»   » ಮೋಹಕ ತಾರೆ 'ರಮ್ಯಾ' ಜೀವನಾಧಾರಿತ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ!

ಮೋಹಕ ತಾರೆ 'ರಮ್ಯಾ' ಜೀವನಾಧಾರಿತ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ತಾರೆಯರ ವೈಯಕ್ತಿಕ ಜೀವನ, ಅವರು ವಿದ್ಯಾರ್ಥಿಯಾಗಿ ಎಂಜಾಯ್ ಮಾಡಿದ ಅಪರೂಪದ ಕ್ಷಣಗಳು, ಪ್ರೀತಿ, ಮೊದಲ ಕ್ರಷ್, ಚಿತ್ರರಂಗದ ಏಳು-ಬೀಳಿನ ಬಗ್ಗೆ ತಿಳಿಯುವುದು ಎಂದರೇ ಎಲ್ಲರಿಗೂ ಕುತೂಹಲ. ಆ ಕುತೂಹಲಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಮೂಡಿಬರುತ್ತಿದೆ.

ಖ್ಯಾತ ನಿರೂಪಕ ಅಕುಲ್ ಬಾಲಾಜಿ ಸ್ಯಾಂಡಲ್ ವುಡ್ ತಾರೆಯರಿಗೆ ನಾವು ಮೇಲೆ ತಿಳಿಸಿದ ಎಲ್ಲಾ ವಿಷಯಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳುತ್ತ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಮನರಂಜನೆ ನೀಡುತ್ತಾರೆ. ಜೊತೆಗೆ ಸಿನಿಮಾಗೆ ಸಂಬಂಧಿಸಿದಂತೆ ತಾರೆಯರ ಕೆಲವೊಂದು ಮಹಾದಾಸೆಯನ್ನು ಬಾಯಿಬಿಡಿಸುತ್ತಾರೆ. ಅದೇ ರೀತಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸಜನಿ' ಖ್ಯಾತಿಯ ಶರ್ಮಿಳಾ ಮಾಂಡ್ರೆ ತಾವು ಅವಕಾಶ ಸಿಕ್ಕಲ್ಲಿ ಯಾರ ಜೀವನಾಧಾರಿತ ಚಿತ್ರ ಮಾಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

Sharmila Mandre shows intrest in 'Ramya's biopic film

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'Rapid Fire' ರೌಂಡ್ ನಲ್ಲಿ ಅಕುಲ್ ಬಾಲಾಜಿ 'ಯಾವುದಾದರೂ ಜೀವನಾಧಾರಿತ ಚಿತ್ರ ಮಾಡಲು ಅವಕಾಶ ಸಿಕ್ಕಲ್ಲಿ ಯಾರ ಜೀವನಾಧಾರಿತ ಚಿತ್ರ ಆಯ್ಕೆ ಮಾಡುತ್ತೀರಿ' ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಶರ್ಮಿಳಾ ಮಾಂಡ್ರೆ ನಟಿ ರಮ್ಯಾ ಲೈಫ್ ಎಂದು ಉತ್ತರಿಸಿದ್ದಾರೆ.

ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಅವರು ಅಂದ್ರೆ ಇಷ್ಟ. ಅವರ ಸಂಪೂರ್ಣ ಜೀವನಾಧಾರಿತ ಚಿತ್ರದಲ್ಲಿ ಅವರ ಪಾತ್ರ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಆದ್ರೆ ಇದು ಒಂದು ಪ್ರಶ್ನೆಗೆ ತಕ್ಷಣ ಉತ್ತರ ನೀಡುವ ಗೇಮ್ ಎಂಬುದನ್ನು ಮರೆಯೋಹಾಗಿಲ್ಲ. ಇನ್ನು 'Rapid Fire' ರೌಂಡ್ ನಲ್ಲಿಯೇ ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಯಾರು ಎಂಬ ಪ್ರಶ್ನೆಗೆ ನಟ ಧನಂಜಯ್ ಎಂದು ಶರ್ಮಿಳಾ ಉತ್ತರಿಸಿದರು.[ಶಿವಣ್ಣನ ಚಿತ್ರದಲ್ಲಿ ಸೊಂಟ ಬಳುಕಿಸಿದ ಶರ್ಮಿಳಾ ಮಾಂಡ್ರೆ.!]

English summary
Sharmila Mandre says in 'Super TalkTime' that, 'She would like to play 'Ramya' in her Biopic'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada