ಕ್ರೇಜಿಸ್ಟಾರ್‌ಗೆ ಯಾವ ಹೀರೋಯಿನ್ ಕೆಮಿಸ್ಟ್ರಿ ಇಷ್ಟ? ಖುಷ್ಬು, ಮೀನಾ, ಶಿಲ್ಪಾ ಶೆಟ್ಟಿ.. ಜೂಹಿ ಮಿಸ್ಸು!
ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಇರುವ ನಟ. ಇವರೇ ನೇರವಂತಿಕೆಯನ್ನು ಇಷ್ಟ ಪಡುವ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ವೇದಿಕೆ ಮೇಲೆ ಅದ್ಯಾರೇ ಇರಲಿ, ಕ್ರೇಜಿಸ್ಟಾರ್ ತಮಗೆ ಏನು ಹೇಳಬೇಕು ಅಂತ ಅನಿಸುತ್ತೋ ಅದನ್ನು ಹೇಳದೆ ಬಿಡುವುದಿಲ್ಲ. ಈಗ 'ಭರ್ಜರಿ ಬ್ಯಾಚುಲರ್ ಸೀಸನ್ 2'ನಲ್ಲೂ ಇಂತಹದ್ದೇ ವಿಷಯವನ್ನು ಪ್ರಸ್ತಾಪ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ.
'ಭರ್ಜರಿ ಬ್ಯಾಚುಲರ್ ಸೀಸನ್ 2' ರಿಯಾಲಿಟಿ ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ (Rachita Ram)ಜಡ್ಜ್‌ಗಳಾಗಿದ್ದಾರೆ. ಇಲ್ಲಿ ಬರುವ ಸ್ಪರ್ಧಿಗಳ ಜೊತೆ ಇವರು ಕೂಡ ಆಗಾಗ ವೇದಿಕೆಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ವೇಳೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಇಬ್ಬರೂ ಅವರ ವೃತ್ತಿ ಬದುಕಿನ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಜೀ ಕನ್ನಡ ಇತ್ತೀಚೆಗೆ ಇದೇ 'ಭರ್ಜರಿ ಬ್ಯಾಚುಲರ್ ಸೀಸನ್ 2' ಪ್ರೋಮೊ ರಿಲೀಸ್ ಮಾಡಿದೆ. ಆ ವೇದಿಕೆ ಮೇಲೆ ಕ್ರೇಜಿಸ್ಟಾರ್ ಹಾಗೂ ಡಿಂಪಲ್ ಕ್ವೀನ್ ಇಬ್ಬರೂ ತಮ್ಮ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತಾಡಿದ್ದಾರೆ. ರಚಿತಾ ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತಾಡಿದರೇ, ರವಿಚಂದ್ರನ್ ತಮ್ಮ ಆನ್‌ಸ್ಕ್ರೀನ್ ಕೆಮಿಸ್ಟ್ರಿಗೆ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಶಿಲ್ಪಾ ಶೆಟ್ಟಿ (Shilp Shetty)ಬಗ್ಗೆ ಹೇಳಿದ ಮಾತು ವೈರಲ್ ಆಗುತ್ತಿದೆ. ಅಂತಹದ್ದೇನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರೊಮ್ಯಾಂಟಿಕ್ ಸಿನಿಮಾಗಳನ್ನು ತೆಗೆಯೋದ್ರಲ್ಲಿ ಕ್ರೇಜಿಸ್ಟಾರ್ ಅನ್ನು ಮೀರಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರವಿಚಂದ್ರನ್ ಸಿನಿಮಾದ ಹಾಡುಗಳು, ಆ ಸೆಟ್ಟು, ನಾಯಕಿಯೊಂದಿಗಿನ ಕೆಮಿಸ್ಟ್ರಿಯನ್ನು ಇದೂವರೆಗೂ ಯಾರಿಗೂ ಮ್ಯಾಚ್ ಮಾಡೋಕೆ ಆಗಿಲ್ಲ. ಪರಭಾಷೆಯಿಂದ ನಾಯಕಿಯರನ್ನು ಕರೆ ತಂದು ಲವ್ ಸ್ಟೋರಿಗಳನ್ನು ಮಾಡುವ ಟ್ರೆಂಡ್ ಹುಟ್ಟಾಕಿದ್ದು ಕೂಡ ರವಿಚಂದ್ರನ್ ಅವರೇ. ಹೀಗಾಗಿ 'ಭರ್ಜರಿ ಬ್ಯಾಚುಲರ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ ಇಬ್ಬರಿಗೂ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತಾಡಿದ್ದಾರೆ.
ಆನ್‌ಸ್ಕ್ರೀನ್‌ನಲ್ಲಿ ಯಾರೊಂದಿಗೆ ಬೆಸ್ಟ್ ಕೆಮಿಸ್ಟ್ರಿ ಇರುತ್ತೆ ಅಂತ ಅನಿಸುತ್ತೆ ಎಂದು ನಿರಂಜನ್ ದೇಶಪಾಂಡೆ ರಚಿತಾ ರಾಮ್ ಅವರನ್ನು ಕೇಳಿದ್ದರು. ಅದಕ್ಕೆ ರಚಿತಾ ರಾಮ್ ಒಂದೂ ಕ್ಷಣವೂ ಯೋಚನೆ ಮಾಡಿದೆ "ದರ್ಶನ್ ಸರ್" ಎಂದು ಹೇಳಿದ್ದಾರೆ. "ಅದನ್ನು ನಾನು ಹೇಳುವ ಅವಶ್ಯಕತೆನೇ ಇಲ್ಲ. ಅದು ಇಡೀ ಕರ್ನಾಟಕಕ್ಕೆ ಗೊತ್ತು." ಎಂದು ರಚಿತಾ ರಾಮ್ ತಮ್ಮ ಹಾಗೂ ದರ್ಶನ್ ಅವರ ಕೆಮಿಸ್ಟ್ರಿ ಬಗ್ಗೆ ನಾಚುತ್ತಲೇ ಹೇಳಿಕೊಂಡಿದ್ದಾರೆ.
ರಚಿತಾ ರಾಮ್ ಬಳಿಕ ನಿರಂಜನ್ ಕ್ರೇಜಿಸ್ಟಾರ್ ರವಿಚಂದ್ರನ್ ಕಡೆಗೆ ವಾಲಿದರು. ಕೆಮಿಸ್ಟ್ರಿಗೆ ಪ್ರೊಫೆಸರ್ ಆಗಿರುವ ರವಿ ಸರ್‌ನ ಕೇಳೋಣ ಅಂದರೆ, ನೂರು ಆಯ್ಕೆ ಇರುತ್ತೆ. ಆದರೂ ಕೇಳುತ್ತೇನೆ. ಆಗ ರಚಿತಾ ರಾಮ್ ನಾವು ತೆರೆಮೇಲೆ ನೋಡಿದಾಗ ಎಷ್ಟು ಬ್ಯೂಟಿಫುಲ್ ಆಗಿರುತ್ತೆ ಕೆಮಿಸ್ಟ್ರಿ ಅಂತ ಅನಿಸುತ್ತೆ. ಅದರಲ್ಲಿ ಟಾಪ್ 1 ಅಂತ ಅನಿಸೋದು ಯಾರದ್ದು? ಎಂದು ರಚಿತಾ ರಾಮ್ ಪ್ರಶ್ನೆ ಮಾಡಿದ್ದರು. ಆ ವೇಳೆ ನಿರೂಪಕ ನಿರಂಜನ್ ಟಾಪ್ 3 ಯಾರು? ಹೇಳಿ ಅಂದಾಗ ಕ್ರೇಜಿ ಸ್ಟಾರ್ ತಮ್ಮ ಜಮಾನಕ್ಕೆ ಹೊರಟು ಹೋಗಿದ್ದರು.
"ಮೊದಲು ಖುಷ್ಭು ಕಣೋ. ಸೆಕೆಂಡ್ ಮೀನಾ ಬರುತ್ತಾರೆ. ಮೂರನೆಯವರು ಶಿಲ್ಪಾ ಶೆಟ್ಟಿ. ಮೊದಲು ಒಂದು ವಾರ ಬರಲಿಲ್ಲ. ಆಮೇಲೆ ರವಿಚಂದ್ರನ್ ಅಂದರೆ ಏನು ಅಂತ ಗೊತ್ತಾಯ್ತು. ಆಮೇಲೆ ಬಂದರು." ಎಂದು ಕ್ರೇಜಿ ಸ್ಟಾರ್ 'ಪ್ರೀತ್ಸೋದ್ ತಪ್ಪಾ' ಸಿನಿಮಾದ ಶೂಟಿಂಗ್ ವೇಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











