Karna Serial: 'ಕರ್ಣ' ಧಾರಾವಾಹಿಯಿಂದ ನಾಗಾಭರಣ ಹೊರಬಿದ್ದಿದ್ದೇಕೆ? ಹಿರಿಯ ನಟ ಅಭಿಜಿತ್ ಎಂಟ್ರಿ ಕೊಟ್ಟಿದ್ದೇಗೆ?
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರಮುಖ ಪಾತ್ರಗಳಲ್ಲಿ ಒಂದಾದ ರಮೇಶನ ಪಾತ್ರಧಾರಿ ಬದಲಾವಣೆಯಾಗಿದೆ. ಈ ರಮೇಶನ ಮಾತ್ರದಲ್ಲಿ ಟಿ.ಎಸ್ ನಾಗಾಭರಣ ನಟಿಸುತ್ತಿದ್ದರು. ಕಂಪ್ಲೀಟ್ ನೆಗೆಟಿವ್ ಶೇಡ್ ಇರುವ ಈ ಪಾತ್ರ 'ಕರ್ಣ' ಸೀರಿಯಲ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಆದ್ರೀಗ ಟಿ.ಎಸ್ ನಾಗಾಭರಣ ಈ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.
ಕೆಲವು ದಿನಗಳಿಂದ 'ಕರ್ಣ' ಧಾರಾವಾಹಿಯಿಂದ ಟಿ.ಎಸ್. ನಾಗಾಭರಣ ಹೊರ ನಡೆದಿದ್ದಾರೆಂಬ ಸುದ್ಧಿ ಓಡಾಡುತ್ತಲೇ ಇತ್ತು. ಆದ್ರೀಗ ಅದು ನಿಜವಾಗಿದೆ. ಜೀ ಕನ್ನಡ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ನಾಗಾಭರಣ ಬದಲಿಗೆ ಕನ್ನಡದ ಮತ್ತೊಬ್ಬ ಹಿರಿಯ ನಟ ಅಭಿಜಿತ್ ಎಂಟ್ರಿಯಾಗಿದೆ. ಮತ್ತಷ್ಟು ಪವರ್‌ಫುಲ್ ಲುಕ್ ಹಾಗೂ ಮ್ಯಾನರಿಸಂನಲ್ಲಿ ಈ ಪಾತ್ರವನ್ನು ಇಂಟ್ರುಡ್ಯೂಸ್ ಮಾಡಲಾಗುತ್ತಿದೆ.

ಅಷ್ಟಕ್ಕೂ ಧಾರಾವಾಹಿಗಳಿಂದ ಪಾತ್ರಧಾರಿಗಳು ಹೊರ ಹೋಗುವುದು ಹೊಸದೇನಲ್ಲ. ಇಲ್ಲವೇ ಟಿವಿ ವಾಹಿನಿ ಅಥವಾ ಧಾರಾವಾಹಿಯ ನಿರ್ಮಾಪಕರೇ ಪಾತ್ರವನ್ನು ರಿಪ್ಲೇಸ್ ಮಾಡುತ್ತಾರೆ. ಹೀಗಾಗಿ 'ಕರ್ಣ' ಧಾರಾವಾಹಿ ಆರಂಭ ಆದ ದಿನದಿಂದಲೂ ಇದ್ದ ಟಿ.ಎಸ್.ನಾಗಾಭರಣ ಹೊರ ನಡೆದಿದ್ದಾರೆ. ಪ್ರಮುಖ ಪಾತ್ರದಲ್ಲೇ ನಟಿಸುತ್ತಿದ್ದವರು ಅದ್ಯಾಕೆ ಹೊರ ನಡೆದರು? ತೆರೆ ಹಿಂದಿನ ಅಸಲಿ ಕಥೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
ನಾಗಾಭರಣ ಪಾತ್ರಕ್ಕೆ ಬಂದ ಅಭಿಜಿತ್ ಎಂಟ್ರಿ
'ಕರ್ಣ' ಧಾರಾವಾಹಿ ಆರಂಭ ಆದಲ್ಲಿಂದಲೂ ಟಿ.ಎಸ್. ನಾಗಾಭರಣ ಜೊತೆಗೆ ಇದ್ದವರು. ಕಿರುತೆರೆಯಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಹೀಗಾಗಿ ರಮೇಶ್ ಪಾತ್ರ ಕಿರುತೆರೆ ವೀಕ್ಷಕರ ಮೇಲೆ ತುಂಬಾನೇ ದೊಡ್ಡ ಪರಿಣಾಮವನ್ನೇ ಬೀರಿತ್ತು. ತಮ್ಮ ಸುತ್ತಮುತ್ತ ಇರುವ ಇಂತಹದ್ದೊಂದು ಪಾತ್ರವನ್ನು ಕನೆಕ್ಟ್ ಮಾಡಿಕೊಂಡಿದ್ದರು. ಈಗ ಆ ಧಾರಾವಾಹಿಯಿಂದ ನಾಗಾಭರಣ ಹೊರಬಂದಿದ್ದು, ಹಿರಿಯ ನಟ ಅಭಿಜಿತ್ ಎಂಟ್ರಿ ಕೊಟ್ಟಿದ್ದಾರೆ.
ರಮೇಶನ ಪಾತ್ರ ಇನ್ನೂ ಪವರ್‌ಫುಲ್
ರಮೇಶನ ಪಾತ್ರ ಕಿರುತೆರೆಯ ವೀಕ್ಷಕರು ಇಷ್ಟ ಪಟ್ಟಿದ್ದರು. ಆದರೆ, ನಾಗಾಭರಣ ಕಾರಣಾಂತರದಿಂದ ಈ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಹೀಗಾಗಿ ಆ ಜಾಗಕ್ಕೆ ಅಭಿಜಿತ್ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ರಮೇಶನ ಪಾತ್ರ ಮತ್ತಷ್ಟು ಪವರ್‌ಫುಲ್ ಆಗಿದೆ. ಹೀಗಾಗಿ ರಮೇಶ್ ಹಾಗೂ ಕರ್ಣನ ಮಧ್ಯೆ ಇನ್ನಷ್ಟು ಜಟಾಪಟಿ ನಡೆಯುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ರೋಚಕ ಸನ್ನಿವೇಶಗಳು ನೋಡುವ ಅವಕಾಶ ಸಿಗಲಿದೆ.

ಸೀರಿಯಲ್‌ನಲ್ಲಿ ಈಗೇನಾಗ್ತಿದೆ?
ಸದ್ಯ ಧಾರಾವಾಹಿಯಲ್ಲಿ ರಮೇಶ ಹಾಗೂ ತಾರಾ ಕುತಂತ್ರ ಮಾಡಿದ್ದಾರೆ. ಇವರಿಬ್ಬರಿಂದ 'ಕರ್ಣ' ಜೈಲು ಸೇರುವಂತಾಗಿತ್ತು. ಕೊನೆಗೂ ಕರ್ಣ ಜೈಲಿನಿಂದ ಹೊರ ಬಂದಿದ್ದಾನೆ. ತನ್ನ ಮೇಲಿನ ದ್ವೇಷಕ್ಕಾಗಿ ಆಸ್ಪತ್ರೆಯ ಹೆಸರನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ. ಇಲ್ಲಿ ಕುತಂತ್ರ ನಡೆಸಿದ್ದು ಯಾರು? ಎಂಬುವುದನ್ನು ಪತ್ತೆ ಮಾಡಿಯೇ ಮಾಡುತ್ತೇನೆಂದು ಕರ್ಣ ಶಪಥ ಮಾಡಿದ್ದಾನೆ. ಹೀಗಾಗಿ ಸೀರಿಯಲ್ ಮುಂದಿನ ದಿನಗಳಲ್ಲಿ ರೋಚಕ ಘಟ್ಟ ತಲುಪುವುದು ಗ್ಯಾರಂಟಿ.
ಅಭಿಜಿತ್ ಎಂಟ್ರಿಯಿಂದ ಕರ್ಣನಿಗೆ ಪವರ್
'ಕರ್ಣ' ಧಾರಾವಾಹಿಗೆ ಅಭಿಜಿತ್ ಎಂಟ್ರಿಯಿಂದ ಮತ್ತಷ್ಟು ಸ್ಟಾರ್ ಪವರ್ ಬಂದಂತೆ ಆಗಿದೆ. ಸದ್ಯ ಅನ್ನಪೂರ್ಣ ಆಸ್ಪತ್ರೆ ಮುಂದೆಯೇ ಅಜ್ಜಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಕರ್ಣ ಜೈಲಿನಿಂದ ಹೊರ ಬರುತ್ತಿದ್ದಂತೆ ಆಸ್ಪತ್ರೆಗೆ ಬೀಗ ಹಾಕುತ್ತಿದ್ದಂತೆ ರಮೇಶ್ ನೊಂದುಕೊಂಡಿದ್ದಾನೆ ಎಂದು ಅಜ್ಜಿ ಬೇಸರ ಹೊರ ಹಾಕುತ್ತಾಳೆ. ರಮೇಶ ನೊಂದುಕೊಂಡಿದ್ದಾನೆ ಎಂದುಕೊಂಡಿದ್ದರೆ, ನಿತ್ಯಾ, ನಿಧಿ ಮತ್ತು ಕರ್ಣನ ಫೋಟೋಗೆ ಪೂಜೆ ಸಲ್ಲಿಸಿ ಪಿಂಡ ಬಿಟ್ಟಿದ್ದಾನೆ. ಕರ್ಣ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ನಾನು ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದು, ಕಿರುತೆರೆ ವೀಕ್ಷಕರಿಗೆ ಕಿಕ್ ಸಿಗೋದು ಗ್ಯಾರಂಟಿ.


Click it and Unblock the Notifications











