ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆ: ಒಂದೇ ವೇದಿಕೆ ಮೇಲೆ ಶಿವಣ್ಣ, ಪ್ರಭುದೇವ ಮಸ್ತ್ ಡ್ಯಾನ್ಸ್ !
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕೂಡ ಒಂದು. ಶಿವರಾಜ್‌ಕುಮಾರ್, ರಕ್ಷಿತಾ, ವಿಜಯ್ ರಾಘವೇಂದ್ರ, ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯರಂತಹ ಘಟಾನುಘಟಿಗಳು ಇರುವಾಗ ವೇದಿಕೆ ಅದ್ಧೂರಿಯಾಗಿ ಇರುತ್ತೆ.
ಇನ್ನೊಂದು ಕಡೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಸ್ಪರ್ಧಿಗಳ ಮಸ್ತ್ ಪರ್ಫಾಮೆನ್ಸ್ ಕಿರುತೆರೆ ಅಭಿಮಾನಿಗಳನ್ನು ರಂಜಿಸಿದೆ. ಇಷ್ಟು ದಿನ ಟಿಆರ್‌ಪಿ ಲಿಸ್ಟ್‌ನಲ್ಲಿ ಟಾಪ್ 5 ಒಳಗೆ ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಕಾಯ್ದುಕೊಂಡಿತ್ತು.

ಆಗಾಗ ಬಂದು ಹೋಗುವ ಅತಿಥಿಗಳು. ಅವರ ಮಸ್ತ್ ಮಸ್ತ್ ಮಾತು. ಭರ್ಜರಿ ಸ್ಟೆಪ್ಸ್ ನೋಡುಗರಿಗೆ ಮತ್ತಷ್ಟು ಕಿಕ್ ಕೊಡುತ್ತಿತ್ತು. ಇದೇ ಶೋ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇದೇ ವೀಕೆಂಡ್‌ನಲ್ಲಿ ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ಸಿಗಲಿದೆ.
ಸುಮಾರು 22 ವಾರಗಳಿಂದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಸೀಸನ್ 7 ಯಶಸ್ವಿಯಾಗಿ ನಡೆಯುತ್ತಿದೆ. ಸದ್ಯ ಈ ರಿಯಾಲಿಟಿ ಶೋ ಇದೀಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿದ್ದ ಈ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಹೆಜ್ಜೆ ಹಾಕಲು ಬಯಸುವ ಪ್ರತಿಭೆಗಳಿಗೆ ವೇದಿಕೆಯನ್ನು ವದಗಿಸಿಕೊಟ್ಟಿದೆ.
ಈ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದಕ್ಕೆ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್, ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್, ಕ್ರೇಜಿ ಕ್ವೀನ್ ರಕ್ಷಿತಾ, ವಿಜಯ್ ರಾಘವೇಂದ್ರ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಇದ್ದಾರೆ. ಈ ಮಹಾ ತೀರ್ಪುಗಾರರ ಸಮ್ಮುಖದಲ್ಲಿ 22 ವಾರ, 22 ವಿಭಿನ್ನ ಕಾನ್ಸೆಪ್ಟ್‌ಗಳೊಂದಿಗೆ 13 ಜೋಡಿಗಳ ಹೆಜ್ಜೆ ಹಾಕಿದ್ದವು.

ಈ 13 ಜೋಡಿಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ಬರೋಬ್ಬರ 6 ಜೋಡಿಗಳು ಬಂದಿವೆ. ಈ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವೇದಿಕೆ ಮೇಲೆ ಚಿತ್ರರಂಗದ ಗಣ್ಯರು ಬಂದು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಜನಪ್ರಿಯರಾಗಿರುವ ಕೊರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ ಕೂಡ ಈ ವೇದಿಕೆ ಬಂದಿದ್ದಾರೆ. ಆ ವೇಳೆ ಶಿವಣ್ಣನ ಜೊತೆ ವೇದಿಕೆ ಹಂಚಿಕೊಂಡು ಮತ್ತೆ ವೇದಿಕೆಗೆ ಬರುವುದಾಗಿ ಹೇಳಿದ್ದರು. "ಕರ್ನಾಟಕ ನನ್ನ ತವರು, ಪುನೀತ್ ಅಂತಹ ಸಾರ್ವಕಾಲಿಕ ಶ್ರೇಷ್ಟ ಡ್ಯಾನ್ಸರ್ ಅನ್ನು ಸ್ಮರಿಸುತ್ತ, ಅವರಿಗಾಗೇ ಕಾರ್ಯಕ್ರಮ ಆಯೋಜಿಸುವ ಮನೋಭಾವ ನಮ್ಮ ಕರುನಾಡಿನಲ್ಲಿ ಮಾತ್ರ ಸಾಧ್ಯ" ಎಂದಿದ್ದರು. ಅಲ್ಲದೆ ಗ್ರ್ಯಾಂಡ್ ಫಿನಾಲೆಗೆ ಬರುವುದಾಗಿ ಸ್ವಯಂ ಪ್ರೇರಿತರಾಗಿ ಹೇಳಿದ್ದರು.
ಮಾತು ಕೊಟ್ಟಂತೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫಿನಾಲೆಗೆ ಪ್ರಭುದೇವ ಬಂದಿದ್ದಾರೆ. ಶಿವಣ್ಣ, ವಿಜಯ ರಾಘವೇಂದ್ರ, ರಕ್ಷಿತಾ ಜೊತೆ ನಾಟನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಂದ್ಹಾಗೆ ಈ ಫಿನಾಲೆಯಲ್ಲಿ ಗೆದ್ದವರಿಗೆ ಪವರ್ ಸ್ಟಾರ್ ಟ್ರೋಫಿ ಧಕ್ಕಲಿದೆ. ಈ ಪವರ್ ಸ್ಟಾರ್ ಟ್ರೋಫಿ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆಗೆ ಉತ್ತರ ಇದೇ ವೀಕೆಂಡ್‌ನಲ್ಲಿ ಗೊತ್ತಾಗಲಿದೆ.


Click it and Unblock the Notifications











