ಗೂಗಲ್ ಸೀರೆಯುಟ್ಟು ವೈರಲ್ ಆದ ರಂಜನಿ ರಾಘವನ್: ಸೀರೆ ಮೇಲಿನ ಅಕ್ಷರದ ಮೇಲೆ ಬಿತ್ತು ಕಣ್ಣು..!

ಈ ರೀತಿಯಾದ ಒಂದು ಕ್ಯೂರಿಯಾಸಿಟಿ ಹುಟ್ಟಿಸಿದ್ದೆ ರಂಜನಿ ರಾಘವನ್. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವ ರಂಜನಿ ಬಹು ಬೇಗ ಎಲ್ಲರನ್ನು ಆಕರ್ಷಿಸುತ್ತಾರೆ. ಎಲ್ಲಾ ವರ್ಗದವರಿಗೂ ಅಟ್ರಾಕ್ಟ್ ಮಾಡುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮುಗ್ಧತೆ, ಆ ಕಣ್ಮನ ಸೆಳೆಯುವ ನೋಟ, ಅದೇನೋ ಸಿಂಪ್ಲಿಸಿಟಿ ಈ ಎಲ್ಲಾ ಒಟ್ಟುಗೂಡಿ ರಂಜನಿ ರಾಘವನ್ ಎಂದಾಕ್ಷಣಾ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ. ಆದರೆ ಈಗ ವಿಚಾರ ಬೇರೆಯದ್ದೇ ಆಗಿದೆ. ರಂಜನಿ ಹಾಕಿರುವ ಸೀರೆಯ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

ಸೀರೆಗಳ ವಿಚಾರದಲ್ಲಿ ಆಗಾಗ ವೆರೈಟಿ, ವಿಭಿನ್ನ ಎನಿಸುವ ಸೀರೆಗಳನ್ನು ನೋಡಿಯೇ ಇರುತ್ತೀವಿ. ಸೀರೆ ನೇಯುವವರು ಕೂಡ ಒಂದೇ ರೀತಿಯಾದ ಸೀರೆಯನ್ನೇನು ನೇಯಲ್ಲ. ಯಾಕೆಂದರೆ ಮಹಿಳಾರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಏನೇನೋ ಹೊಸತನವನ್ನು ಸೀರೆಯಲ್ಲಿಯೂ ತರುತ್ತಾರೆ. ಅಂಥ ಹೊಸತನದಲ್ಲಿ ಸೃಷ್ಟಿಯಾಗಿರುವ ಸೀರೆಯಲ್ಲಿ ರಂಜನಿ ಮಿಂಚುತ್ತಿದ್ದಾರೆ.

ಗೂಗಲ್ ಎಂದು ಬರೆದಿರುವ ಸೀರೆ

ಗೂಗಲ್ ಎಂದು ಬರೆದಿರುವ ಸೀರೆ

ಗೂಗಲ್.. ಗೂಗಲ್.. ಗೂಗಲ್.. ಯಾರಿಗೆ ಗೊತ್ತಿಲ್ಲ ಹೇಳಿ. ದಿನ ಬೆಳಗಾದರೆ ಸಾಕು ಗೂಗಲ್ ಜೀವನವೇ ಆಗೋಗಿದೆ. ಮೊಬೈಲ್‌ನಲ್ಲಿ ಸಿಗುವ ಗೂಗಲ್ ಸೀರೆಯಲ್ಲಿಯೂ ಬಂದರೆ ಹೇಗಿರುತ್ತೆ...? ಅಂಥದ್ದೊಂದು ವಿಶೇಷತೆಯನ್ನು ಪ್ರಚುರ ಪಡಿಸುತ್ತಿರುವವರು ರಂಜನಿ ರಾಘವನ್. ಈಗಾಗಲೇ ವೆರೈಟಿ ಸೀರೆಗಳು ನಿಮ್ಮ ಗಮನಕ್ಕೂ ಬಂದಿರುತ್ತೆ. ಆ ಸೀರೆಗಳನ್ನು ನೀವೂ ತೆಗೆದುಕೊಂಡು ಇರುತ್ತೀರಿ. ಅಪ್ಪು ಫೋಟೊ ಇರುವಂತ ಸೀರೆ, ಅಣ್ಣಾವ್ರ ಫೋಟೊಗಳಿರುವಂತ ಸೀರೆ, ಪೇಪರ್ ಡಿಸೈನ್ ಹೀಗೆ ಅನೇಕ ಡಿಸೈನ್‌ಗಳು, ಅದರಲ್ಲೂ ಏನೊ ಇದೆಯಲ್ಲ ಇದರಲ್ಲಿ ಅಂತ ಹುಡುಕುವ ಸೀರೆಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಈಗ ಗೂಗಲ್ ಸೀರೆಯೂ ಬಂದಿದೆ. ಇಡೀ ಸೀರೆಯಲ್ಲಿ ಗೂಗಲ್ ನದ್ದೇ ಪ್ರಿಂಟ್. ಥೇಟ್ ಸಿಸ್ಟಮ್ ನೋಡಿದಂತ ಭಾವ ಬರುತ್ತಿದೆ. ಆ ಸೀರೆಯಲ್ಲಿ ರಂಜನಿ ರಾಘವನ್ ಮಿಂಚಿದ್ದಾರೆ.

ಸೀರೆಯಲ್ಲಿರುವ ಅಕ್ಷರ ಹುಡುಕುವ ಸಾಹಸ

ಸೀರೆಯಲ್ಲಿರುವ ಅಕ್ಷರ ಹುಡುಕುವ ಸಾಹಸ

ಸದ್ಯ ರಂಜನಿ ರಾಘವನ್ ಹಾಕಿರುವ ಸೀರೆಯಲ್ಲಿ ಗೂಗಲ್ ಎಂಬುದು ದೊಡ್ಡ ಅಕ್ಷರದಲ್ಲಿ ಕಾಣಿಸುತ್ತಿದೆ. ಸೀರೆಯ ಲುಕ್ ಕೂಡ ತುಂಬಾನೇ ಅದ್ಭುತವಾಗಿದೆ. ಅದರಲ್ಲೂ ಈ ಸೀರೆಯಲ್ಲಿ ರಂಜನಿ ರಾಘವನ್ ವಿಭಿನ್ನವಾಗಿ, ಮತ್ತೆ ಮತ್ತೆ ನೋಡಬೇಕೆಂಬ ರೀತಿಯಲ್ಲಿಯೇ ಕಾಣುತ್ತಿದ್ದಾರೆ. ಅವರ ಫಾಲೋವರ್ಸ್ ಅವರನ್ನು ನೋಡುವುದಲ್ಲದೆ ಆ ಸೀರೆಯ ಬಗ್ಗೆ ಬಹಳ ತಲೆ ಕೆಡಿಸಿಕೊಂಡು ಬಿಟ್ಟಿದ್ದಾರೆ. ಅದಕ್ಕೆ ಕಾರಣ ಆ ಸೀರೆಯಲ್ಲಿ ಗೂಗಲ್ ಬಿಟ್ಟು ಮತ್ತಷ್ಟು ವಿಚಾರಗಳಿವೆ. ಆ ಸೀರೆಯಲ್ಲಿ ಬೇರೆ ಏನನ್ನೋ ಬರೆದಿದ್ದಾರೆ. ಆದರೆ ಅದೇನು ಎಂಬುದು ಯಾರ ಅರಿವಿಗೂ ಬರುತ್ತಿಲ್ಲ. ಇದೇ ಕಾರಣಕ್ಕೆ ಜೂಮ್ ಹಾಕಿ ಹಾಕಿ ಹುಡುಕಾಡುತ್ತಿದ್ದಾರೆ.

ರಂಜನಿ ಕೊಡುವ ಕ್ಯಾಪ್ಶನ್‌ಗೆ ಫಿದಾ

ರಂಜನಿ ಕೊಡುವ ಕ್ಯಾಪ್ಶನ್‌ಗೆ ಫಿದಾ

ಸಾಕಷ್ಟು ಜನ ಫೋಟೊ ಹಾಕುತ್ತಾರೆ. ಆದರೆ ಅದಕ್ಕೆ ಒಮ್ಮೊಮ್ಮೆ ಕ್ಯಾಪ್ಶನ್ ಕೊಡುವುದಕ್ಕೆ ಹೋಗಲ್ಲ. ಆದರೆ ರಂಜನಿ ಈ ಸೀರೆಯೊಂದಿಗೆ ಹಂಚಿಕೊಂಡಿರುವ ಫೋಟೊಗೆ ಕ್ಯಾಪ್ಶನ್ ಒಂದನ್ನು ನೀಡಿದ್ದಾರೆ. ಅದುವೆ "ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಎನ್ನುವವರು ಗೂಗಲ್ ಮೀ" ಎಂದು ಕ್ಯಾಪ್ಶನ್ ನೀಡಿದ್ದಾರೆ. ಅವರು ನೀಡುವ ಒಂದೊಂದು ಕ್ಯಾಪ್ಶನ್ ಅನ್ನು ಫಾಲೋವರ್ಸ್ ತುಂಬಾನೆ ಸೀರಿಯಸ್ ಆಗಿ ಗಮನಿಸುತ್ತಿರುವ ಆಗಿದೆ. ಅದಕ್ಕೆ ಕಮೆಂಟ್ ಬಾಕ್ಸ್ ತುಂಬಾ ರಂಜನಿ ಹಾಕುವ ಕ್ಯಾಪ್ಶನ್‌ಗಳಿಗೆ ಹೊಗಳಿಕೆಯ ಮಹಾಪೂರ ಸಿಕ್ಕಿದೆ.

ರಂಜನಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ ನೋಡಿ

ರಂಜನಿ ರಾಘವನ್ ಸದ್ಯ ಸಿನಿಮಾ, ಧಾರಾವಾಹಿ ಅಂತ ಬ್ಯುಸಿಯಾಗಿದ್ದಾರೆ. ಅವರು ಯಾವುದೇ ಧಾರಾವಾಹಿ‌ ಮಾಡಲಿ ಆ ಧಾರಾವಾಹಿಯ ಪಾತ್ರದಿಂದ ಸಾಕಷ್ಟು ಖ್ಯಾತಿ‌ ಪಡೆಯುತ್ತಾರೆ. ಆ ಪಾತ್ರದ ಟ್ರೆಂಡ್ ಕ್ರಿಯೇಟ್ ಮಾಡುತ್ತಾರೆ. ಅಷ್ಟು ಅಭಿಮಾನಿ ಬಳಗ ಗಳಿಸಿರುವ ರಂಜನಿ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 922 ಸಾವಿರ ಫಾಲೋವರ್ಸ್ ಇದ್ದಾರೆ. ರಂಜನಿ ನಟನೆಯ ಜೊತೆಗೆ ಬರಹಗಾರ್ತಿ ಕೂಡ. ಇತ್ತೀಚೆಗೆ ಅವರೇ ಬರೆದಿರುವ ಪುಸ್ತಕ ಕೂಡ ರಿಲೀಸ್ ಆಗಿದೆ.

More from Filmibeat

English summary
Serial Actress Ranjani Raghavan Google Saree New Photo Goes Viral. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X