Mahalakshmi: 'ಸ್ವಾಭಿಮಾನ'ದ ನಾಯಕಿ ಮಹಾಲಕ್ಷ್ಮಿಯ ಮೊದಲ ಧಾರಾವಾಹಿ ಇದೇನೆ.. ಇಲ್ಲಿದೆ ಡಿಟೈಲ್ಸ್!

80 ದಶಕದ ಟಾಪ್ ನಟಿಯರ ಪೈಕಿ ಮಹಾಲಕ್ಷ್ಮಿ ಕೂಡ ಒಬ್ಬರು. ಅಂಬಿಕಾ, ಗೀತಾ,ಮಾಧವಿ ಇವರ ಕಾಲಘಟ್ಟದಲ್ಲಿ ಬಂದು ಜನಪ್ರಿಯರಾದ ನಟಿಯೀಕೆ. ಇಂದಿಗೂ 'ಬಡ್ಡಿ ಬಂಗಾರಮ್ಮ', 'ಸ್ವಾಭಿಮಾನ', 'ಮದುವೆ ಮಾಡು ತಮಾಷೆ ನೋಡು' ಅಂತಹ ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದವರೇ ಈ ಮಹಾಲಕ್ಷ್ಮಿ.

ಸುಮಾರು 30 ವರ್ಷಗಳಿಂದ ನಟನೆಯಿಂದ ಹಿಂದೆ ಉಳಿದಿದ್ದ ಮಹಾಲಕ್ಷ್ಮಿ ಇದೇ ಮೊದಲ ಬಾರಿಗೆ ಕಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಅಂತ ಹೇಳಿದ್ದೆವು. ಕೊನೆಗೂ ಆ ಧಾರಾವಾಹಿ ಯಾವುದು? ಯಾವ ಚಾನೆಲ್‌ನಲ್ಲಿ ಪ್ರಸಾರ ಆಗುತ್ತೆ ಅನ್ನೋದನ್ನು ರಿವೀಲ್ ಆಗಿದೆ.

Senior actress Mahalakshmi first Kannada Serial Kaveri Kannada Medium

ಮೂಲ ತಮಿಳುನಾಡು ಆಗಿದ್ದರೂ, ಕನ್ನಡದಲ್ಲೇ ಹೆಚ್ಚು ಯಶಸ್ಸು ಸಿಕ್ಕಿತ್ತು. ಈಗ ಕಿರುತೆರೆಯಲ್ಲೂ ಅದೇ ಯಶಸ್ಸಿನ ಹುಡುಕಾಟದೊಂದಿಗೆ ಬಂದಿದ್ಧಾರೆ. ಹಾಗಿದ್ದರೆ, ಹಿರಿಯ ನಟಿ ಮಹಾಲಕ್ಷ್ಮಿ ನಟಿಸುತ್ತಿರುವ ಮೊದಲ ಧಾರಾವಾಹಿ ಯಾವುದು? ಯಾವ ಚಾನೆಲ್‌ನಲ್ಲಿ ಪ್ರಸಾರ ಆಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಹಿರಿಯ ನಟಿ ಮಹಾಲಕ್ಷ್ಮಿ ಕಿರುತೆರೆಗೆ ಎಂಟ್ರಿ

ನಟಿ ಮಹಾಲಕ್ಷ್ಮಿ ಬಗ್ಗೆ ನೂರೆಂಟು ಕಥೆಗಳು ಹುಟ್ಟಿಕೊಂಡಿದ್ದವು. ಆಧ್ಯಾತ್ಮದ ಕಡೆಗೆ ವಾಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಇಂತಹದ್ದೇ ಒಂದಿಷ್ಟು ಸುದ್ದಿ ಹರಿದಾಡಿತ್ತು. ಮಹಾಲಕ್ಷ್ಮಿ ಕೂಡ ಸುಮಾರು 30 ವರ್ಷಗಳ ಕಾಲ ಬಣ್ಣದ ಪ್ರಪಂಚದಿಂದಲೇ ದೂರ ಉಳಿದಿದ್ದರು. ಎರಡು ವರ್ಷಗಳ ಹಿಂದಷ್ಟೇ ಕಮ್‌ ಬ್ಯಾಕ್ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಧಾರಾವಾಹಿಯೇ 'ಕಾವೇರಿ ಕನ್ನಡ ಮೀಡಿಯಂ'.

'ಕಾವೇರಿ ಕನ್ನಡ ಮೀಡಿಯಂ'ನಲ್ಲಿ ಮಹಾಲಕ್ಷ್ಮಿ

ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ ಪ್ರಸಾರ ಆಗುತ್ತಿದೆ. ಅದುವೇ 'ಕಾವೇರಿ ಕನ್ನಡ ಮೀಡಿಯಂ'. ಈ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಇಡೀ ಮನೆಯ ಮುಖ್ಯಸ್ಥೆ ಅಜ್ಜಿಯ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಇವರದ್ದು ಮೋಸ್ಟ್ ಪವರ್‌ಫುಲ್ ಪಾತ್ರ. ಎಲ್ಲರನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಪಾತ್ರವಿದೆ. ಹಾಗಂತ ಕೆಟ್ಟ ಅಜ್ಜಿಯಲ್ಲ. ಒಳ್ಳೆಯವರೇ, ಆದರೆ, ಶಿಸ್ತಿನ ಅಜ್ಜಿ. ಕಾವೇರಿಗೆ ಸದಾ ಬೆಂಬಲವಾಗಿ ನಿಲ್ಲುವ ಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Senior actress Mahalakshmi first Kannada Serial Kaveri Kannada Medium

ಎಷ್ಟು ಸಂಚಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ?

'ಕಾವೇರಿ ಕನ್ನಡ ಮೀಡಿಯಂ' ಮೊದಲ ಎಪಿಸೋಡ್‌ನಲ್ಲಿ ಮಹಾಲಕ್ಷ್ಮಿ ಇರೋದಿಲ್ಲ. ಎರಡನೇ ಎಪಿಸೋಡ್‌ನಿಂದ ಕಾಣಿಸಿಕೊಳ್ಳುತ್ತಾರೆ. ಇವರದ್ದು ಒಂದೆರಡು ಎಪಿಸೋಡ್‌ಗೆ ಬಂದು ಹೋಗುವ ಪಾತ್ರವಲ್ಲ. ಧಾರಾವಾಹಿಯ ಉದ್ದಕ್ಕೂ ಮಹಾಲಕ್ಷ್ಮಿ ಇರುತ್ತಾರೆ. ಹೀಗಾಗಿ ಯಾರು ಇವರನ್ನು ಮಿಸ್ ಮಾಡಿಕೊಂಡಿದ್ದರೋ ಅವರು ಈ ಧಾರಾವಾಹಿ ಮೂಲಕ ಮತ್ತೆ ಕಣ್ತುಂಬಿಕೊಳ್ಳಬಹುದು.

ಎಂದಿನಿಂದ ಧಾರಾವಾಹಿ ಶುರು

'ಕಾವೇರಿ ಕನ್ನಡ ಮೀಡಿಯಂ' ಹೆಸರೇ ಹೇಳೋ ಹಾಗೇ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳ ಕಹಾನಿ. ವೃತ್ತಿಯಲ್ಲಿ ಶಿಕ್ಷಕಿಯಾಗಿರೋ ಕಾವೇರಿ ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ, ಅದರ ಅಭಿವೃದ್ದಿಗೆ ಹೊರಡುವ ಕಾವೇರಿ ಕಥೆಯಿದು. ಕಾವೇರಿ ಪಾತ್ರದಲ್ಲಿ ಪ್ರಿಯ ಜೆ ಆಚಾರ್ ನಟಿಸುತ್ತಿದ್ದಾರೆ. ನಾಯಕನಾಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. ವರ್ಷಗಳ ಬಳಿಕ ನಟನೆಯ ಮೂಲಕ ಮಹಾಲಕ್ಷ್ಮಿಯವರನ್ನು ಕನ್ನಡ ಕಿರುತೆರೆಗೆ ಸ್ಟಾರ್ ಸುವರ್ಣ ವಾಹಿನಿ ಪರಿಚಯಿಸುತ್ತಿದೆ. 'ಕಾವೇರಿ ಕನ್ನಡ ಮೀಡಿಯಂ' ಇದೇ ಆಗಸ್ಟ್ 28ರಿಂದ ರಾತ್ರಿ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ.

More from Filmibeat

English summary
Senior actress Mahalakshmi first Kannada Serial Kaveri Kannada Medium
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X