರ್ ಜೋಡಿ ಮೇಡಂ" ಎಂದು ಕಮೆಂಟ್ ಮಾಡಿದ್ದಾರೆ. ಮಗದೊಬ್ಬರು " ಎರಡು ಹೃದಯಗಳು ಒಂದಾಗಿ ಬಡಿದುಕೊಳ್ಳುತ್ತಿವೆ" ಎಂದು ಕವಿಯಾಗಿಬಿಟ್ಟಿದ್ದಾರೆ. ಹಾಗಂತ ಇಲ್ಲಿಗೆ ಮುಗಿದಿಲ್ಲ. ಸೂಪರ್ ಜೋಡಿ, ಕ್ಯೂಟ್ ಜೋಡಿ,ನೈಸ್ ಜೋಡಿ ಅಂತೆಲ್ಲ ಕಮೆಂಟ್‌ಗಳನ್ನು ಮಾಡಿದ್ದಾರೆ. ಇದರೊಂದಿಗೆ ವೈಷ್ಣವಿ ಗೌಡ ಭಾವಿ ಪತಿ ಅನುಕೂಲ್ ಮಿಶ್ರಾಗೆ ಒಂದು ಸಲಹೆಯನ್ನೂ ನೀಡಿದ್ದಾರೆ. ನೆಟ್ಟಿಗರೊಬ್ಬರು " ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಲಿ" ಎಂದು ಹೇಳಿದ್ದಾರೆ.
ಇನ್ನು ವೈಷ್ಣವಿ ಗೌಡ ಮದುವೆ ಆಗುತ್ತಿರುವ ಹುಡುಗ ಏರ್‌ಫೋರ್ಸ್‌ನಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ. ಇವರು ಛತ್ತಿಸ್‌ಗಢ ಮೂಲದವರಾಗಿದ್ದು, ಒಂದು ವರ್ಷದಿಂದ ಇಬ್ಬರಿಗೂ ಪರಿಚಯವಿದೆ. ಹಾಗಂತ ಇದು ಲವ್ ಮ್ಯಾರೇಜ್ ಅಲ್ಲ. ವೈಷ್ಣವಿ ಗೌಡ ತಮ್ಮ ಭಾವಿ ಪತಿಯನ್ನು ಪರಿಚಯಿಸುತ್ತಿದ್ದಂತೆ ಅವರ ಅಭಿಮಾನಿಗಳು ಇದು ಲವ್ ಮ್ಯಾರೇಜ್ ಎಂದೇ ಅಂದುಕೊಂಡಿದ್ದರು. ಆದರೆ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎಂದು ವೈಷ್ಣವಿ ಗೌಡ ಪ್ರತಿಕ್ರಿಯೆ ನೀಡಿದ್ದರು.
ಇವರಿಬ್ಬರ ಮದುವೆಯನ್ನು ಪೋಷಕರು ನೋಡಿ ನಿಶ್ಚಯ ಮಾಡಿದ್ದಾರೆ. ಇಬ್ಬರು ಮ್ಯಾಟ್ರಿಮೊನಿ ಸೈಟ್ ಮೂಲಕ ಪರಿಚಯವಾಗಿತ್ತು. ಅನುಕೂಲ್ ಮಿಶ್ರಾ ಹಾಗೂ ವೈಷ್ಣವಿ ಗೌಡ ಮನೆಯವರು ಇಬ್ಬರೂ ಮಾತುಕತೆ ನಡೆಸಿದರು. ಬಳಿಕ ಇಬ್ಬರಿಗೂ ಇಷ್ಟ ಆಗಿತ್ತು. ಆದರೆ, ವೈಷ್ಣವಿ ಗೌಡ ಹಾಗೂ ಅನುಕೂಲ್ ಇಬ್ಬರೂ ಒಂದು ವರ್ಷಗಳ ಕಾಲ ತಮ್ಮನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯವನ್ನು ತೆಗೆದುಕೊಂಡಿದ್ದರು. ಆನಂತರವೇ ವೈಷ್ಣವಿ ಗೌಡ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಶೀಘ್ರದಲ್ಲಿಯೇ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಡೇಟ್ ಅನ್ನು ಅನೌನ್ಸ್ ಮಾಡಲಿದ್ದಾರೆ.


Click it and Unblock the Notifications











