ದರ್ಶನ್ ಅವರನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡ ನಟಿ ಕಾವ್ಯ ಗೌಡ
ಕಿರುತೆರೆ ಲೋಕದಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ನಟಿ ಕಾವ್ಯ ಗೌಡ. ಸಾಕಷ್ಟು ಸಿರಿಯಲ್‌ಗಳಲ್ಲಿ ನಟಿಸಿ, ಸಿನಿಮಾಗಳಲ್ಲೂ ಕಾಣಿಸಿಕೊಂಡು ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೇ ತನ್ನ ನಟನೆ, ಸೌಂದರ್ಯ, ವಿಭಿನ್ನ ಬಗೆಯ ಕಾಸ್ಟ್ಯೂಮ್‌ಗಳನ್ನು ತೊಡುವ ಮೂಲಕವೇ ಹೆಚ್ಚು ಗಮನ ಸೆಳೆದಿದ್ದ ಈ ನಟಿ ಸಧ್ಯ ಆಭರಣ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಕಾವ್ಯ ಗೌಡ ಡಿಸೆಂಬರ್ 2ಕ್ಕೆ ಸೋಮಶೇಖರ್ ಎಂಬ ಉದ್ಯಮಿಯ ಕೈ ಹಿಡಿದ್ದಾರೆ. ಬಹಳ ಅದ್ಧೂರಿಯಾಗಿ ಮದುವೆ ಆದ ಈ ಜೊಡಿ ಮದುವೆಗೆ ಸಾಕಷ್ಟು ಸೆಲೆಬ್ರೆಟಿಗಳು ಕೂಡ ಸಾಕ್ಷಿಯಾಗಿದ್ದರು. ಮದುವೆ ನಂತರ ಸಾಕಷ್ಟು ಟ್ರಿಪ್‌ಗಳನ್ನು ಪ್ಲಾನ್ ಮಾಡುತ್ತಿರುವ ಈ ಜೋಡಿ ಇತ್ತೀಚೆಗೆ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಅಲ್ಲಿ ಸ್ಪೆಷಲ್ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ.
ಕನ್ನಡದ ಖ್ಯಾತ ಕಿರುತೆರೆ ನಟಿ ಕಾವ್ಯ ಗೌಡ ಅವರು ಸದ್ಯ 'ರಜೆಯ ಮೂಡ್'ನಲ್ಲಿದ್ದಾರೆ. ಹೌದು ಕಾವ್ಯ ಅವರು ತಮ್ಮ ಪತಿಯೊಂದಿಗೆ ಪ್ರಸ್ತುತ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಕಾವ್ಯ ಗೌಡ ಅವರು ವಿವಾಹವಾದ ನಂತರ ತಾವು ಭೇಟಿ ನೀಡಿದ ಪ್ರತಿಯೊಂದು ಸ್ಥಳದ ಬಗ್ಗೆಯೂ ಅಭಿಮಾನಿಗಳಿಗಾಗಿ ಅಪ್ ಡೇಟ್ ಮಾಡಿದ್ದಾರೆ. ಈಗ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ ಕಾವ್ಯ ಗೌಡ.
ನಟಿ ಕಾವ್ಯ ಗೌಡ ಅದ್ದೂರಿ ಮೆಹಂದಿ ಕಾರ್ಯಕ್ರಮ: ಮದುವೆ ಸಂಭ್ರಮ ಬಲು ಜೋರು!
ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಕಾವ್ಯ ಗೌಡ ಆತ್ಮೀಯ ಸ್ನೇಹಿತರು. ಹೀಗಾಗಿ ದರ್ಶನ್ ಅವರನ್ನು ಅಣ್ಣ ನಂತೆ ಪ್ರೀತಿಯಿಂದ ಕಾಣುವ ಕಾವ್ಯ ಗೌಡ ಚಿಕ್ಕಮಗಳೂರಿನಲ್ಲಿ ಅಚಾನಕ್ ಆಗಿ ದರ್ಶನ್ ಅವರನ್ನು ಭೇಟಿ ಆಗಿದ್ದಾರೆ. ಅಲ್ಲಿ ಕಳೆದ ಸುಂದರ ಕ್ಷಣವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಕಾವ್ಯ ಗೌಡ ಹಂಚಿಕೊಂಡಿದ್ದಾರೆ. ದರ್ಶನ್ ಜೊತೆ ಕಾವ್ಯ ಗೌಡ ಮತ್ತು ಪತಿ ಸೋಮಶೇಖರ್ ಇಬ್ಬರು ಫೊಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಈ ಫೊಟೋ ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಮೆಂಟ್ ಕೂಡ ಮಾಡುತ್ತಿದ್ದಾರೆ.

ಅಂದಹಾಗೆ ಕಾವ್ಯ ಅವರು ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ ತಮ್ಮ ಕುಟುಂಬ ಸದಸ್ಯರೊಂದಿಗೆ ಇದೇ ಸ್ಥಳಕ್ಕೆ ತೆರಳಿದ್ದರು. ನಿಜ ಹೇಳಬೇಕೆಂದರೆ ಕಾವ್ಯ ಅವರು ಇದು ಆಗಾಗ್ಗೆ ಭೇಟಿ ನೀಡುವ ತನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕಾವ್ಯ ಅವರು ಕಳೆದ ಎರಡು ದಿನಗಳಿಂದ ತಮ್ಮ ರಜೆಯ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಫೋಟೋಗಳನ್ನು ಗಮನಿಸದರೆ ಕಾವ್ಯ ಅವರು ಈ ಸ್ಥಳವನ್ನು ಹೆಚ್ಚು ಇಷ್ಟಪಡುವುದು ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಗಂಡನೊಂದಿಗೆ ಖುಷಿ ಖಷಿಯಾಗಿ ಆತ್ಮೀಯವಾಗಿ ಕಾಲಕಳೆಯುತ್ತಿರುವ ಕಾವ್ಯ ಅವರು, ಪ್ರತಿ ಫೋಟೋಗಳಲ್ಲೂ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಇತ್ತೀಚೆಗೆ ಕಾವ್ಯ ಮತ್ತು ಅವರ ಪತಿ ಸೋಮಶೇಖರ್ ಅವರು ಎರಡನೇ ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇದರ ಪ್ರಯುಕ್ತ ಕಾವ್ಯ ಅವರು ತಮ್ಮ ಪತಿಯೊಂದಿಗೆ ಶಿರಡಿಗೆ ತೆರಳಿದ್ದರು. ಕಾವ್ಯ ಅವರು ತಮ್ಮ ನೆಚ್ಚಿನ ದೇವರು ಸಾಯಿಬಾಬಾರವರ ಆಶೀರ್ವಾದ ಪಡೆಯಲು ಶಿರಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಕಾವ್ಯ ಅವರು 2015 ರಲ್ಲಿ ಪ್ರಸಾರವಾಗುತ್ತಿದ್ದ 'ಶುಭ ವಿವಾಹ' ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿದರು.


Click it and Unblock the Notifications











