Seetha Rama Serial: ಚೋಟಾ ಫ್ರೆಂಡ್ ನಿಂದ ರಾಮ್ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ : ಇನ್ನೊಂದು ತುತ್ತು ತಿಂದರು ವಾಂತಿ ಗ್ಯಾರಂಟ
ಎಲ್ಲೆಲ್ಲೂ ವರಮಹಾಲಕ್ಷ್ಮೀ ಹಬ್ಬ ಸಡಗರ, ಸಂಭ್ರಮದಿಂದ ಮಾಡಲಾಗುತ್ತಿದೆ. ಇನ್ನು ಸಿಹಿ ಮನೆಯಲ್ಲಿ ಕೇಳಬೇಕಾ..? ಅದರಲ್ಲೂ ಅಜ್ಜಿ, ತಾತನ ಬಳಿ ಹಬ್ಬದ ವಿಶೇಷತೆ ಬೇರೆ ತಿಳಿದು ಕೊಂಡಿದ್ದಾಳೆ. ಬೆಳಗ್ಗೆನೇ ಎದ್ದು, ತಾನೂ ರೆಡಿಯಾಗಿ, ಸೀತಮ್ಮನನ್ನು ರೆಡಿ ಮಾಡಿದ್ದಾಳೆ. ಜೊತೆಗೆ ನನ್ನಮ್ಮನಿಗೆ ದೃಷ್ಟಿಯಾಗಿದೆ ಅಂತ ದೃಷ್ಟಿ ತೆಗೆದಿದ್ದು ತೆಗೆದಿದ್ದೆ. ಅಜ್ಜ, ಅಜ್ಜಿ ಜೊತೆ ಸೇರಿ ಅದ್ಭುತ ಅಗಿ ಹಬ್ಬ ಆಚರಿಸಿದ್ದಾರೆ.
ಸಿಹಿಗೆ ಸೀತಮ್ಮ ಎಷ್ಟೇ ಚೆಂದವಾಗಿ ನೋಡಿ ಕೊಂಡರು ತಂದೆಯ ನೆನಪುಗಳು ಕಾಡುತ್ತಿವೆ. ಅಪ್ಪ ಇದ್ದಿದ್ರೆ, ಸೀತಮ್ಮನಿಗೆ ಇಷ್ಟೊಂದು ಕಷ್ಟ ಇರ್ತಾ ಇರ್ಲಿಲ್ಲ ಅಂತ ಕೂಡ ಸಿಹಿ ಯೋಚನೆ ಮಾಡುತ್ತಾಳೆ. ಅದಕ್ಕೆ ಹಬ್ಬ ಮಾಡಿದ್ರೆ ಅಪ್ಪ ವಾಪಸ್ ಬರಬಹುದು ಎಂದೇ ನಂಬಿದ್ದಾಳೆ. ಅದಕ್ಕೆ ಅಮ್ಮನಿಗೆ ಬಲವಂತ ಮಾಡ್ತಿದ್ದಾಳೆ.

ರಾಮ್ ಮನೆಯಲ್ಲಿ ಸಡಗರದ ಹಬ್ಬ
ರಾಮ್ ಕುಟುಂಬದಲ್ಲಿ ವರಮಹಾಲಕ್ಷ್ಮೀ ಹಬ್ಬ ಗ್ರ್ಯಾಂಡ್ ಆಗಿ ನಡೆಯುತ್ತಾ ಇದೆ. ಲಕ್ಷ್ಮೀಯನ್ನು ಕೂರಿಸಿ, ಪೂಜೆ, ಪುನಸ್ಕಾರ ನೆರವೇರಿಸಿದ್ದಾರೆ. ಭಾರ್ಗವಿ ಹಬ್ಬದ ದಿನವೂ ನಾಟಕ ಶುರು ಮಾಡಿದ್ದಾಳೆ. ರಾಮ್‌ಗೆ ಮದುವೆ ಮಾಡಿಸುವ ಯಾವ ಯೋಚನೆಯೂ ಇಲ್ಲ. ಮೊದಲನೆಯದಾಗಿ ರಾಮ್, ಮನೆಯಲ್ಲಿರುವುದೇ ಇಷ್ಟವಿಲ್ಲ. ಹೇಗಾದ್ರೂ ಮಾಡಿ ಮಲೇಶಿಯಾಗೆ ವಾಪಸ್ ಕಳುಹಿಸುವ ಪ್ಲ್ಯಾನ್ ಮಾಡಿರುವ ಭಾರ್ಗವಿ, ಇದೀಗ ಲಕ್ಷ್ಮೀ ಪೂಜೆಯಲ್ಲಿ ಮಗನ ಮದುವೆ ಬಗ್ಗೆ ಮಾತನಾಡಿದ್ದಾಳೆ.
ಮನೆಯವರ ಜೊತೆ ಸೇರಿ ಭರ್ಜರಿ ಊಟ
ಹಬ್ಬದೂಟ ಅಂದ್ರೆ ಸುಮ್ನೇನಾ. ವೆರೈಟಿ ವೆರೈಟಿ ಊಟ ಇದ್ದೆ ಇರುತ್ತದೆ. ರಾಮ್‌ಗಂತೂ ಪೂಜೆ ಮಾಡುತ್ತಿರುವಾಗಲೇ ಹಬ್ಬದೂಟದ ಸುವಾಸನೆ ಮೂಗಿಗೆ ಬಡಿದಿದೆ. ಬೇಗ ಬೇಗ ಪೂಜೆ ಮುಗಿಸಿ, ಊಟ ಮಾಡೋಣ್ವಾ ಅಂತ ರಾಮನೇ ಕೇಳಿದ್ದಾನೆ. ಆಗ ಮನೆಯವರೆಲ್ಲಾ ಒಟ್ಟಾಗಿ ಕೂತು ಊಟ ಮಾಡೋಣಾ ಅಂತ ಹೇಳಿ, ಮನೆಯವರೆಲ್ಲಾ ಸೇರಿ, ರಾಮ್‌ಗೆ ಕೈ ತುತ್ತಿನ ಊಟ ತಿನ್ನಿಸಿದ್ದಾರೆ. ಮನೆಯವರೆಲ್ಲ ಸೇರಿ, ರಾಮ ಹೊಟ್ಟೆ ಫುಲ್ ಮಾಡಿದ್ದಾರೆ.

ಸಿಹಿ ಮನೆಯಲ್ಲೂ ಹಬ್ಬದ ಸಂಭ್ರಮ
ರಾಮ್ ದೊಡ್ಮನೆ ಹುಡುಗ ಅನ್ನೋದು ಗೊತ್ತಿಲ್ಲ. ಆದ್ರೆ ಸಿಹಿಗೆ ಬಹಳ ಇಷ್ಟವಾದ ಫ್ರೆಂಡ್. ತಮ್ಮ ಮನೆಯಲ್ಲಿ ಏನಾದರೂ ಸ್ಪೆಷಲ್ ಅಡುಗೆ ಮಾಡಿದ್ದಾರೆ ಅಂದ್ರೆ ಅಲ್ಲಿ ರಾಮ್ ಇರಲೇಬೇಕು. ರಾಮ್ ಇಲ್ಲದೆ ಆ ವಿಶೇಷ ದಿನ ಮುಗಿಯುವುದೇ ಇಲ್ಲ. ಸಿಹಿ ಮನೆಯಲ್ಲಿ ಹಬ್ಬ ಬೇರೆ ಮಾಡಿದ್ದಾರೆ. ಹಬ್ಬದೂಟ ಬೇರೆ. ಹಬ್ಬದೂಟ ಎಂದಾಕ್ಷಣ ಸಿಹಿಗೆ ನೆನಪಾಗಿದ್ದು ತನ್ನ ಫ್ರೆಂಡ್. ಕಾಲ್ ಮಾಡಿ ಆರ್ಡರ್ ಮಾಡಿಯೇ ಬಿಟ್ಲು.
ಸಿಹಿಯ ಕಾಳಜಿ ನೋಡಿ
ರಾಮ್‌ಗೆ ಮೊದಲೇ ಮನೆಯವರ ಪ್ರೀತಿಯೇ ಹೆಚ್ಚಾಗಿತ್ತು. ಎಲ್ಲರ ಕೈತುತ್ತು ಹೊಟ್ಟೆ ತುಂಬಿಸಿತ್ತು. ಸಿಹಿ ಬೇರೆ ಬರಲಿಲ್ಲ ಅಂದ್ರೆ ಊಟ ಮಾಡಲ್ಲ ಅಂತಿದ್ದಾಳೆ. ರಾಮ್ ಹೊರಟೆ ಬಿಟ್ಟ. ಆದರೆ, ತೇಗು ಮಾತ್ರ ಹಿಂದೆ ಹಿಂದೆನೇ ಬರ್ತಾ ಇತ್ತು. ತನ್ನ ಲಿಟ್ಲ್ ಫ್ರೆಂಡ್ ಜೊತೆಗೆ ಊಟಕ್ಕೆ ಕುಳಿತ. ಆದರೆ, ಊಟಕ್ಕೂ ಮುನ್ನವೇ ತೇಗು ಬಂತು. ಊಟ ಬಡಿಸಿದ ಮೇಲೂ ಆ ತೇಗು ಬರುತ್ತಲೆ ಇತ್ತು. ಪಾಪ ಸಿಹಿಗೆ ಫ್ರೆಂಡ್ ಬಗ್ಗೆ ಅದೆಷ್ಟು ಕಾಳಜಿ ಅಂತೀರಾ. ಗ್ಯಾಸ್ಟ್ರಿಕ್ ಅಂದ್ಕೊಂಡು, ನೀರು ಕುಡಿಸಿ, ನೆತ್ತಿಯನ್ನು ತಟ್ಟಿದ್ದಾಳೆ.


Click it and Unblock the Notifications











