'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ

ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ, ಶಂಕರ್ ನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ರೋಮಾಂಚನಗೊಳಿಸಿದೆ. ಶಂಕರ್ ನಾಗ್ ಅವರ ಮಾಸ್ಟರ್ ಪೀಸ್ ಎಂದೇ ಕರೆಯಲಾಗುವ ಈ ಧಾರಾವಾಹಿ, ದೂರದರ್ಶನದಲ್ಲಿ 1986ರಲ್ಲಿ ಪ್ರಸಾರವಾಗಿತ್ತು.

Recommended Video

ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

ಆದರೆ ಈ ಧಾರಾವಾಹಿ ಪ್ರಾರಂಭದಲ್ಲಿ ಇಂಗ್ಲಿಷ್ ಮತ್ತು ನಂತರ ಹಿಂದಿಯಲ್ಲಿ ಪ್ರಸಾರವಾಗಿತ್ತು. ಕನ್ನಡಿಗರೇ ನಿರ್ದೇಶಿಸಿದ, ಕನ್ನಡದವರೇ ನಿರ್ಮಾಪಕರಾಗಿದ್ದ, ಕನ್ನಡದ ಕಲಾವಿದರೇ ಹೆಚ್ಚಿದ್ದ ಈ ಧಾರಾವಾಹಿ, ಕನ್ನಡಿಗರಿಗೆ ಅವರ ಭಾಷೆಯಲ್ಲಿ ಸಿಕ್ಕಿರಲಿಲ್ಲ. ಸುಮಾರು ಎಂಟು ಹತ್ತು ವರ್ಷಗಳ ಹಿಂದಿನಿಂದಲೇ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಿ ತರುವ ಪ್ರಯತ್ನಗಳು ಆರಂಭವಾಗಿದ್ದವು. ವಿರೋಧ, ಅಡ್ಡಿ ಆತಂಕಗಳ ನಡುವೆ ಕೊನೆಗೂ ಈ ಪ್ರಯತ್ನ ಫಲಿಸಿದೆ. ಖಾಸಗಿ ವಾಹಿನಿಯಲ್ಲಿ ಮಾಲ್ಗುಡಿ ಡೇಸ್ ಪ್ರಸಾರವಾಗಲಿದೆ. ಮುಂದೆ ಓದಿ...

ಪ್ರಸಾರದ ದಿನಾಂಕ, ಸಮಯ

ಪ್ರಸಾರದ ದಿನಾಂಕ, ಸಮಯ

ಶಂಕರ್ ನಾಗ್ ನಿರ್ದೇಶನದ 'ಮಾಲ್ಗಡಿ ಡೇಸ್' ಧಾರಾವಾಹಿಯ ಕನ್ನಡ ಡಬ್ಬಿಂಗ್ ಅವತರಣಿಕೆಯು ಮೇ 11ರಿಂದ ಪ್ರಸಾರವಾಗಲಿದೆ. ವಾರದ ಐದು ದಿನ 'ಮಾಲ್ಗುಡಿ ಡೇಸ್' ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

2012ರಿಂದಲೂ ಆಂದೋಲನ

2012ರಿಂದಲೂ ಆಂದೋಲನ

ಉತ್ತಮ ಕಾರ್ಯಕ್ರಮಗಳು, ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವ ಮೂಲಕ ಕನ್ನಡಿಗರಿಗೆ ತಲುಪಿಸಬೇಕೆಂಬ ಹೋರಾಟ ದಶಕಗಳಿಂದ ನಡೆಯುತ್ತಿದೆ. ಹಾಗೆಯೇ ಕನ್ನಡಿಗರ ಹೆಮ್ಮೆಯ 'ಮಾಲ್ಗುಡಿ ಡೇಸ್'ಅನ್ನು ಕನ್ನಡದಲ್ಲಿ ಪ್ರಸಾರ ಮಾಡುವ ಸಂಬಂಧ 2012ರಿಂದಲೂ ಆಂದೋಲನ ನಡೆಯುತ್ತಿತ್ತು. ಅದಕ್ಕೆ ಜಯ ಸಿಕ್ಕಿದೆ ಎಂದು ಡಬ್ಬಿಂಗ್ ಪರ ಹೋರಾಟಗಾರರು ಸಂಭ್ರಮಿಸುತ್ತಿದ್ದಾರೆ.

ದೊಡ್ಡ ಗಣೇಶ್ ಸಂತಸ

ದೊಡ್ಡ ಗಣೇಶ್ ಸಂತಸ

ಮಾಲ್ಗುಡಿ ಡೇಸ್ ಕನ್ನಡದಲ್ಲಿ ಪ್ರಸಾರವಾಗುವುದನ್ನು 'ಬಿಗ್ ಬಾಸ್' ಸ್ಪರ್ಧಿಯಾಗಿದ್ದ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಸ್ವಾಗತಿಸಿದ್ದಾರೆ. 'ಒಳ್ಳೆ ಸುದ್ದಿ. ನಾನು ಇಂಡಿಯಾಗೆ ಆಡುವಾಗಲೂ ನನಗೆ ಹಿಂದಿ ಸರ್ಯಾಗಿ ಅರ್ಥ ಆಗ್ತಾ ಇರ್ಲಿಲ್ಲ. ಈಗಲೂ ಬರಲ್ಲ !! ಹೇಗೋ ನಮ್ಮವರೇ ಆಗ ಟೀಮ್ ನಲ್ಲಿ 5-6 ಜನ ಇದ್ದಿದ್ರಿಂದ ತೊಂದರೆ ಆಗ್ಲಿಲ್ಲ. ಈಗ ನಮ್ಮ ಶಂಕರಣ್ಣನ ಮಾಲ್ಗುಡಿಡೇಸ್ ಕನ್ನಡದಲ್ಲಿ ಬರ್ತಿರೋದು ಸಂತೋಷ. ಖಂಡಿತ ನೋಡ್ತೀನಿ' ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.

ಇದೇ ಮಹಾ ಸುದಿನ

ಇದೇ ಮಹಾ ಸುದಿನ

ಇದೇ ಮಹಾ ಸುದಿನ.! ಇದಕ್ಕಾಗಿ ನಾವು ಸುಮಾರು ವರ್ಷಗಳಿಂದ ಕಾದಿದ್ದು! ನಮ್ಮ ಶಂಕರಣ್ಣನ ಕನಸಿನ ಕೂಸು, ಇಡೀ ದೇಶಕ್ಕೆ ಆಗಿನ ಕಾಲದಲ್ಲಿಯೇ ಕನ್ನಡಿಗರ ಶಕ್ತಿ ತೋರಿದ ಕತೆ ಇದು. ಇದನ್ನು ಆಗುಮಾಡಿದ ಎಲ್ಲರಿಗೂ ತುಂಬಾ ನನ್ನೀ- ಶುಕಮುನಿ

More from Filmibeat

English summary
Shankar Nag directed Malgudi Days serial will be re telecasted on Zee Kannada in Kannada. Here is the date and time of of telecast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X