ಇದೇ ವೀಕೆಂಡ್‌ನಲ್ಲಿ ಕಿರುತೆರೆಯಲ್ಲಿ ಕಾಮಿಡಿ-ಹಾರರ್ ಸಿನಿಮಾ 'ಛೂಮಂತರ್' ನೋಡಿ; ಎಲ್ಲಿ? ಯಾವಾಗ?
ವೀಕೆಂಡ್ ಬಂತು ಅಂದರೆ, ವೀಕ್ಷಕರನ್ನು ಮನರಂಜಿಸುವುದಕ್ಕೆ ಮನರಂಜನಾ ವಾಹಿನಿಗಳು ತುದಿಗಾಲಲ್ಲಿ ನಿಲ್ಲುತ್ತವೆ. ಹೊಚ್ಚ ಹೊಸ ರಿಯಾಲಿಟಿ ಶೋಗಳನ್ನು, ಧಾರಾವಾಹಿಗಳನ್ನು ಪ್ರಸಾರ ಮಾಡಿ ಟಿವಿಯ ಮುಂದೆ ಕಟ್ಟಿ ಹಾಕುತ್ತವೆ. ಇದರೊಂದಿಗೆ ಕನ್ನಡದ ಹೊಸ ಸಿನಿಮಾಗಳನ್ನು ಪ್ರಸಾರ ಮಾಡಿ ರಂಜಿಸುತ್ತವೆ. ಈ ವಾರ ಕೂಡ ಕಿರುತೆರೆ ವೀಕ್ಷಕರಿಗೆ ಕಾಮಿಡಿ ಜೊತೆಗೆ ಹಾರರ್ ಸಿನಿಮಾ ಛೂಮಂತರ್ ಪ್ರಸಾರ ಆಗುತ್ತಿದೆ.
ಶರಣ್, ಅದಿತಿ ಪ್ರಭುದೇವ ಹಾಗೂ ಚಿಕ್ಕಣ್ಣ ನಟನೆಯ 'ಛೂಮಂತರ್' ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಥಿಯೇಟರ್‌ನಲ್ಲಿ ಹೊಸ ಸಿನಿಮಾಗಳು ಇಲ್ಲ ಅಂತ ವೀಕೆಂಡ್‌ನಲ್ಲಿ ಪರಭಾಷೆಯ ಸಿನಿಮಾ ಮೊರೆ ಹೋಗುವ ಅಗತ್ಯವಿಲ್ಲ. ಟಿವಿಯ ಮುಂದೆ ಕೂತು 'ಛೂಮಂತರ್' ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಶರಣ್ ಹಾಗೂ ಚಿಕ್ಕಣ್ಣ ಇದ್ಮೇಲೆ ನಗುವಿಗಂತೂ ಮೋಸವಿಲ್ಲ.

ಅಂದ್ಹಾಗೆ 'ಛೂಮಂತರ್' ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಮೇ 11 ಅಂದರೆ, ಮುಂಬರುವ ಭಾನುವಾರ ಮಧ್ಯಾಹ್ನ 3 ಗಂಟೆಗೆ ಈ ಸಿನಿಮಾವನ್ನು ಕಿರುತೆರೆಯಲ್ಲಿ ನೋಡಬಹುದು. ಇದೇ ಮೊದಲ ಬಾರಿಗೆ ಟೆಲಿವಿಷನ್ ವರ್ಲ್ಡ್ ಪ್ರೀಮಿಯರ್ ಆಗುತ್ತಿದ್ದು, ಕಾಮಿಡಿ ಜೊತೆಗೆ ಹಾರರ್ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡಬಹುದು ಎಂದು ಜೀ ಕನ್ನಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಹಾಗಿದ್ದರೆ, ಈ ಸಿನಿಮಾದಲ್ಲಿ ಏನೇನಿದೆ? ಯಾಕೆ ನೋಡಬೇಕು? ಅನ್ನೋದನ್ನು ನೋಡೋಣ.
'ಛೂಮಂತರ್' ಸಿನಿಮಾದ ಕಥೆಯೇನು?
'ಛೂಮಂತರ್' ಸಿನಿಮಾದಲ್ಲಿ ಗೌತಮ್ ಅಲಿಯಾಸ್ ಡೈನಮೊ (ಶರಣ್), ಆರ್ ಜೆ (ಚಿಕ್ಕಣ್ಣ) ಆಕಾಂಕ್ಷಾ (ಅದಿತಿ) ಹಾಗೂ ನಕುಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೆಲ್ಲರೂ ಸೇರಿ 'ಛೂಮಂತರ್ ಆ್ಯಂಡ್ ಕಂಪನಿ' ಮೂಲಕ ದೆವ್ವಗಳನ್ನು ಹುಡುಕುವ ಕೆಲಸ ಮಾಡುತ್ತಿರುತ್ತಾರೆ. ಇವರಿಗೆ ಆತ್ಮಗಳನ್ನು ಹುಡುಕಿ ಹುಡುಕಿ ಬೇಟೆಯಾಡುವುದೇ ಕೆಲಸ. ಭಾರತದ ಟಾಪ್ 10 ಪ್ರೇತಾತ್ಮಗಳ ಮನೆಗಳಲ್ಲಿ ಒಂದಾದ ಉತ್ತರಾಖಂಡದ ನೈನಿತಾಲ್‌ನ ಮಾರ್ಗನ್ ಹೌಸ್‌ಗೆ ಎಂಟ್ರಿ ಕೊಡುತ್ತಾರೆ. ತಮಾಷೆ ಮಾಡಿಕೊಂಡೇ ಹೋಗುವ ಈ ತಂಡ ದೆವ್ವಗಳ ಕಾಟ ಇರೋದು ಗೊತ್ತಾಗಿ ಸಿನಿಮಾ ಹಾರರ್ ಟಚ್ ಪಡೆದುಕೊಳ್ಳುತ್ತೆ. ಈ ದೆವ್ವಗಳ ಕಪಿಮುಷ್ಠಿಯಿಂದ ಹೇಗೆ ಹೊರ ಬರುತ್ತಾರೆ? ಅನ್ನೋದೇ ಸಿನಿಮಾ ಕಥೆ.

ಯಾರ್‍ಯಾರಿಗೆ ಯಾವ್ಯಾವ ಪಾತ್ರ?
ಇನ್ನೂ 'ಛೂಮಂತರ್' ಸಿನಿಮಾದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿವೆ. ಈ ನಾಲ್ಕು ಮಂದಿ ನಟರು ಯಾವ ಪಾತ್ರದಲ್ಲಿ ನಟಿಸಿದ್ದಾರೆ ಅನ್ನೋದನ್ನು ನೋಡೋಣ.
ಗೌತಮ್ Aka ಡೈನಮೋ ಪಾತ್ರದಲ್ಲಿ ಶರಣ್
ಆರ್‌ಜೆ ಪಾತ್ರದಲ್ಲಿ ಚಿಕ್ಕಣ್ಣ
ಆಕಾಂಕ್ಷಾ ಪಾತ್ರದಲ್ಲಿ ಅದಿತಿ ಪ್ರಭುದೇವ
ಕ್ಯಾತರೀನ್ ಪಾತ್ರದಲ್ಲಿ ಮೇಘನಾ ಗಾಂವ್ಕರ್
ನಕುಲ್ ಪಾತ್ರದಲ್ಲಿ ಕಿರಣ್
ಏನು ನಿರೀಕ್ಷೆ ಮಾಡಬಹುದು?
ಪ್ರಮುಖ ಪಾತ್ರದಲ್ಲಿ ನಟಿಸಿರುವ ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ಮಜಾ ಕೊಡುತ್ತೆ. ಇವರಿಬ್ಬರ ನಡುವಿನ ಕಾಮಿಡಿ ದೃಶ್ಯ ಹಾಗೂ ಡೈಲಾಗ್‌ಗಳನ್ನು ಎಂಜಾಯ್ ಮಾಡಬಹುದು. ಕಾಮಿಡಿ ಹಾಗೂ ಹಾರರ್ ಸನ್ನಿವೇಶಗಳು ಇಷ್ಟ ಆಗುತ್ತವೆ. 'ಕರ್ವ'ದಂತಹ ಸಿನಿಮಾ ಕೊಟ್ಟಿದ್ದ ನಿರ್ದೇಶಕ ನವನೀತ್ ಆಕ್ಷನ್ ಕಟ್ ಹೇಳಿದ್ದರಿಂದ ಸಿನಿಮಾದಲ್ಲಿ ಥ್ರಿಲ್ಲರ್ ನಿರೀಕ್ಷೆ ಮಾಡಬಹುದು. ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ, ಗುರುಕಿರಣ್, ಪ್ರಥಮ್, ಮೇಘನಾ ಗಾಂವ್ಕಾರ್, ರಜಿನಿ ಅಂತಹ ದೊಡ್ಡ ತಾರಾ ಬಳಗವಿದೆ. ಇನ್ನು ಆತ್ಮಗಳ ಕಾಟದಿಂದ ಗೌತಮ್ ಮತ್ತು ತಂಡ ಹೇಗೆ ಹೊರಗೆ ಬರುತ್ತಾರಾ? ಇಲ್ಲಾ ಅಲ್ಲಿಯೇ ಸಿಕ್ಕಿಕೊಳ್ಳುತ್ತಾರಾ ಅನ್ನೋದನ್ನು ಈ ವೀಕೆಂಡ್‌ನಲ್ಲಿ ನೋಡಿ ನೀವು ಎಂಜಾಯ್ ಮಾಡಬಹುದು.


Click it and Unblock the Notifications











